ಉಡುಪಿ :(ಡಿ.23) ತ್ರಾಸಿ ಬೀಚ್ ನಲ್ಲಿ ಬೋಟ್ ಮುಳುಗಡೆಯಾಗಿ ಕಣ್ಮರೆಯಾಗಿದ್ದ ರೈಡರ್ ನ ಮೃತದೇಹ ತ್ರಾಸಿ ಸಮೀಪದ ಹೊಸಪೇಟೆಯಲ್ಲಿ ಪತ್ತೆಯಾಗಿದೆ.
ಮೃತ ವ್ಯಕ್ತಿ ಉತ್ತರ ಕನ್ನಡ ಮೂಲದ ರವಿದಾಸ್ 36 ಗಂಟೆಗಳ ಬಳಿಕ ರವಿ ಮೃತದೇಹ ಪತ್ತೆಯಾಗಿದೆ. ಪ್ರವಾಸಿಗ ಪ್ರಶಾಂತ್ ನನ್ನು ರೈಡ್ ಗೆ ರವಿದಾಸ್ ಕರೆದುಕೊಂಡು ಹೋಗಿದ್ದರು.
ಲೈಫ್ ಜ್ಯಾಕೆಟ್ ನಿಂದ ಬೆಂಗಳೂರು ಮೂಲದ ಪ್ರಶಾಂತ್ ಪಾರಾಗಿದ್ದನು.
ಸ್ಥಳೀಯ ಮೀನುಗಾರರಾದ ಶಾಸ ಖಾರ್ವಿ ಹಾಗೂ ಮೋಹನ ಖಾರ್ವಿ ಕಣ್ಣಿಗೆ ಮೃತದೇಹ ಕಾಣಿಸಿಕೊಂಡಿದೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.