Sun. Dec 29th, 2024

Bengaluru: ಗೆಳತಿಗೆ ಲೈಂಗಿಕ ಕಿರುಕುಳ – ಮುದ್ದುಲಕ್ಷ್ಮೀ ಸೀರಿಯಲ್ ಖ್ಯಾತಿಯ ನಟ ಅರೆಸ್ಟ್

ಬೆಂಗಳೂರು:(ಡಿ.28) ಖ್ಯಾತ ಕಿರುತೆರೆ ನಟ ಚರಿತ್ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ. ಅದರಂತೆ ನಟ ಚರಿತ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಬೆಳ್ತಂಗಡಿ: ಪೆರೋಡಿತ್ತಾಯಕಟ್ಟೆ ಸರಕಾರಿ ಶಾಲೆಯಲ್ಲಿ ಮಕ್ಕಳೇ ನೆಟ್ಟ ಹೂ ಕುಂಡಗಳನ್ನು ಪುಡಿ ಮಾಡಿದ ಕಿಡಿಗೇಡಿಗಳು!!


ಬೆಂಗಳೂರಿನ ಆರ್ ಆರ್ ನಗರ ಪೊಲೀಸ್ ಠಾಣೆಯಲ್ಲಿ ಕನ್ನಡದ ಮುದ್ದುಲಕ್ಷ್ಮಿ ಸೀರಿಯಲ್ ನಟ ಚರಿತ್ ಬಾಳಪ್ಪ ಅವರ ವಿರುದ್ಧ ಯುವತಿಯೊಬ್ಬಳು ಲೈಂಗಿಕ ದೌರ್ಜನ್ಯ ಆರೋಪ ಮಾಡಿ ದೂರು ದಾಖಲಿಸಿದ್ದಾರೆ.


ಅದರಂತೆ ಚರಿತ್ ಬಾಳಪ್ಪ ಅವರನ್ನು ಆರ್ ಆರ್ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಚರಿತ್ ಬಾಳಪ್ಪ ಅವರು ಕನ್ನಡದ ಮುದ್ದುಲಕ್ಷ್ಮೀ ಸೀರಿಯಲ್ ಸೇರಿದಂತೆ ಇತರೆ ಧಾರವಾಹಿಗಳಲ್ಲಿ ನಟಿಸಿದ್ದಾರೆ. ಅಲ್ಲದೇ ತೆಲುಗಿನ ಕಿರುತೆರೆಯಲ್ಲೂ ನಟಿಸಿದ್ದಾರೆ.


ಅಂದಹಾಗೇ ಯುವತಿ ನೀಡಿರುವಂತಹ ದೂರಿನಲ್ಲಿ ಕಿರುತೆರೆ ನಟ ಚರಿತ್ ಬಾಳಪ್ಪ ಅವರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಅಲ್ಲದೇ ಕೊಲೆ ಬೆದರಿಕೆ ಹಾಕಿ, ಹಲ್ಲೆಗೂ ಯತ್ನಿಸಿದ್ದಾರೆ ಎಂಬುದಾಗಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *