ಬೆಳ್ತಂಗಡಿ:(ಜ.11) ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾನಿಲಯ ಮೈಸೂರು ಇವರು ನಡೆಸಿದ ಭರತನಾಟ್ಯ ಜೂನಿಯರ್ ಗ್ರೇಡ್ , ಸೀನಿಯರ್ ಮತ್ತು ವಿದ್ವತ್ ಪೂರ್ವ ಪರೀಕ್ಷೆಯಲ್ಲಿ ಉತ್ತಮ ಶ್ರೇಯಾಂಕದೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ಶ್ರೀ ಶಾರದ ಕಲಾ ಶಾಲೆ ಪದ್ಮುಂಜ ಶಾಖೆಯ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.
ಇದನ್ನೂ ಓದಿ: ಉಜಿರೆ: ಔಷಧೀಯ ಸಸ್ಯಗಳ ವೈವಿಧ್ಯ ಮತ್ತು ಸಂರಕ್ಷಣೆ: ರಾಷ್ಟ್ರೀಯ ವಿಚಾರ ಸಂಕಿರಣ
ವಿದ್ವತ್ ಪೂರ್ವ ಪರೀಕ್ಷೆಯಲ್ಲಿ ಶ್ರೇಯಾ, ಸೀನಿಯರ್ ಪರೀಕ್ಷೆಯಲ್ಲಿ ಹರ್ಷ, ಮರ್ಷ, ದಿಶಾ.ಜಿ., ಜೂನಿಯರ್ ಪರೀಕ್ಷೆಯಲ್ಲಿ ವಿಮರ್ಶಾ,ಜ್ಞಾನಶ್ರೀ, ಪ್ರಾರ್ಥನಾ, ಅದಿತಿ, ರಿಷಿಕಾ ಕೆ.ಯು, ಲಿತಿಕಾ, ವೀಕ್ಷಾ ಹಾಗೂ ಚೈತನ್ಯ ಉತ್ತಮ ಶ್ರೇಯಾಂಕದೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಶ್ರೀ ಶಾರದಾ ಕಲಾ ಕೇಂದ್ರ ಪುತ್ತೂರು ಇದರ ನಿರ್ದೇಶಕರಾದ ವಿದ್ವಾನ್ ಶ್ರೀ ಸುದರ್ಶನ್ ಎಂಎಲ್ ಭಟ್ ಇವರ ಶಿಷ್ಯೆ ಶ್ರೀ ಶಾರದಾ ಕಲಾ ಶಾಲೆ ಪದ್ಮುಂಜ ಶಾಖೆಯ ಶಿಕ್ಷಕಿ ವಿದುಷಿ ಶ್ರೀಮತಿ ಡಿಂಪಲ್ ಶಿವರಾಜ್ ವಿದ್ಯಾರ್ಥಿ ಗಳನ್ನು ಅಭಿನಂದಿಸಿದ್ದಾರೆ.