Wed. Jan 8th, 2025

ಮೇಷ ರಾಶಿ: ಇಂದು ಎಲ್ಲ ಒತ್ತಡಗಳನ್ನು ಮರೆತು ಕೆಲವು ಎಲ್ಲರ ಜೊತೆ ಬೆರೆಯುವಿರಿ. ಇಂದಿನ ನಿಮ್ಮ ವ್ಯವಹಾರವು ಹತ್ತಾರು ಗೊಂದಲಗಳಿಂದ ಇರಲಿದ್ದು ಮುಂದುವರಿದರೆ ನಷ್ಟವಾಗುವ ಭಯವೂ ಇರಲಿದೆ. ದ್ವಿಚಕ್ರ ಸವಾರರು ಬಹಳ ಎಚ್ಚರಿಕೆಯಿಂದ ಓಡಾಡಬೇಕು. ಅಧ್ಯಾತ್ಮದಲ್ಲಿ ಮನಸ್ಸನ್ನು ಇಡುವಿರಿ. ಇಂದು ನಿಮ್ಮ ಸಮಯವನ್ನು ಸ್ನೇಹಿತರ ಕಾರ್ಯಕ್ಕೆ ಕೊಡಬೇಕಾಗಿಬರಬಹುದು. ಅದ್ದರಿಂದ ನಿಮ್ಮ ಕೆಲಸವು ವಿಳಂಬವಾಗಬಹುದು. ಆಸೆಗಳನ್ನು ನೀವು ನಿಯಂತ್ರಣಕ್ಕೆ ತರಲು ಪ್ರಯತ್ನಿಸುವಿರಿ. ಸಂಗಾತಿಯ ನಡವಳಿಕೆಯನ್ನು ಊಹಿಸಲಾಗದು. ಯಾರಿಂದಲೂ ಗೌರವ ಸಿಗಲಿಲ್ಲ ಎಂಬ ನೋವು ಕಾಣಿಸಿಕೊಳ್ಳುವುದು.

ವೃಷಭ ರಾಶಿ: ನಿಮ್ಮ ವಾಹನದಿಂದ ಹೆಚ್ಚು ನಷ್ಟ ಸಂಭವಿಸುವುದು. ಹಿರಿಯರ ಮಾತನ್ನು ನಿರಾಕರಿಸಿದ್ದ ನಿಮಗೆ, ಅದೇ ಉಪಯೋಗಕ್ಕೆ ಬರಲಿದೆ. ವಿದ್ಯಾರ್ಥಿಗಳು ಸತತ ಶ್ರಮದಿಂದ ಇಂದು ಹಂತವನ್ನು ತಲುಪುವರು. ನಿಮ್ಮ ನೋವನ್ನು ಯಾರ ಬಳಿಯಾದರೂ ಹೇಳಿಕೊಳ್ಳಿ. ಕೃಷಿಯಿಂದ ಲಾಭ ಗಳಿಸಲು ತಜ್ಞರ ಸಲಹೆ ಸಿಗಲಿದೆ. ಶತ್ರುಗಳ ಚಲನವಲನಗಳ‌ ಮೇಲೆ‌ ಕಣ್ಣಿಡುವಿರಿ. ಅಕಾಸ್ಮಾತ್ತಾಗಿ ಸಿಕ್ಕ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳುವ ಕಡೆಗೆ ಗಮನವಿರಲಿ.‌

ಮಿಥುನ ರಾಶಿ: ಇಂದು ಹಿತಶತ್ರುಗಳು ನಿಮ್ಮ ಭಾವನೆಯ ಜೊತೆ ಆಟವಾಡುವರು. ವಿದ್ಯಾರ್ಥಿಗಳಿಗೆ ಮಾನಸಿಕವಾದ ಭಯವನ್ನು ತೆಗೆದರೆ ಮುನ್ನಡೆಗೆ ಅವಕಾಶವಿದೆ. ವೃತ್ತಿಯಲ್ಲಿ ಹಿತಶತ್ರುಗಳ ಕಾಟದಿಂದ ಸಿಗಬೇಕಾದ ಸ್ಥಾನಕ್ಕೆ ತೊಂದರೆಯಾಗಬಹುದು. ಸರಳವಾದ ಕಾರ್ಯವನ್ನು ಸಂಕೀರ್ಣ ಮಾಡಿಕೊಳ್ಳುವಿರಿ. ಒಟ್ಟಿಗೇ ಬರುವ ಕೆಲಸದಿಂದ ನೀವು ಉದ್ವೇಗಕ್ಕೆ ಬೀಳುವಿರಿ. ಔದಾರ್ಯ ಗುಣವು ದುರುಪಯೋಗವಾಗಬಹುದು. ಸಾಲದಿಂದ ಬಿಡುಗಡೆ ಸಿಕ್ಕಿ ಮನಸ್ಸು ನಿರಾಳವಾಗಲಿದೆ.

ಕರ್ಕಾಟಕ ರಾಶಿ: ಇಂದು ಪ್ರಾಮುಖ್ಯ ಕೊಡಬೇಕಾದಲ್ಲಿ ಅರಿತು ಪ್ರಯತ್ನಪೂರ್ವಕವಾಗಿ ಕೊಡಿ. ದಾಂಪತ್ಯದ ಮೇಲೆ‌ ದುಷ್ಟರ ದೃಷ್ಟಿಯು ಬೀಳಬಹುದು. ನಿಮ್ಮ ನಡೆ-ನುಡಿಗಳು ಆದಷ್ಟು ಸರಳವಾಗಿ ಇರಲಿ. ಮಿತಿಮೀರಿದ ಆಹಾರಸೇವನೆಯಿಂದ ನಿಮಗೆ ಕಷ್ಟವಾದೀತು. ಮಕ್ಕಳ ಬಗೆಗೆ ನಂಬಿಕೆ ಕಡಿಮೆಯಾಗಬಹುದು. ಧಾರ್ಮಿಕ ಕಾರ್ಯದಲ್ಲಿ ಸಂಭ್ರಮದಲ್ಲಿ ಪಾಲ್ಗೊಳ್ಳುವಿರಿ. ಯಾರದೋ ಮಾತಿನಿಂದ ನಿಮಗೆ ಸಂಕಟವಾಗುವುದು. ಆಪ್ತರನ್ನು ಸತ್ಕಾರಕ್ಕಾಗಿ ಮನೆಗೆ ಆಹ್ವಾನಿಸುವಿರಿ.

ಸಿಂಹ ರಾಶಿ: ಅನಿರೀಕ್ಷಿತವಾಗಿ ಸಿಕ್ಕ ಬಂಧುಗಳನ್ನು ಮನೆಗೆ ಆಮಂತ್ರಿಸುವಿರಿ. ಪ್ರೀತಿಯಲ್ಲಿ ನಂಬಿಕೆ ಕಡಿಮೆ ಆಗಬಹುದು. ನಿರುಪಯುಕ್ತ ವಸ್ತುಗಳನ್ನು ದಾನರೂಪವಾಗಿ ಕೊಡುವಿರಿ. ನಿಮ್ಮ ಎಲ್ಲ ಕಾರ್ಯಗಳೂ ವಿಳಂಬವಾಗಿ ಅಧಿಕಾರಿಗಳಿಂದ ಹೇಳಿಸಿಕೊಳ್ಳುವಿರಿ. ಇಂದು ಸ್ತ್ರೀಯರು ಅಲಂಕಾರದಲ್ಲಿ ಹೆಚ್ಚು ತೊಡಗಿಕೊಳ್ಳುವರು. ಮಾಡಿದ ತಪ್ಪಿನಿಂದ ಪಶ್ಚಾತ್ತಾಪ ಪಡುವಿರಿ. ಎಷ್ಟೇ ಪ್ರಯತ್ನಿಸಿದರೂ ಕೊಟ್ಟ ಹಣವು ನಿಮಗೆ ಸಿಗದು. ಅದರ ಆಸೆಯನ್ನು ಬಿಡುವಿರಿ. ನಿಮ್ಮವರ ಮೇಲೆ ನೀವು ಇಟ್ಟ ನಂಬಿಕೆಯು ಹುಸಿಯಾಗುವುದು.

ಕನ್ಯಾ ರಾಶಿ: ಒಡಂಬಡಿಕೆ ಸರಿಯಾಗಿ ವ್ಯವಹಾರಗಳು ಇರಲಿ. ಉದ್ಯೋಗದ ವಿಚಾರವನ್ನು ಬಹಳ ಗೌಪ್ಯವಾಗಿ ಇಡುವಿರಿ. ಸಾಮರ್ಥ್ಯದ ಪರೀಕ್ಷೆಯಲ್ಲಿ ಸಲ್ಲದ ಮಾತನ್ನು ಹಿರಿಯರಿಗೆ ಹೇಳುವಿರಿ. ಪ್ರೀತಿಯಿಂದ ಮನಸ್ಸು ಕುರುಡಾಗುವುದು. ಅಹಂಕಾರವು ನಿಮ್ಮನ್ನು ಕೆಳಗೆ ದೂಡಬಹುದು. ಸರಳತೆಯನ್ನು ರೂಢಿಸಿಕೊಳ್ಳುವ ಬಗ್ಗೆ ಆಲೋಚನೆ ಇರಲಿ. ಅನಗತ್ಯಗಳ ಅಪೇಕ್ಷೆಯಿಂದ ಸಂಗಾತಿಯ ಸಂಪತ್ತನ್ನು ಖಾಲಿ‌ಮಾಡುವಿರಿ. ನಿಮ್ಮ ಮನಸ್ಸು ಕಾರ್ಯದಲ್ಲಿ ಮಗ್ನವಾಗಿ ಇರದು.

ತುಲಾ ರಾಶಿ: ಸ್ಥಾನವನ್ನು ಎತ್ತರಿಸಿದ ಮಾತ್ರ ನೀವೂ ಎತ್ತರವೇರಬೇಕೆಂದಿಲ್ಲ. ಮಿತ್ರರ ಸಹಾಯಕ್ಕೆ ಇಂದು ಕಿರು ಪ್ರಯಾಣ ಮಾಡುವಿರಿ. ನಿಮ್ಮಿಂದ ಉಪಕಾರ ಪಡೆದವರೇ ನಿಮಗೆ ವಂಚಿಸುವ ಸಾಧ್ಯತೆ ಇದೆ.‌ ನಿಮ್ಮ ವಿದ್ಯಾಭ್ಯಾಸದಲ್ಲಿ ಹಿನ್ನಡೆ ಹಾಗೂ ಓದಿನ ಕಡೆ ಗಮನವು ಇಲ್ಲದಿರುವುದು ಪಾಲಕರಿಗೆ ಗೊತ್ತಾಗಿ ಬೇಸರವಾಗಬಹುದು. ಯಾವುದೇ ಉದ್ಯಮಕ್ಕೂ ಕಾನೂನಿನ ವಿಷಯದಲ್ಲಿ ನಿಮಗೆ ಬೇಕಾದ ಮಾಹಿತಿಯನ್ನು ಪಡೆದು ಮುಂದುವರಿಯಿರಿ. ಪರದೇಶ ವಾಸದಿಂದ ಉದ್ಯಮಕ್ಕೆ ಪೆಟ್ಟು. ಸ್ಪರ್ಧೆಯಲ್ಲಿ ಸೋಲಾಗುವ ಸಾಧ್ಯತೆ ಇದೆ. ಮಹಿಳೆಯರು ಸ್ವ ಉದ್ಯಮದಿಂದ ಲಾಭವನ್ನು ಮಾಡಿಕೊಳ್ಳುವರು.

ವೃಶ್ಚಿಕ ರಾಶಿ: ಯಾವುದನ್ನೇ ಆದರೂ ಕೇಳಿ‌ ಪಡೆದುದ್ದಕ್ಕೆ ಮೌಲ್ಯ ಅಷ್ಟೇ. ಕೊಟ್ಟ ಗೌರವ ನಿಮಗೆ ಸಾಲದು. ಮಕ್ಕಳಿಗಾಗಿ ಪಟ್ಟಶ್ರಮವು ಇಂದು ಸಾರ್ಥಕ ಎನಿಸುವುದು. ಇಂದು ಹಣದ ಬಗ್ಗೆ ನಿಮಗೆ ಲೆಕ್ಕವೇ ಸಿಗದೇ ಖರ್ಚಾಗುವುದು. ಆಪ್ತರಿಗೆ ಕೊಟ್ಟ ಹಣವು ಮರಳಿ ಬಾರದೇ ಇರಬಹುದು. ಉನ್ನತ ವಿದ್ಯಾಭ್ಯಾಸಕ್ಕೆ ಮಕ್ಕಳಿಗೆ ಹಣವನ್ನು ಹೊಂದಿಸುವಿರಿ. ನಿಮ್ಮ ಬಗ್ಗೆ ಮಾತನಾಡುವವರಿಗೆ ಈಗಲೇ ಉತ್ತರ ಕೊಡುವುದು ಬೇಡ. ನಿಮ್ಮ ಒರಟು ಸ್ವಭಾವವು ಇಷ್ಟವಾಗದೇ ಹೋಗಬಹುದು. ಸುಮ್ಮನೇ ಒಂಟಿಯಾಗಿ ಇದ್ದು ಹತ್ತಾರು ಯೋಚನೆಗಳು ಬರಬಹುದು.

ಧನು ರಾಶಿ:ರಾಜಕೀಯ ವ್ಯಕ್ತಿಗಳು ಬೆಂಬಲಿಗರನ್ನು ಕಳೆದುಕೊಳ್ಳಬಹುದು. ನೀವಾಡುವ ಸುಳ್ಳು ಎಲ್ಲರಿಗೂ ಗೊತ್ತಾದೀತು. ನಿದ್ರೆಯಿಂದ ಆಲಸ್ಯವು ಹೆಚ್ಚಾಗುವುದು. ಹಣಕಾಸಿನ ವ್ಯವಹಾರದಲ್ಲಿ ಮಿತ್ರರ ಜೊತೆ ಕಲಹವಾಗಬಹುದು. ಸಂಗಾತಿಯಿಂದ ಬಲವಂತವಾಗಿ ಉಡುಗೊರೆ ಪಡೆಯುವಿರಿ. ಸ್ತ್ರೀಯರಿಗೆ ಇಂದು ಸಂತೋಷದ ದಿನ. ಎಲ್ಲರೆದುರೂ ಸಿಟ್ಟಿನಿಂದ ಕೂಗಾಡುವುದು ಬೇಡ.‌ ಪೋಷಕರು ವಿದ್ಯಾಭ್ಯಾಸದ ಪ್ರಗತಿಯನ್ನು ಪರಿಶೀಲಿಸುವುದು ಅವಶ್ಯ. ನೆರಮನೆಯರ ಜೊತೆ ಮಾತಿಗೆ ಮಾತು ಬೆಳೆದು ಕಲಹವಾಗಬಹುದು. ನಿಮ್ಮ ವಸ್ತುವಿನ ಮೇಲೆ‌ ವ್ಯಾಮೋಹವು ಅಧಿಕವಾಗಬಹುದು.

ಮಕರ ರಾಶಿ: ಸಮಯವನ್ನು ಪ್ರೀತಿಗಾಗಿ ತ್ಯಾಗ‌ಮಾಡಬೇಕಾದೀತು. ದುರಸ್ತಿ ಕಾರ್ಯವನ್ನು ಮಾಡುವವರಿಗೆ ಈ ದಿನ ಒತ್ತಡವಿರುವುದು. ವ್ಯಕ್ತಿಗತ ಅಭಿಪ್ರಾಯವನ್ನು ಒಪ್ಪಲಾರಿರಿ. ಜವಾಬ್ದಾರಿಯ ಕೆಲಸವನ್ನು ಜಾಗರೂಕತೆಯಿಂದ ಮಾಡಿ. ದಾಂಪತ್ಯದ ಕಲಹವು ಮುಕ್ತಾಯವಾಗುವುದು. ಹೊಸ ಕೆಲಸಗಳನ್ನು ನಿರ್ವಹಿಸಲು ಧೈರ್ಯ ಸಾಲದು. ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸದಲ್ಲಿ ಉತ್ತಮ‌ಫಲಿತಾಂಶವನ್ನು ಪಡೆಯುವರು.

ಕುಂಭ ರಾಶಿ; ಒತ್ತಾಯದ ಮೇರೆಗೆ ಇಂದು ಅನವಶ್ಯಕ‌ವಾದ ಪ್ರಯಾಣವಾಗುವುದು. ಇನ್ನೊಬ್ಬರಿಗೆ ಹೇಳುವಾಗ ನೀವು ಅದನ್ನು ಆಚರಿಸಬೇಕಾಗಬಹುದು. ಪುಣ್ಯಸ್ಥಳಗಳ ಭೇಟಿಯಿಂದ ಖುಷಿಯಾಗುವುದು. ಸಾಹಿತ್ಯ ಆಸಕ್ತರಿಗೆ ಉತ್ತಮ ಅವಕಾಶಗಳು ಸಿಗುವುದು. ಸ್ವಂತ ವಾಹನದ ದುರಸ್ತಿಯಿಂದ ಧನ ನಷ್ಟ. ನಿಮ್ಮ ಸಲಹೆಯನ್ನು ಕೇಳದಿರುವುದು ಇಷ್ಟವಾಗದು. ನೌಕರರು ನಿಮ್ಮ ಮೇಲೆ‌ ಸಿಟ್ಟಾಗಬಹುದು. ಸೌಕರ್ಯಕ್ಕೆ ತಕ್ಕ ಹಾಗೆ ದಿನಚರಿಯನ್ನು ಬದಲಿಸಿ. ಪ್ರಭಾವೀ ವ್ಯಕ್ತಿಗಳಿಂದ ನಿಮ್ಮ ಕಾರ್ಯವನ್ನು ಸಾಧಿಸಿಕೊಳ್ಳುವಿರಿ. ಇಂದು ನಿಮ್ಮ ಸಂಗಾತಿಯಿಂದ ಭವಿಷ್ಯಕ್ಕೆ ಸಲಹೆಯು ಸಿಗಬಹುದು.‌

ಮೀನ ರಾಶಿ: ನೀವು ವ್ಯಾಪಾರದ ಅನುಕೂಲತೆಯನ್ನು ನೋಡಿ ಮುಂದಡಿ ಇಡಬಹುದು.‌ ಸ್ನೇಹಿತರ ಜೊತೆ ಪಾಲುದಾರಿಕೆಯಲ್ಲಿ ಸೇರಿಕೊಳ್ಳುವಿರಿ. ನಿಮ್ಮ ಕಾರ್ಯವನ್ನು ಮಿತ್ರರ ಮೂಲಕ ಮಾಡಿಕೊಳ್ಳುವಿರಿ. ನಿರ್ದಿಷ್ಟ ಸಮಯಕ್ಕೆ ಆಗುವ ಕೆಲಸವು ಸಮಯದ ಮಿತಿಯನ್ನು ಮೀರಬಹುದು. ಅಪರಿಚಿತ ಕರೆಗಳಿಂದ ನಿಮಗೆ ಸಂಕಟವಾಗಬಹುದು. ಇಂದಿನ ಆಲಸ್ಯವು ನಿಮಗೆ ಯಾವ ಕೆಲಸಗಳಿಗೂ ಉತ್ಸಾಹವೇ ಇರದು. ಶತ್ರುಗಳ ಭಯವು ಕಾರ್ಯವನ್ನು ನಿಧಾನ ಮಾಡಿಸುವುದು. ನಿಮ್ಮ ಒತ್ತಡಗಳನ್ನು ಮರೆತು ನಿಶ್ಚಿಂತೆಯಿಂದ ದಿನವನ್ನು ಕಳೆಯುವಿರಿ.

Leave a Reply

Your email address will not be published. Required fields are marked *