Sat. Jan 4th, 2025

Puttur: ಸವಣೂರಿನ ಅಖಿಲ ಪೂಜಾರಿ ಎಸ್.ಐ. ಹುದ್ದೆಗೆ ಆಯ್ಕೆ

ಪುತ್ತೂರು:(ಡಿ.29) ಪುತ್ತೂರು ಸಮೀಪ ಸವಣೂರಿನ ಅಖಿಲ ಪೂಜಾರಿ ಅವರು ಪೊಲೀಸ್ ಇಲಾಖೆಯ ಎಸ್.ಐ. ಹುದ್ದೆಗೆ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ: ವಿಟ್ಲ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ವಾತ್ಸಲ್ಯ ಕಿಟ್ ವಿತರಣೆ

ಅಖಿಲ ಪೂಜಾರಿ ಅವರು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಸಿವಿಲ್ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಎಸ್.ಐ.ಹುದ್ದೆಗೆ ಆಯ್ಕೆಯಾಗಿದ್ದಾರೆ. ಇನ್ನೇನು ಸಧ್ಯದಲ್ಲೇ ಕೆಲಸಕ್ಕೆ ನೇಮಕಾತಿಯಾಗಬೇಕಾಗಿದೆ.

ಮಂಗಳೂರು ಸಿಸಿಬಿಯಲ್ಲಿ ಸಹಾಯಕ ಪೊಲೀಸ್ ಉಪನಿರೀಕ್ಷಕರಾದ ದೇವಸ್ಯದ ಶೀನಪ್ಪ ಪೂಜಾರಿ ಮತ್ತು ಹೇಮಾವತಿ ಬಂಬಿಲ ದೋಳ ಅವರ ಪುತ್ರಿಯಾದ ಅಖಿಲ ಪೂಜಾರಿಯವರು ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮಂಗಳೂರು ಕುಲಶೇಖರದ ಸೇಕ್ರೆಡ್ ಹಾರ್ಟ್ ಶಾಲೆಯಲ್ಲಿ ಪೂರೈಸಿ,

ಪ್ರೌಢ ಶಿಕ್ಷಣವನ್ನು ಕುಲಶೇಖರದ ಸಂತ ಜೋಸೆಫ್ ವಿದ್ಯಾ ಸಂಸ್ಥೆಯಲ್ಲಿ ಪ್ರೌಢ ಹಂತದ ವಿದ್ಯಾಭ್ಯಾಸವನ್ನು ಮುಗಿಸಿದ್ದಾರೆ. ಉನ್ನತ ಶಿಕ್ಷಣಕ್ಕಾಗಿ ಮಂಗಳೂರು ಸಂತ ಆಗ್ನನ್ ಕಾಲೇಜಿನಲ್ಲಿ ಪದವಿಪೂರ್ವ ಮತ್ತು ಪದವಿ ಶಿಕ್ಷಣ ವನ್ನು ಮುಗಿಸಿದ್ದಾರೆ.

Leave a Reply

Your email address will not be published. Required fields are marked *