ಬೆಳ್ತಂಗಡಿ:(ಡಿ.27) ಬೆಳ್ತಂಗಡಿ ತಾಲೂಕಿನ ಮೀನು ಕಳ್ಳರ ಹಾವಳಿ ಜಾಸ್ತಿಯಾಗಿದೆ. ಕೆಮಿಕಲ್ ಹಾಕಿ ಮೀನು ಹಿಡಿದು ಗೂಡಂಗಡಿಗಳ ಬಳಿ ಕುಳಿತು ಮಾರಾಟ ಮಾಡುತ್ತಿದ್ದಾರೆ. ಬೇರೆ ಊರುಗಳಿಂದ ಬಂದು ದಕ್ಷಿಣ ಕನ್ನಡ ಜಿಲ್ಲೆಯ ಆಸು ಪಾಸಿನ ನದಿಗಳಲ್ಲಿ ಕೆಮಿಕಲ್ ಹಾಕಿ ಮೀನು ಹಿಡಿದು ಅಲ್ಲಿನ ಜನರಿಗೆ ಮಾರುವ ಕೆಲಸವನ್ನು ಮಾಡುತ್ತಿದ್ದಾರೆ.
ಇದನ್ನೂ ಓದಿ: ಮಂಗಳೂರು: ಹೊಸ ವರ್ಷದ ಪಾರ್ಟಿಗೆ ವಿರೋಧ..!
ಎನ್ ಆರ್ ಪುರ, ಕೊಪ್ಪ, ತೀರ್ಥಹಳ್ಳಿ, ಶಿವಮೊಗ್ಗ ಪ್ರದೇಶಗಳಿಂದ ಬಂದಂತಹ ಗುಂಪು ಐದರಿಂದ ಆರು ಜನರ ಒಂದೊಂದು ತಂಡವಾಗಿ ಮಾಡಿ ಬೇರೆ ಬೇರೆ ಕಡೆಗಳಿಗೆ ಹೋಗಿ ಕೆಮಿಕಲ್ ಹಾಕಿ ಮೀನು ಹಿಡಿಯುತ್ತಿದ್ದಾರೆ. ಇದೇ ರೀತಿ ಕಾಶಿಪಟ್ಣ ಮತ್ತು ಶಿರ್ತಾಡಿಗೆ ಸಂಪರ್ಕ ಕಲ್ಪಿಸುವ ನದಿಯಲ್ಲಿ ಮೀನು ಹಿಡಿಯುತ್ತಿದ್ದ ಸಂದರ್ಭದಲ್ಲಿ ಊರವರಿಗೆ ಸಿಕ್ಕಿಬಿದ್ದಿದ್ದಾರೆ.
ಮೀನು ಖದೀಮರ ಗ್ಯಾಂಗ್ ಬೆಳಗ್ಗೆ ಮೀನು ಹಿಡಿಯುವ ಸ್ಥಳ ನೋಡಿಕೊಳ್ಳುತ್ತಾರೆ. ರಾತ್ರಿ ಅದೇ ಜಾಗಕ್ಕೆ ತೆರಳಿ ಅಲ್ಲೇ ಮಲಗುತ್ತಾರೆ. ಮುಂಜಾನೆ ಮೂರು ಗಂಟೆಗೆ ಎದ್ದು ಮೀನಿನ ಬಲೆಗೆ ಕೆಮಿಕಲ್ ಫುಡ್ ಹಾಕಿ ಮೀನು ಹಿಡಿಯಲು ಪ್ರಾರಂಭಿಸುತ್ತಾರೆ. ಬೆಳಗ್ಗೆ ಆರು ಗಂಟೆಯಷ್ಟರಲ್ಲಿ ಮೀನುಗಳನ್ನು ಹಿಡಿಯುವ ಕೆಲಸ ಮುಗಿದಿರುತ್ತದೆ.
ನಂತರ ಊರಿನ ಅಲ್ಲಲ್ಲಿ ತೆರಳಿ ಬುಟ್ಟಿಯಲ್ಲಿ ಮೀನು ಮಾರಾಟ ಮಾಡಲು ಪ್ರಾರಂಭ ಮಾಡುತ್ತಾರೆ. ತನ್ನದೇ ಊರಿನ ಮೀನುಗಳನ್ನು ಜನರು ಕೆಮಿಕಲ್ ಹಾಕಿದ ಮೀನು ಎಂಬ ಅರಿವಿಲ್ಲದೆ ಒಳ್ಳೆ ವ್ಯಾಪಾರವನ್ನು ಮಾಡುತ್ತಿದ್ದರು.
ಇದು ಪಲಾರ ಗೊಳಿ, ಕಾಶಿಪಟ್ಣ, ನಾರಾವಿ, ಹೊಸ್ಮಾರು, ಕೋಣಾಜೆ, ಹೊಸಂಗಡಿ, ವೇಣೂರು ಪರಿಸರದಲ್ಲಿ ನಡೆಯುತ್ತಿದ್ದ ದಂಧೆ. ಈ ವಿಚಾರ ತಿಳಿದ ಊರವರು ಆ ಮೀನು ಖದೀಮರನ್ನು ಊರಿನಿಂದ ಓಡಿಸುವ ಕೆಲಸ ಮಾಡಿದ್ದಾರೆ. ಆದರೆ ಆ ಊರಿನಿಂದ ಪಲಾಯನ ಮಾಡಿದ ಈ ಗ್ಯಾಂಗ್ ಇನ್ನೂ ಯಾವ ಊರಿಗೆ ಹೋಗಿ ಈ ರೀತಿಯ ಸಂಚುರೂಪಿಸುತ್ತಾ ಇದೆ ಎನ್ನುವುದೇ ದೊಡ್ಡ ವಿಚಾರ.