Thu. Jan 2nd, 2025

Chandan Shetty: 2ನೇ ಮದುವೆಗೆ ಸಜ್ಜಾದ ಚಂದನ್ ಶೆಟ್ಟಿ!!?‌ – ಹುಡುಗಿ ಯಾರು ಗೊತ್ತಾ?!!!

Chandan Shetty:(ಡಿ.29) ಖ್ಯಾತ ಸಂಗೀತಗಾರ, ರ್ಯಾಪ್ ಸಾಂಗ್ ಗಳ ಮಾಂತ್ರಿಕ ಚಂದನ್ ಶೆಟ್ಟಿ ಅವರು ತಮ್ಮ ಮಡದಿ ನಿವೇದಿತಾ ಗೌಡ ಅವರಿಂದ ವಿಚ್ಛೇದನ ಪಡೆದಿದ್ದರು. ಇದೀಗ ಅವರು ಎರಡನೇ ಮದುವೆಯಾಗಲು ಮುಂದಾಗಿದ್ದಾರೆ. ಈ ಕುರಿತಾದ ಒಂದು ಗಾಳಿ ಸುದ್ದಿ ಚಂದನವನದಲ್ಲಿ ಸದ್ದು ಮಾಡುತ್ತಿದೆ.

ಇದನ್ನೂ ಓದಿ: ಬಂಟ್ವಾಳ : ಲಾರಿ ಮತ್ತು ಬೈಕ್ ನಡುವೆ ಭೀಕರ ಅಪಘಾತ

ಚಂದನ್‌ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರು ಪ್ರೀತಿಸಿ ಮದುವೆಯಾದವರು. ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ನಂತರದಲ್ಲಿ ಇಬ್ಬರ ಜೀವನದಲ್ಲಿ ಬಿರುಗಾಳಿ ಎದ್ದ ಕಾರಣ ಈ ಜೋಡಿ ಪರಸ್ಪರ ಒಪ್ಪಿಗೆ ಮೇರೆಗೆ ಡಿವೋರ್ಸ್ ಪಡೆದುಕೊಂಡಿದೆ. ಈ ಬೆನ್ನಲ್ಲೇ ಚಂದನ್ ಶೆಟ್ಟಿ ಅವರು ಶೀಘ್ರದಲ್ಲೇ 2ನೇ ಮದುವೆ ಆಗುತ್ತಾರೆ ಅನ್ನೋ ವದಂತಿ ಹಬ್ಬಿದೆ. ಇದೀಗ ರಿಲೀಸ್‌ ಆಗಿರುವ ʼಕಾಟನ್‌ ಕ್ಯಾಂಡಿʼ ಹಾಡಿನಲ್ಲಿ ಚಂದನ್‌ ಶೆಟ್ಟಿ ತಮಗೆ ಬ್ರೇಕಪ್‌ ಆಗಿರೋ ಬಗ್ಗೆ ತಿಳಿಸಿದ್ದಾರೆ. ಇದು ಚಂದನ್‌ ಶೆಟ್ಟಿ ತಮ್ಮ 2ನೇ ಮದುವೆ ಬಗ್ಗೆ ನೀಡಿರೋ ಸುಳಿವು ಇರಬಹುದು ಅಂತಾ ನೆಟಿಜನ್ಸ್‌ ಮಾತನಾಡಿಕೊಳ್ಳುತ್ತಿದ್ದಾರೆ. ನಿವೇದಿತಾ ಗೌಡ ಅವರನ್ನು ಮರೆತು ಚಂದನ್ ಶೆಟ್ಟಿ ಮತ್ತೊಮ್ಮೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ..

ಅಸಲಿಗೆ ನಿವೇದಿತಾ ಗೌಡ ಅವರಿಂದ ದೂರವಾದ ನಂತರ ಚಂದನ್ ಶೆಟ್ಟಿ ಕ್ಯಾಂಡಿ ಕ್ರಶ್ ಹಾಡಿನಲ್ಲಿ ತಮ್ಮ ಜೊತೆ ಕುಣಿದ ಸುಶ್ಮಿತಾ ಗೋಪಿನಾಥ್ ಅವರ ಜೊತೆ ಫೋಟೊ ತೆಗೆಸಿಕೊಂಡು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಭಾರತದೆಲ್ಲೆಡೆ ಹಾಡು ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್‌ನಲ್ಲಿರುವುದಕ್ಕೆ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ. ಆದರೆ ಇದೇ ಸಮಯದಲ್ಲಿ ಅನೇಕರಿಗೆ ಇವರಿಬ್ಬರ ನಡುವೆ ಇರುವ ಆತ್ಮೀಯತೆ ಅನುಮಾನವನ್ನು ಮೂಡಿಸಿದೆ. ಹೀಗಾಗಿಯೇ ಅನೇಕರು ಚಂದನ್ ಶೆಟ್ಟಿ ಹಂಚಿಕೊಂಡ ಫೋಟೊ ಕೆಳಗೆ ತಮ್ಮ ಮನದ ಮಾತುಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅತ್ತಿಗೆನಾ ಅಣ್ಣ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಹೊಸ ಅತ್ತಿಗೆ ಲಕ್ಷಣವಾಗಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಚಂದನ್ ಶೆಟ್ಟಿ ಅವರಿಗೆ ಶುಭಾಶಯಗಳನ್ನು ಕೂಡ ಹೇಳುತ್ತಿದ್ದಾರೆ.

ಗಾಳಿಸುದ್ದಿಗಳ ಪ್ರಕಾರ ಚಂದನ್‌ ಶೆಟ್ಟಿಯವರು ಸ್ಯಾಂಡಲ್‌ವುಟ್‌ ನಟಿ ಸಂಜನಾ ಆನಂದ್‌ ಜೊತೆ ಮದುವೆಯಾಗುತ್ತಾ ಎನ್ನಲಾಗುತ್ತಿದೆ. ಈ ಜೋಡಿ ʼಸೂತ್ರಧಾರಿ’ ಸಿನಿಮಾದ ಡ್ಯಾಶ್ ಎಂಬ ಹಾಡಿನಲ್ಲಿ ಕಾಣಿಸಿಕೊಂಡಿತ್ತು. ಈ ಸೂಪರ್‌ ಹಿಟ್‌ ಸಾಂಗ್‌ನಲ್ಲಿ ಚಂದನ್‌ ಶೆಟ್ಟಿ ಅವರು ಸಂಜನಾ ಆನಂದ್‌ ಜೊತೆಗೆ ʼನನ್ನ ಡ್ಯಾಶ್ ಮಾಡ್ಕೊಳೆ ನನ್ನ ಡ್ಯಾಶ್ ಅನ್ಕೊಳ್ಳೆ ನಾನೇ ಚಿನ್ನದ ಗಂಟೆ ಚಿಂತೆ ಬಿಟ್ಟು ಸೊಂಟಕೆ ಕಟ್ಕೊಳೆʼ ಅಂತಾ ಸಖತ್‌ ಡ್ಯಾನ್ಸ್‌ ಮಾಡಿದ್ದರು. ಇದಾದ ಬಳಿಕ ಈ ಜೋಡಿಯ ನಡುವೆ ಏನೋ ಕುಚ್‌ ಕುಚ್‌ ನಡೆಯುತ್ತಿದೆ ಅಂತಾ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಯಾಗುತ್ತಿತ್ತು. ಈಗಾಗಲೇ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ಸಂಜನಾ ಆನಂದ್‌ ಜೊತೆಗೆ ಚಂದನ್‌ ಶೆಟ್ಟಿ ಮದುವೆಯಾದ್ರೆ ಚೆನ್ನಾಗಿರುತ್ತದೆ ಅಂತಾ ಅನೇಕರು ಕಾಮೆಂಟ್‌ ಸಹ ಮಾಡಿದ್ದಾರೆ.

ನಿಜಕ್ಕೂ ಚಂದನ್ ಶೆಟ್ಟಿ ಮತ್ತು ಸುಶ್ಮಿತಾ ಗೋಪಿನಾಥ್ ಪ್ರೀತಿಸುತ್ತಿದ್ದಾರಾ ? ನಿಜಾಂಶ ಇವರಿಬ್ಬರಿಗೆ ಗೊತ್ತಾದರೂ ಸದ್ಯಕ್ಕೆ ಜೋಡಿ ಚೆನ್ನಾಗಿದೆ ಮದ್ವೆಯಾಗಿ ಎಂದೇ ಹಲವರು ಹೇಳುತ್ತಿದ್ದಾರೆ. ಅಂದ್ಹಾಗೇ ಇವಳೇನಾ ಲಂಡನ್ ಕ್ವೀನು.. ಮಂಗಳೂರು ಬಂಗಡ ಮೀನು.. ತಾನಾಗೇ ಬುಟ್ಟಿಗೆ ಬಿತ್ತು ಎಂಬ ಸಾಲುಗಳನ್ನೆಲ್ಲ ಹೊಂದಿರುವ ಚಂದನ್ ಶೆಟ್ಟಿ ಮತ್ತು ಸುಶ್ಮಿತಾ ಗೋಪಿನಾಥ್ ಹೆಜ್ಜೆ ಹಾಕಿರುವ ಕಾಟನ್ ಕ್ಯಾಂಡಿ ಹಾಡಿಗೆ ಅನೇಕರು ಮನ ಸೋತಿದ್ದಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ಯೂಟ್ಯೂಬ್‌ನಲ್ಲಿ ಈ ಹಾಡು 24 ಗಂಟೆಯಲ್ಲಿ 1,736,530 ವೀವ್ಸ್ ಪಡೆದಿದೆ. ಒಟ್ಟಿನಲ್ಲಿ ಹೊಸ ವರ್ಷಕ್ಕೆ ತಮ್ಮ 2ನೇ ಮದುವೆ ಬಗ್ಗೆ ಚಂದನ್ ಅಧಿಕೃತವಾಗಿ ಮಾಹಿತಿ ನೀಡುವ ಮೂಲಕ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡುತ್ತಾರಾ ಎಂದು ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *