ಪುತ್ತೂರು:(ಡಿ.30) ಯುವ ಮೋರ್ಚಾ ಪುತ್ತೂರು ಗ್ರಾಮಾಂತರ ಮಂಡಲ ವತಿಯಿಂದ ವೀರ ಬಾಲ ದಿವಸ್ ಕಾರ್ಯಕ್ರಮ ಆಚರಿಸಲಾಯಿತು. ಪುತ್ತೂರು ವಿಧಾನ ಸಭಾ ಕ್ಷೇತ್ರದ ಕೆದಿಲ ಗ್ರಾಮದ ಕುದುಮಾನ್ ತಿಮ್ಮಪ್ಪ ಎಂ ಕೆ ಇವರ ಮನೆಯಲ್ಲಿ ಕಾರ್ಯಕ್ರಮ ಅಯೋಜಿಸಿದ್ದು,

ಇದನ್ನೂ ಓದಿ: ಉಡುಪಿ: ಸಮುದ್ರಕ್ಕೆ ಸ್ನಾನಕ್ಕೆ ತೆರಳಿದ್ದ ಇಬ್ಬರು ಯುವಕರು ನೀರುಪಾಲು
ಈ ಸಂಧರ್ಭದಲ್ಲಿ ಚೆಸ್ ಕ್ರೀಡೆಯ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆ ಮಲೇಷಿಯಾ ಇಲ್ಲಿ ಭಾಗವಹಿಸಿ ರಾಪಿಡ್ ಹಾಗೂ ವೈಯಕ್ತಿಕ ವಿಭಾಗದಲ್ಲಿ ಕಂಚಿನ ಪದಕ ಗಳಿಸಿದ ಕುಮಾರಿ ಯಶಸ್ವಿ ಕೆ ಇವರನ್ನು ಸನ್ಮಾನಿಸಲಾಯಿತು.
ಕುಮಾರಿ ಯಶಸ್ವಿ ಅದ್ಭುತ ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದು ತನಗಿರುವ ಶ್ರವಣ ಹಾಗೂ ವಾಕ್ ದೋಷಗಳ ತೊಂದರೆಯಿದ್ದರೂ, ತುಂಬಾ ಶ್ರದ್ಧೆ ಹಾಗೂ ಕಠಿಣ ಪರಿಶ್ರಮದಿಂದ ಈ ಸಾಧನೆಯನ್ನು ಮಾಡಿರುತ್ತಾರೆ.



ಕಿವಿಯ ಕೇಳುವಿಕೆ ಹಾಗೂ ಮಾತನಾಡಲು ಕಷ್ಟಸಾಧ್ಯವಾದರೂ ವಿದ್ಯಾಭ್ಯಾಸದಲ್ಲಿ ಸಾಮಾನ್ಯ ವಿದ್ಯಾರ್ಥಿಗಳಂತೆ ಅವರೊಂದಿಗೆ ಓದಿ BCAಯಲ್ಲಿ 90% ಅಂಕ ಪಡೆದಿರುತ್ತಾರೆ. ಅವರ ಸಾಧನೆಯನ್ನು ಗುರುತಿಸಿ ವೀರ ಬಾಲ ದಿವಸ್ ಅಂಗವಾಗಿ ಯುವಮೋರ್ಚಾ ವತಿಯಿಂದ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲದ ಅಧ್ಯಕ್ಷರಾದ ದಯಾನಂದ ಶೆಟ್ಟಿ ಉಜಿರೆಮಾರ್ , ದ.ಕ ಜಿಲ್ಲಾ ಯುವಮೋರ್ಚಾ ಕಾರ್ಯದರ್ಶಿ ಮಚ್ಚಿಮಲೆ ವಿರೂಪಾಕ್ಷ ಭಟ್,

ಪುತ್ತೂರು ಗ್ರಾಮಾಂತರ ಮಂಡಲ ಯುವಮೋರ್ಚಾ ಅಧ್ಯಕ್ಷ ಶಿಶಿರ್ ಪೆರ್ವೋಡಿ, ಉಪಾಧ್ಯಕ್ಷರಾದ ಪವನ್ ಶೆಟ್ಟಿ ಕಂಬಳದಡ್ಡ ಹಾಗೂ ಯುವಮೋರ್ಚಾ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.
