Tue. Jan 7th, 2025

Kinnigoli: ಗದ್ದೆಯಲ್ಲಿ ಕುಸಿದು ಬಿದ್ದು ವ್ಯಕ್ತಿ ಸಾವು

ಕಿನ್ನಿಗೋಳಿ:(ಜ.4) ಗದ್ದೆಯಲ್ಲಿನ ಕಳೆಗೆ ಜೌಷದಿ ಸಿಂಪಡಿಸುವಾಗ ವ್ಯಕ್ತಿಯೋರ್ವರು ಕುಸಿದು ಬಿದ್ದು ಮೃತಪಟ್ಟ ಘಟನೆ ಕಿನ್ನಿಗೋಳಿ ಸಮೀಪದ ಏಳಿಂಜೆ ಪಟ್ಟೆಯಲ್ಲಿ ನಡೆದಿದೆ.

ಇದನ್ನೂ ಓದಿ: ಧರ್ಮಸ್ಥಳ: ಶ್ರೀ ಮಂಜುನಾಥ ಸ್ವಾಮಿ ಅ.ಹಿ.ಪ್ರಾ.ಶಾಲೆ ಧರ್ಮಸ್ಥಳದಲ್ಲಿ ವಾರ್ಷಿಕೋತ್ಸವದ ಪ್ರಯುಕ್ತ ಸಾಂಸ್ಕೃತಿಕ ಮತ್ತು ಆಟೋಟ ಸ್ಪರ್ಧೆಗಳ ಬಹುಮಾನ ವಿತರಣಾ ಕಾರ್ಯಕ್ರಮ

ಮೃತಪಟ್ಟವರನ್ನು ಪಟ್ಟೆ ಮಾಗಂದಡಿ ನಿವಾಸಿ ಅಶೋಕ್ ಶೆಟ್ಟಿ ಎಂದು ಗುರುತಿಸಲಾಗಿದೆ. ಅಶೋಕ್ ಶೆಟ್ಟಿಯವರು ರೈತರಾಗಿದ್ದು, ತಮ್ಮ ಗದ್ದೆಯಲ್ಲಿನ ಕಳೆ ನಿವಾರಣೆಗೆ ಜೌಷದಿ ಸಿಂಪಡಿಸುತ್ತಿದ್ದು, ಈ ಸಂದರ್ಭ ಗದ್ದೆಯಲ್ಲೇ ಕುಸಿದು ಬಿದ್ದಿದ್ದಾರೆ.

ಸ್ವಲ್ಪ ಸಮಯ ಗದ್ದೆಯಲ್ಲಿಯೇ ಹೊರಳಾಡಿದ್ದು, ಯಾರೂ ನೋಡಿರಲಿಲ್ಲ, ಬಳಿಕ ಅದೇ ಹಾದಿಯಲ್ಲಿ ಹೋಗುತ್ತಿದ್ದ ಮಹಿಳೆ ಗಮನಿಸಿದ್ದಾರೆ, ಕೂಡಲೇ ಅಶೋಕ್ ಅವರನ್ನು ಅಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಮೃತ ಪಟ್ಟಿದ್ದು.

ಸಾವಿಗೆ ಸರಿಯಾದ ಕಾರಣ ತಿಳಿದು ಬಂದಿಲ್ಲ. ಮೃತರು ಪತ್ನಿ, ಓರ್ವ ಪುತ್ರ ಓರ್ವ ಪುತ್ರಿಯರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *