Sat. Jan 4th, 2025

Udupi: ನಾಗಸಾಧು ವೇಷದಲ್ಲಿ ಬಂದು ಅಂಗಡಿ ಮಾಲೀಕನ ಉಂಗುರ ಎಗರಿಸಿದ ಕಳ್ಳ!!!

ಉಡುಪಿ:(ಡಿ.29) ವ್ಯಕ್ತಿಯೊಬ್ಬ ನಾಗಸಾಧು ವೇಷದಲ್ಲಿ ಬಂದು ಅಂಗಡಿ ಮಾಲೀಕನ ಉಂಗುರ ಎಗರಿಸಿದ ಘಟನೆ ಬೈಂದೂರಿನಲ್ಲಿ ನಡೆದಿದೆ.

ಇದನ್ನೂ ಓದಿ: ಕನ್ಯಾಡಿ: ಸ.ಉ.ಹಿ.ಪ್ರಾ.ಶಾಲೆ ಕನ್ಯಾಡಿಯಲ್ಲಿ ” ಕಣ್ಣಿನ ಉಚಿತ ತಪಾಸಣಾ ಶಿಬಿರ”


ಬೈಂದೂರಿನ ಮಂಜುನಾಥ(46) ಎಂಬವರ ಅಂಗಡಿಗೆ ಡಿ.14ರಂದು ಕಪ್ಪುಬಣ್ಣದ ಬಟ್ಟೆ ಧರಿಸಿರುವ ನಾಗ ಸಾಧು ಬಂದಿದ್ದು, ಆತ ಮಂಜುನಾಥ್ ಅವರಿಗೆ ಪ್ರಸಾದ ನೀಡಿ ಒಂದು ಪವನ್ ನವರತ್ನ ಹರಳಿನ ಚಿನ್ನದ ಉಂಗುರವನ್ನು ಪ್ರಸಾದದಲ್ಲಿ ಹಾಕಿ ಅಂಗಡಿ ಡ್ರವರ್‌ನಲ್ಲಿ ಇಡುವಂತೆ ಹೇಳಿದ್ದಾನೆ.

ಬಳಿಕ ಪೂಜೆ ಮಾಡಿ ಮತ್ತೆ ಉಂಗುರ ಹಾಕಿಕೊಳ್ಳುವಂತೆ ತಿಳಿಸಿ ಹೋಗಿದ್ದನು. ನಾಗಸಾಧು ಹೋದ ನಂತರ ಮಂಜುನಾಥ್ ಪ್ರಸಾದ ತೆಗೆದು ನೋಡಿದಾಗ ಉಂಗುರ ಕಳವಾಗಿರುವುದು ಗೊತ್ತಾಗಿದೆ.


ನಾಗ ಸಾಧು ಮಂಜುನಾಥ್ ಅವರನ್ನು ವಶೀಕರಣ ಮಾಡುವ ರೀತಿಯಲ್ಲಿ ನಂಬಿಸಿ ಉಂಗುರವನ್ನು ಕಳವು ಗೈದು ಮೋಸ ಮಾಡಿರುವುದಾಗಿ ದೂರಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *