Sat. Jan 11th, 2025

Belthangady: ಮಂದಿರ ಮಹಾಸಂಘ ಮತ್ತು ಶ್ರೀ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನದ ಸಂಯುಕ್ತ ಆಶ್ರಯದಲ್ಲಿ ಸಾಮೂಹಿಕ ಆರತಿ

ಬೆಳ್ತಂಗಡಿ:(ಜ.11) ಸಾಮೂಹಿಕವಾಗಿ ಭಗವಂತನ ಉಪಾಸನೆ ಮಾಡುವುದಕ್ಕೆ ಸನಾತನ ಧರ್ಮದಲ್ಲಿ ವಿಶೇಷವಾದ ಮಹತ್ವವಿದೆ. ಎಲ್ಲರೂ ಸೇರಿ,ಒಂದೇ ಮನಸ್ಸಿನಿಂದ ಸಾಮೂಹಿಕವಾಗಿ ಭಗವಂತನ ಉಪಾಸನೆ ಮಾಡುವುದರಿಂದ ಭಗವಂತನ ವಿಶೇಷ ಕೃಪೆ ನಮ್ಮ ಮೇಲೆ ಆಗುತ್ತದೆ ಮತ್ತು ಹಿಂದೂಗಳಲ್ಲಿ ಸಂಘಟನೆ ನಿರ್ಮಾಣವಾಗುತ್ತದೆ.

ಇದನ್ನೂ ಓದಿ: Puttur: ಅಂತರಾಜ್ಯ ಮನೆ ಕಳ್ಳತನ ಆರೋಪಿಯನ್ನು ಬಂಧಿಸಿದ ಪೊಲೀಸರು

ಜನವರಿ 4 ಮತ್ತು 5ರಂದು ಬೆಂಗಳೂರಿನಲ್ಲಿ ಜರುಗಿದ ರಾಜ್ಯಮಟ್ಟದ ಮಂದಿರ ಮಹಾಸಂಘದ ಅಧಿವೇಶನದಲ್ಲಿ ಎಲ್ಲಾ ದೇವಸ್ಥಾನಗಳಲ್ಲಿ ವಾರದಲ್ಲಿ ಒಂದು ದಿನ ಎಲ್ಲಾ ಹಿಂದೂ ಬಾಂಧವರು ಜಾತಿ ಸಂಪ್ರದಾಯ ಎಲ್ಲವನ್ನು ಮರೆತು ದೇವಸ್ಥಾನದಲ್ಲಿ ಒಟ್ಟಿಗೆ ಸೇರಿ ಭಗವಂತನ ಸಾಮೂಹಿಕ ಮಹಾ ಆರತಿಯನ್ನು ಮಾಡಲು ನಿಶ್ಚಯಿಸಿದರು.

ಇದರ ಮುಖ್ಯ ಉದ್ದೇಶವೆಂದರೆ ದೇವಸ್ಥಾನಗಳ ಸಂರಕ್ಷಣೆ, ಹಿಂದೂ ಸಮಾಜದ ಸಂಘಟನೆ ಹಾಗೂ ದೇವಸ್ಥಾನಗಳನ್ನು ಧರ್ಮ ಪ್ರಚಾರ ಕೇಂದ್ರವನ್ನಾಗಿಸುವುದು. ಈ ನಿಟ್ಟಿನಲ್ಲಿ ಮುಂಡಾಜೆಯಲ್ಲಿನ ಶ್ರೀ ಪರಶುರಾಮ ದೇವಸ್ಥಾನದಲ್ಲಿ ವೈಕುಂಠ ಏಕಾದಶಿಯ ಶುಭ ದಿನದಂದು ಸಾಮೂಹಿಕ ಆರತಿಯನ್ನು ಏರ್ಪಡಿಸಲಾಯಿತು.

ಈ ಸಂದರ್ಭದಲ್ಲಿ ಹಿಂದೂಗಳಿಗೆ ಧರ್ಮ ಶಿಕ್ಷಣದ ಅಗತ್ಯ, ಧರ್ಮಚರಣೆಯ ಮಹತ್ವವನ್ನು ಸನಾತನ ಸಂಸ್ಥೆಯ ಶ್ರೀ ಆನಂದ ಗೌಡ ಇವರು ಮಾರ್ಗದರ್ಶನವನ್ನು ಮಾಡಿದರು. ಉಪಸ್ಥಿತ ಎಲ್ಲಾ ಧರ್ಮ ಪ್ರೇಮಿಗಳು ಹಿಂದೂ ಧರ್ಮವನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ, ನಾವೆಲ್ಲರೂ ಹಿಂದೂ ಧರ್ಮದ ರಕ್ಷಣೆಯನ್ನು ಮಾಡಲು ಕಟಿಬದ್ಧರಾಗಿದ್ದೇವೆ ಎಂದು ಪ್ರತಿಜ್ಞೆಯನ್ನು ಮಾಡಿದರು.

ವೈಕುಂಠ ಏಕಾದಶಿಯ ನಿಮಿತ್ತ ಭಗವಾನ್ ಶ್ರೀ ಕೃಷ್ಣನ ನಾಮಜಪವನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಮಂದಿರ ಮಹಾಸಂಘದ ಶ್ರೀ ಬಾಲಕೃಷ್ಣ ಗೌಡ, ಹಿಂದೂ ಜನಜಾಗೃತಿ ಸಮಿತಿಯ ಶ್ರೀ ಶಶಿಧರ್ , ದೇವಸ್ಥಾನದ ಆಡಳಿತ ಮಂಡಳಿಯವರು, ಅರ್ಚಕರು, ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು. ದೇವಸ್ಥಾನದ ಆಡಳಿತ ಮಂಡಳಿಯ ಶ್ರೀ ನಾರಾಯಣ ಪಡ್ಕೆ ಯವರು ಎಲ್ಲರನ್ನು ಅಭಿನಂದಿಸಿದರು.

Leave a Reply

Your email address will not be published. Required fields are marked *