ಉಡುಪಿ:(ಡಿ.22) ಒಂದಲ್ಲ ಎರಡಲ್ಲ ಕಳೆದ 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ LPC ವಾರಂಟ್ ಆಸಾಮಿಯನ್ನು ಪೊಲೀಸರು ದಸ್ತಗಿರಿ ಮಾಡಿದ್ದಾರೆ.
ಇದನ್ನೂ ಓದಿ: ಉಡುಪಿ: ತ್ರಾಸಿ ಬೀಚ್ ನಲ್ಲಿ ಟೂರಿಸ್ಟ್ ಬೋಟ್ ಪಲ್ಟಿ
ನವೆಂಬರ್, 18, 2009 ರಂದು ಬೆಳಿಗ್ಗೆ 06-30 ರ ಸಮಯ ಉಡುಪಿ ಇಂದ್ರಾಳಿ ರೈಲ್ವೆ ನಿಲ್ದಾಣದ ಬಳಿ ಅಕ್ರಮವಾಗಿ ಗೋವಾ ಮದ್ಯವನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಕೇರಳ ರಾಜ್ಯದ ತ್ರಿಶ್ಶೂರು ಜಿಲ್ಲೆಯ ಚಾಲಕುಡಿಯ ದಯಾನಂದ ಎಂಬಾತನನ್ನು ಅಂದಿನ ಉಡುಪಿ ಜಿಲ್ಲಾ ಅಬಕಾರಿ ಮತ್ತು ಲಾಟರಿ ನಿಷೇಧ ದಳದ ಇನ್ಸ್ಪೆಕ್ಟರ್ C E ತಿಮ್ಮಯ್ಯ ಮತ್ತು ಸಿಬ್ಬಂದಿ ರವರು ದಸ್ತಗಿರಿ ಮಾಡಿ
ಆತನಿಂದ ರೂ 50,000/- ಮೌಲ್ಯದ 750 ML ನ 166 ಬ್ರಾಂಡಿ ಬಾಟಲಿಗಳನ್ನು, 750 ML ನ 36 ಬ್ರಾಂಡಿ ಬಾಟಲಿಗಳನ್ನು ವಶಕ್ಕೆ ಪಡೆದಿದ್ದರು. ಆತನನ್ನು ದಸ್ತಗಿರಿ ಮಾಡಿ CEN ಪೊಲೀಸ್ ಪ್ರಕರಣ ದಾಖಲಿಸಿ ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಬಳಿಕ ಆರೋಪಿಯು ನ್ಯಾಯಾಲಯದಿಂದ ಜಾಮೀನು ಪಡೆದು ಮುಂದಕ್ಕೆ ನ್ಯಾಯಾಲಯದ ವಿಚಾರಣಾ ಸಮಯ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ.
ನ್ಯಾಯಾಲಯವು ಆರೋಪಿ ವಿರುದ್ಧ LPC ವಾರಂಟನ್ನು ಹೊರಡಿಸಿತ್ತು.ಇದೀಗ ಪೊಲೀಸರ ತಂಡ ಆರೋಪಿ ದಯಾನಂದ ನನ್ನು ಆತನ ಮನೆಯಾದ ಕೇರಳ ರಾಜ್ಯದ ತ್ರಿಶ್ಯೂರು ಜಿಲ್ಲೆಯ ಚಾಲಕುಡಿ ಎಂಬಲ್ಲಿ ವಶಕ್ಕೆ ಪಡೆದಿದ್ದಾರೆ. ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆತನಿಗೆ ದಿನಾಂಕ 30-12-2024ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.