ಮಂಗಳೂರು:(ಡಿ.21) ಅಪ್ರಾಪ್ತೆ ಹಾಗೂ ವಿವಾಹಿತೆಯ ಸ್ನಾನ ಮಾಡುತ್ತಿರುವುನ್ನು ಮೊಬೈಲ್‌ನಲ್ಲಿ ವೀಡಿಯೋ ಚಿತ್ರೀಕರಿಸಿದ ಆರೋಪಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್‌ಟಿಎಸ್‌ಸಿ -1 (ಪೋಕ್ಸೋ) ನ್ಯಾಯಾಲಯ 5 ವರ್ಷಗಳ ಕಾರಾಗೃಹ ಶಿಕ್ಷೆ 15 ಸಾವಿರ ರೂ. ದಂಡ ವಿಧಿಸಿದೆ.
ಇದನ್ನೂ ಓದಿ: ಮಂಗಳೂರು: MRPL ವತಿಯಿಂದ ಎಂಡೋಸಲ್ಫಾನ್ ಫಲಾನುಭವಿಗಳಿಗೆ ಕೃತಕ ಕಾಲು ಜೋಡಣಾ ಶಿಬಿರ
ಶಿಕ್ಷೆಗೊಳಗಾದ ಅಪರಾಧಿಯನ್ನು ಮಂಗಳೂರಿನ ಸ್ಯಾಂಡ್ ಪಿಟ್ ಬೆಂಗ್ರೆ ನಿವಾಸಿ ಮುಹಮ್ಮದ್ ರಂಶೀದ್ ಅಲಿಯಾಸ್ ರಮ್ಶಿ ಎಂದು ಗುರುತಿಸಲಾಗಿದೆ.
2024ರ ಜು.5 ಮತ್ತು 7ರಂದು ರಾತ್ರಿ ಆರೋಪಿ ರಂಶೀದ್ ಅಪ್ರಾಪ್ತೆ ಮತ್ತು ವಿವಾಹಿತೆ ಮನೆಯ ಸ್ನಾನಗೃಹದಲ್ಲಿ ಸ್ನಾನ ಮಾಡುತ್ತಿರುವ ವೀಡಿಯೊ ಚಿತ್ರೀಕರಿಸಿದ್ದನು. ಜು. 16ರಂದು ಇನ್ನೊಂದು ಮನೆಯ ಟೆರೇಸ್ ಮೇಲೆ ವೀಡಿಯೊ ಮಾಡುವ ಉದ್ದೇಶದಿಂದ ಹೋಗಿದ್ದಾನೆ.
ಆ ಮನೆಯವರು ಗಮನಿಸಿದ್ದರಿಂದ ಈತ ಅಲ್ಲಿಂದ ಪರಾರಿಯಾಗಿದ್ದಾನೆ. ಈ ವೇಳೆ ಮೊಬೈಲ್ ಕೆಳಗೆ ಬಿದ್ದಿದೆ. ಮನೆಯವರು ಆತನನ್ನು ಪತ್ತೆಹಚ್ಚಿ ಆತನ ಮೂಲಕವೇ ಮೊಬೈಲ್ ಲಾಕ್ ತೆಗೆಸಿ ನೋಡಿದಾಗ ಬಾತ್‌ರೂಂನಲ್ಲಿ ಸ್ನಾನ ಮಾಡುತ್ತಿದ್ದ ವೀಡಿಯೊ ಪತ್ತೆಯಾಗಿದೆ. ಮಹಿಳೆ ನೀಡಿರುವ ದೂರಿನಂತೆ ಆತನ ವಿರುದ್ಧ ಪಣಂಬೂರು ಠಾಣೆಯಲ್ಲಿ ದೂರು ದಾಖಲಾಗಿತ್ತು.
ಸದ್ಯ ಆರೋಪಿ ರಂಶೀದ್ ಅಲಿಯಾಸ್ ರಮ್ಶಿಗೆ ಶಿಕ್ಷೆ ಪ್ರಕಟವಾಗಿದೆ. ದಂಡ ಪಾವತಿಸಲು ವಿಫಲವಾದಲ್ಲಿ ಹೆಚ್ಚುವರಿಯಾಗಿ ಒಂದು ವರ್ಷ ಸಾದಾ ಜೈಲು ಶಿಕ್ಷೆ ಹಾಗೂ 5 ಸಾವಿರ ರೂ. ಹೆಚ್ಚುವರಿ ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ. ಆರೋಪಿಯು ಜಾಮೀನು ಪಡೆಯಲು ಸಾಧ್ಯವಾಗದ ಕಾರಣ ಕಳೆದ ಐದು ತಿಂಗಳಿನಿಂದ ನ್ಯಾಯಾಂಗ ಬಂಧನದಲ್ಲಿದ್ದ. ಈ ಸಮಯದಲ್ಲಿ, ವಿಚಾರಣೆ ಪೂರ್ಣಗೊಂಡಿತು, ಮತ್ತು ಅವನ ಅಪರಾಧ ಸಾಬೀತಾಗಿದೆ.