Sat. Jan 4th, 2025

Belagavi: ಆಂಟಿ ಜತೆ ಲವ್ವಿಡವ್ವಿ – ಕರೆ ಸ್ವೀಕರಿಸಲಿಲ್ಲ ಎಂದು ಮನೆಗೆ ಹೋದ ಯುವಕ ಸೇರಿದ್ದು ಆಸ್ಪತ್ರೆಗೆ!! – ಅಷ್ಟಕ್ಕೂ ಆಗಿದ್ದೇನು?!

ಬೆಳಗಾವಿ, (ಡಿ.29): ಮದುವೆಯಾಗಿದ್ದ ಆಂಟಿ ಜೊತೆ ಲವ್ವಿಡವ್ವಿ ಇಟ್ಟುಕೊಂಡಿದ್ದ ಯುವಕ ಇದೀಗ ಆಸ್ಪತ್ರೆ ಸೇರಿದ್ದಾನೆ. ಗೋಕಾಕ್​ನ ಸಂಗಮೇಶ್ವರದ ನಿವಾಸಿ ಆನಂದ್​, ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ.

ಇದನ್ನೂ ಓದಿ: ಕಾಸರಗೋಡು: ಮೂವರು ಮಕ್ಕಳೊಂದಿಗೆ ತಾಯಿ ನಾಪತ್ತೆ!!!

ಆನಂದ್, ಗೋಕಾಕ್​ನ ಆಂಟಿ ಜೊತೆ ಲವ್ವಿಡವ್ವಿ ಇಟ್ಟುಕೊಂಡಿದ್ದು, ಬಳಿಕ ಆಕೆ ಫೋನ್ ಕರೆ ಸ್ವೀಕರಿಸಿಲ್ಲವೆಂದು ಮನೆಗೆ ಬಂದಿದ್ದಾನೆ. ಆಗ ವೇಳೆ ಮಾತಿನ ಚಕಮಕಿಯಾಗಿ ಆಂಟಿಯೇ ಯುವಕನಿಗೆ ಚಾಕುವಿನಿಂದ ಇರಿದ್ದಿದ್ದಾಳೆ. ಇದರಿಂದ ಗಾಯಗೊಂಡಿರುವ ಯುವಕ ಆನಂದ್ ಬೆಳಗಾವಿಯ ಬಿಮ್ಸ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಮಹಿಳೆ ಹೆಸರು ಶೋಭಾ. ಗೋಕಾಕ್​ನ ಸಂಗಮೇಶ್ವರದ ನಿವಾಸಿ. ಈ ಹಿಂದೆ ಓರ್ವನನ್ನು ಮದ್ವೆಯಾಗಿ ಆತನಿಂದ ದೂರವಾಗಿದ್ದ ಶೋಭ, ಮಂಜುನಾಥ್​ ಎಂಬಾತನನ್ನು 2ನೇ ಮದುವೆ ಆಗಿದ್ದಳು. ಆದರೂ ಒಂದೂವರೆ ವರ್ಷದಿಂದ ಈ ಆನಂದ್​ ಜತೆ ಲವ್ವಿಡವ್ವಿ ಆಟವಾಡುತ್ತಿದ್ದಳು. 15 ದಿನಗಳಿಂದ ಆನಂದ್​ನ ಫೋನ್ ಸ್ವೀಕರಿಸುತ್ತಿರಲಿಲ್ವಂತೆ. ಇದರಿಂದ ಸಿಟ್ಟಿಗೆದ್ದ ಆನಂದ್, ಮೊನ್ನೆ ನೇರವಾಗಿ ಗೋಕಾಕ್​​ನಲ್ಲಿದ್ದ ಶೋಭಾ ಮನೆಗೆ ಹೋಗಿದ್ದಾನೆ.

ಆಗ ಗಂಡನ ಜತೆ ಶೋಭಾ ಳನ್ನು ನೋಡಿ ಕೆರಳಿದ ಆನಂದ್​​​ ಚಾಕು ತೆಗೆದು ಆಕೆ ಕೈ ಮತ್ತು ಹಣೆಗೆ ಇರಿದಿದ್ದಾನೆ. ಇಷ್ಟಾಗ್ತಿದ್ದಂತೆ ಶೋಭಾ ಮತ್ತು ಆಕೆ ಪತಿ ಅವನ ಕೈಯಿಂದ ಚಾಕು ಕಸಿದುಕೊಂಡು ಆನಂದ್​​​​ನ ತಲೆ, ಹೊಟ್ಟೆ, ಎದೆಗೆ ಇರಿದಿದ್ದಾರೆ.

ಆನಂದ್, ಶೋಭಾ ಇಬ್ಬರಿಗೂ ಗಾಯವಾಗಿದ್ದು, ಒಂದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಬಗ್ಗೆ ಗೋಕಾಕ್ ನಗರ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಿಸಿದ್ದಾರೆ. ಏನೇಹೇಳಿ, ಮದುವೆಯಾಗಿ ನೆಮ್ಮದಿಯಿಂದ ಇರಬೇಕಿದ್ದ ಮಹಿಳೆ ಈಗ ಯುವಕನ ನೆಮ್ಮದಿಯನ್ನೂ ಕಸಿದು ಆಸ್ಪತ್ರೆ ಸೇರುವಂತೆ ಮಾಡಿದ್ದಾಳೆ.

Leave a Reply

Your email address will not be published. Required fields are marked *