Fri. Dec 27th, 2024

Surathkal: ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ಬೈಕ್ ಚಲಾಯಿಸಿ ವಾಹನಕ್ಕೆ ಡಿಕ್ಕಿ ಹೊಡೆದ ವಿದ್ಯಾರ್ಥಿ – ತನ್ನ ಮೇಲೆ ಕೇಸ್ ಆಗುತ್ತೆ ಎಂದು ಹೆದರಿ ವಿದ್ಯಾರ್ಥಿ ಆತ್ಮಹತ್ಯೆ!!!

ಸುರತ್ಕಲ್:(ಡಿ.22) ಸುರತ್ಕಲ್ ನಲ್ಲಿ ಕಳೆದ ಡಿಸೆಂಬರ್.11ರಂದು ವಿದ್ಯಾರ್ಥಿಗಳು ದ್ವಿಚಕ್ರ ವಾಹನ ಚಲಾಯಿಸುತ್ತಾ ಅಪಘಾತಕ್ಕೀಡಾಗಿದ್ದರು. ಆದರೆ ಆ ವಿದ್ಯಾರ್ಥಿ ಬಳಿ ಲೈಸೆನ್ಸ್ ಇರಲಿಲ್ಲ. ದುರಂತವೆಂದರೆ ಇದೀಗ ಆ ವಿದ್ಯಾರ್ಥಿ ತನ್ನ ಮೇಲೆ ಕೇಸ್ ಆಗಬಹುದು ಎಂದು ಹೆದರಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇದನ್ನೂ ಓದಿ: Viral video: ಪ್ರಿಯಕರನ ಜೊತೆ ಅರೆನಗ್ನ ಸ್ಥಿತಿಯಲ್ಲಿದ್ದಾಗ ದಿಢೀರನೇ ಎಂಟ್ರಿ ಕೊಟ್ಟ ಗಂಡ

ಘಟನೆ ಸುರತ್ಕಲ್ ಸಮೀಪದ ತಡಂಬೈಲ್ ಎಂಬಲ್ಲಿ ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ದ್ವಿಚಕ್ರ ವಾಹನ ಚಲಾಯಿಸಿ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದಿದ್ದ ವೆಂಕಟ್ರಮಣ ಕಾಲೊನಿ ನಿವಾಸಿ ಮೋಹನ್ ಆಚಾರ್ಯ ಅವರ ಪುತ್ರ ಧನುಷ್ (20) ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಧನುಷ್ ಡಿಸೆಂಬರ್.11 ರಂದು ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ವೇಳೆ ಅಪಘಾತ ನಡೆಸಿದ್ದ. ಆತನಿಗೆ ವಾಹನ ಚಾಲನಾ ಪರವಾನಗಿ ಇರಲಿಲ್ಲ. ಅಪಘಾತ ನಡೆದ ಮತ್ತೊಂದು ದ್ವಿಚಕ್ರ ವಾಹನ ಸವಾರನೊಂದಿಗೆ ಮಾತುಕತೆ ನಡೆದು

ಆತನಿಗೆ ಹಣ ನೀಡಲು ವ್ಯವಸ್ಥೆಯಾಗದ ಕಾರಣ ಹಾಗೂ ಇದರಿಂದ ಕೇಸ್ ಆದರೆ ತೊಂದರೆಯಾಗುತ್ತದೆ ಎಂದು ಹೆದರಿ ಮನೆಯಲ್ಲಿ ಯಾರೂ ಇಲ್ಲದಾಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *