Wed. Jan 8th, 2025

Bantwal: ಗಸ್ತು ಅರಣ್ಯ ಪಾಲಕರ ಮತ್ತು ಅರಣ್ಯ ವೀಕ್ಷಕರ ಸಂಘದ ವಾರ್ಷಿಕ ಮಹಾಸಭೆ ಹಾಗೂ ದಿನಚರಿ ಬಿಡುಗಡೆ

ಬಂಟ್ವಾಳ:(ಜ.4) ಕರ್ನಾಟಕ ರಾಜ್ಯ ಗಸ್ತು ಅರಣ್ಯ ಪಾಲಕರ ಮತ್ತು ಅರಣ್ಯ ವೀಕ್ಷಕರ ಸಂಘ (ರಿ.) ಇದರ 2024-25ನೇ ಸಾಲಿನ ವಾರ್ಷಿಕ ಮಹಾಸಭೆ ಹಾಗೂ ದಿನಚರಿ ಬಿಡುಗಡೆ ಕಾರ್ಯಕ್ರಮವು ಜ.4ರಂದು ಬಿಸಿರೋಡಿನ ರೋಟರಿ ಕ್ಲಬ್ ಬಂಟ್ವಾಳದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಮಾಜಿ ಸಚಿವ ರಮಾನಾಥ ರೈ ಅವರು ಮಾತನಾಡಿ, ಅರಣ್ಯ ಇಲಾಖೆಯ ಒಳಹೊರವನೋಟವನ್ನು ಅರ್ಥ ಮಾಡಿಕೊಂಡು, ಪಕೃತಿಗೆ ಪೂರಕವಾಗಿ ಆಗಬೇಕಾಗಿರುವ ಕೆಲಸಗಳನ್ನು ಅರಣ್ಯ ಮಂತ್ರಿಯಾಗಿ ಮಾಡಿದ್ದೇನೆ ಎಂದು ಹೇಳಿದರು.

ಅರಣ್ಯ ಇಲಾಖೆಯಲ್ಲಿ ವಿಶಿಷ್ಟತೆ ಇದೆ. ಯಾಕೆಂದರೆ ನಾನು ಪೂರ್ಣಕಾಲಿಕ ಅರಣ್ಯ ಮಂತ್ರಿಯಾಗಿ ಅಲ್ಲಿನ ವಿಚಾರಗಳನ್ನು ಮನಗಂಡಿದ್ದೇನೆ.
ವನ್ಯ ಸಂರಕ್ಷಣೆಯಿಂದ ವ್ಯಕ್ತಿಗಿಂತಲೂ ಜೀವಸಂಕುಲಗಳಿಗೆ ಪ್ರಯೋಜನವಾಗುತ್ತದೆ ಎಂದು ತಿಳಿಸಿದರು. ಅರಣ್ಯ ,ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆ ಅಗತ್ಯವಾಗಿದ್ದು, ನಮ್ಮ ಮೊದಲ ಆಧ್ಯತೆ ಮತ್ತು ಕರ್ತವ್ಯಎಂದು ಹೇಳಬಯಸುತ್ತೇನೆ.ಪಕೃತಿ ರಕ್ಷಣೆಯ ಹೊಣೆಗಾರಿಕೆ ಜವಬ್ದಾರಿಯಾಗಿದೆ. ಹವಮಾನ ಬದಲಾವಣೆ ಪರಿಸರದ ಮೇಲೆ ಬಹಳ ದೊಡ್ಡ ಹಾನಿಯಾಗುತ್ತಿರುವುದು ನಮ್ಕ ಕಣ್ಣಮುಂದಿರುವ ಗಂಭೀರ ವಿಷಯವಾಗಿದೆ.


ಅರಣ್ಯ ಒತ್ತುವರಿಯಿಂದ ಜೀವಸಂಕುಲಗಳಿಗೆ ಹಾನಿಯಾಗಬಹುದು ಈ ನಿಟ್ಟಿನಲ್ಲಿ ಅರಣ್ಯ ಉಳಿಸಿಕೊಂಡು, ಬೆಳೆಸುವ ಕಾರ್ಯವನ್ನು ಮಾಡಬೇಕು ಎಂದು ತಿಳಿಸಿದರು.
ಸಿಬ್ಬಂದಿಗಳ ಕೊರತೆ ಇಲಾಖೆಯಲ್ಲಿ ಇದ್ದು, ಇಂತಹ ಪರಿಸ್ಥಿತಿ ಮಧ್ಯೆ ಕರ್ತವ್ಯ ಮಾಡಿಕೊಂಡು ಅರಣ್ಯದ ಸೇವೆ ಮಾಡುವ ವರ ಕಷ್ಟದ ಬಗ್ಗೆ ಅರಿವಿದೆ ಎಂದು ತಿಳಿಸಿದರು.
ಪೋಲೀಸ್ ಇಲಾಖೆಯವರಿಗೆ ಸಿಗುವ ಸೌಲಭ್ಯಗಳನ್ನು ಅರಣ್ಯ ಇಲಾಖೆಯವರಿಗೂ ಸಿಗುವ ನಿಟ್ಟಿನಲ್ಲಿ ನಿಮ್ಮ ಸಂಘದ ಮೂಲಕ ಹೋರಾಟ ನಡೆಯಲಿ ಎಂದು ‌ತಿಳಿಸಿದರು.


ಸಂಘದ ಜಿಲ್ಲಾ ಅಧ್ಯಕ್ಷ ಜಿತೇಶ್ ಅವರು ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಸಿಬ್ಬಂದಿಗಳ ಸಮಸ್ಯೆಗಳ ಬಗ್ಗೆ ವಿಸ್ತಾರವಾದ ಮಾಹಿತಿಯನ್ನು ನೀಡಿದರು.ಮತ್ತು ಮುಂದಿನ ದಿನಗಳಲ್ಲಿ ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಹಾಕಿಕೊಳ್ಳುವ ಮಾಹಿತಿ ನೀಡಿದರು. ಸಿಬ್ಬಂದಿಗಳ ಕೊರತೆ ಮಧ್ಯೆ ಕರ್ತವ್ಯ ಲೋಪವಾಗದಂತೆ ಸೇವೆ ಮಾಡುವ ಸಹಸಿಬ್ಬಂದಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

2025 ರ ದಿನಚರಿ ಬಿಡುಗಡೆಗೊಳಿಸಿದ ಗೇರು ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಡಿ.ಎಸ್. ಮಾತನಾಡಿ, ವಿದ್ಯಾರ್ಥಿಗಳು ಅವಕಾಶಗಳನ್ನು ಉಪಯೋಗಿಸಿಕೊಂಡು ಸರಕಾರಿ ಇಲಾಖೆಯಲ್ಲಿ ಸೇವೆ ಸಲ್ಲಿಸಲು ಪ್ರಯತ್ನ ಮಾಡಿ ಎಂದು ತಿಳಿಸಿದರು.
ಬೂಡ ಅಧ್ಯಕ್ಷ ಬೇಬಿ‌ಕುಂದರ್ ಮಾತನಾಡಿ, ಅರಣ್ಯ ಇಲಾಖೆಯಿಂದ ಪರಿಸರದ ಸಂರಕ್ಷಣೆ ಬಗ್ಗೆ ಇನ್ನಷ್ಟು ಮಾಹಿತಿ ಕಾರ್ಯಕ್ರಮಗಳು ನಡೆಯಲಿ ಎಂದು ಶುಭ ಹಾರೈಸಿದರು.


ಮಂಗಳೂರು ವಲಯದ ವಲಯ ಅರಣ್ಯಾಧಿಕಾರಿ ರಾಜೇಶ್ ಬಳಿಗಾರ್ ಮಾತನಾಡಿ ಸಿಬ್ಬಂದಿಗಳ ಅಗತ್ಯ ಮೂರು ಬೇಡಿಕೆಗಳು ಸರಕಾರದ ಗಮನಕ್ಕೆ ತರುವ ಕಾರ್ಯ ಆಗಬೇಕಾಗಿದೆ ಎಂದು ತಿಳಿಸಿದರು. ಸಿಬ್ಬಂದಿಗಳ ಕೊರತೆ ನೀಗಿಸಲು ಪ್ರಯತ್ನವಾಗಬೇಕಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಜೊತೆ ಮಾಹಿತಿ ಕಾರ್ಯಗಾರ ಅತೀ ಮುಖ್ಯವಾದ ವಿಚಾರವಾಗಿದೆ ಎಂದು ತಿಳಿಸಿದರು.
ಸರಕಾರಿ ನೌಕರರ ಸಂಘದ ಬಂಟ್ವಾಳ ತಾಲೂಕು ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಸುಳ್ಯ ಉಪವಲಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್ ಕುಮಾರ್ ಶೆಟ್ಟಿ,ಪುತ್ತೂರು ವಲಯ ಅರಣ್ಯಾಧಿಕಾರಿ ಕಿರಣ್, ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ವಿಮಲ್ ಬಾಬು, ಉಪ್ಪಿನಂಗಡಿ ವಲಯ ಅಧಿಕಾರಿ ರಾಘವೇಂದ್ರ, ಸುಳ್ಯ ವಲಯ ಅರಣ್ಯಾಧಿಕಾರಿ ಮಂಜುನಾಥ್ ಸಂಘದ ಪ್ರಧಾನ ಕಾರ್ಯದರ್ಶಿ ರಸೂಲಸಾಬ, ಖಜಾಂಚಿ ಮನೋಹರ್ ಪಿ.ಬಿ. ಉಪಸ್ಥಿತರಿದ್ದರು.

ಉಪಾಧ್ಯಕ್ಷ ನಿಂಗರಾಜು ಕೊಣ್ಣೂರು ಪ್ರಸ್ತಾವಿಕ ಮಾತನಾಡಿದರು.
ಜಿಲ್ಲಾ ಗೌರವಾಧ್ಯಕ್ಷ ಚಿದಾನಂದ ಜಿ.ಸ್ವಾಗತಿಸಿ, ವೃತ್ತ ಸಂಘದ ಅಧ್ಯಕ್ಷ ಜಗದೀಶ್ ಧನ್ಯವಾದ ನೀಡಿದರು.
ಸಭಾ ಕಾರ್ಯಕ್ರಮದ ಬಳಿಕ ಉರಗ ತಜ್ಞ ಸ್ನೇಕ್ ಕಿರಣ್ ಮಂಗಳೂರು ಇವರಿಂದ ‘ಹಾವು ಮತ್ತು ನಾವು ಕಾರ್ಯಗಾರ’ ಎಂಬ ಮಾಹಿತಿ ಶಿಬಿರ ನಡೆಯಿತು.


ರಾಷ್ಟ್ರ ಮಟ್ಟದ ಕ್ರೀಡಾ ಕ್ಷೇತ್ರದ ಸಾಧನೆಗಾಗಿ ಎಂಟು ಸಿಬ್ಬಂದಿಗಳನ್ನು ಗುರುತಿಸಿ ಗೌರವಿಸಲಾಯಿತು. ನಿವೃತ್ತಿಯಾದ ಅರಣ್ಯ ರಕ್ಷಕಿ ವಾರಿಜ ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *