ಬೆಳ್ತಂಗಡಿ:(ಡಿ.31) ವಾರಂಟ್ ಆರೋಪಿಯಾದ ದಿಲೀಪ್ ಪೂಜಾರಿಯು ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದನು. ಇದೀಗ ಬೆಳ್ತಂಗಡಿ ಪೋಲಿಸರು ವಾರಂಟ್ ಆರೋಪಿ ದಿಲೀಪ್ ಪೂಜಾರಿಯನ್ನು ಬಂಧಿಸಿದ್ದಾರೆ.
ಬೆಳ್ತಂಗಡಿ ಪೋಲಿಸ್ ಠಾಣೆಯ ಇನ್ಸ್ಪೆಕ್ಟರ್ ಬಿ.ಜಿ.ಸುಬ್ಬಾಪುರ ಮಠ, ಉಪ ನಿರೀಕ್ಷಕರು ಮುರಳೀಧರ್ ಮತ್ತು ಯಲ್ಲಪ್ಪ ರವರ ನಿರ್ದೇಶನದಂತೆ ಸಿಬ್ಬಂದಿ ವೃಷಭ್ ಮತ್ತು ಮುನಿಯ ನಾಯ್ಕರವರು
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬಜಗೋಳಿ ನಿವಾಸಿ ದಿಲೀಪ್ ಪೂಜಾರಿ(28ವ) ಯನ್ನು ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ , ಆತನನ್ನು ವಶಕ್ಕೆ ಪಡೆದುಕೊಂಡು ಬೆಳ್ತಂಗಡಿ ನಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
ನ್ಯಾಯಾಧೀಶರು ಆರೋಪಿಗೆ ಸೂಕ್ತ ಜಮೀನಿನಲ್ಲಿ ಬಿಡುಗಡೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.