Sun. Jan 19th, 2025

Bengaluru: ಒಳ ಉಡುಪು ಧರಿಸಲ್ಲ, ಹೆಚ್ಚಾಗಿ ನೀಲಿ ಚಿತ್ರಗಳನ್ನು ನೋಡುತ್ತಿದ್ದ ವಿಕೃತ ಕಾಮಿ – ಹಸುಗಳ ಕೆಚ್ಚಲು ಕೊಯ್ದ ಆರೋಪಿ ಸೈಯದ್ ನಸ್ರು ವಿಕೃತ ಮನಸ್ಥಿತಿ ಕಂಡು ಪೋಲಿಸರೇ ಶಾಕ್!!

ಬೆಂಗಳೂರು:(ಜ.14) ಚಾಮರಾಜಪೇಟೆಯ ಓಲ್ಡ್​ ಪೆನ್ಷನ್​ ಮೊಹಲ್ಲಾದ ವಿನಾಯಕನಗರದಲ್ಲಿ ಹಸುಗಳ ಕೆಚ್ಚಲು ಕೊಯ್ದು ಕ್ರೌರ್ಯ ಮೆರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನನ್ನು ಕಾಟನ್ ​ಪೇಟೆ ಪೊಲೀಸರು ಬಂಧಿಸಿದ್ದಾರೆ. ಸೈಯದ್ ನಸ್ರು (30) ಬಂಧಿತ ಆರೋಪಿ. ಬಿಹಾರದ ಚಂಪರಣ್ ಮೂಲದ ಆರೋಪಿ ಸೈಯದ್ ನಸ್ರು, ಕೃತ್ಯ ನಡೆದ ಸ್ಥಳದಿಂದ 50 ಮೀಟರ್ ಅಂತರದಲ್ಲಿರುವ ಪ್ಲಾಸ್ಟಿಕ್​​​, ಬಟ್ಟೆ ಹೊಲಿಯುವ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನು ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಬಂದಾರು : ಪಾಣೆಕಲ್ಲು ಶಿರಾಡಿ ಗ್ರಾಮ ದೈವ ಸಪರಿವಾರ ದೈವಸ್ಥಾನ ಕಾಲಾವಧಿ ನೇಮೋತ್ಸವದ ಸಮಾಲೋಚನಾ ಸಭೆ

ಈ ಸೈಯದ್ ಬಿಹಾರ ಮೂಲದವನು. ಬೆಂಗಳೂರಿನ ಹಳೆ ಪೆನ್ಷನ್ ಮೊಹಲ್ಲಾದಲ್ಲಿ ಅಂದ್ರೆ ಕೃತ್ಯ ನಡೆದ 50 ಮೀಟರ್ ದೂರದಲ್ಲಿರುವ ಸಣ್ಣದೊಂದು ಪ್ಲಾಸ್ಟಿಕ್ ಹಾಗೂ ಬಟ್ಟೆ ಬ್ಯಾಗ್ ಹೊಲಿಯುವ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲೇ ತಿಂದು ಅಲ್ಲೇ ಮಲಗಿಕೊಳ್ಳುತ್ತಿದ್ದ.


ಈತ ಸ್ನಾನ ಮಾಡುತ್ತಿದ್ದದ್ದು ಮಾತ್ರ ವಾರಕ್ಕೊಮ್ಮೆ. ಅಲ್ಲದೇ ಈತನಿಗೆ ಹಿಂದಿ ಭಾಷೆ ಕೂಡ ಬರುವುದಿಲ್ಲ. ತಾನೆಲ್ಲಿದ್ದಿನಿ, ಇದು ಯಾವ ಊರು ಎನ್ನುವುದು ಕೂಡ ಗೊತ್ತಿಲ್ಲವಂತೆ.

ಕೇವಲ ಲುಂಗಿ ಉಟ್ಕೊಳ್ತಿದ್ದ ಈ ವಿಚಿತ್ರ ಪ್ರಾಣಿ ಒಳ ಉಡುಪು ಕೂಡ ಧರಿಸೋದಿಲ್ಲವಂತೆ. ಅಲ್ಲದೇ ತನ್ನ ತಲೆ ಕೂದಲನ್ನ ತಾನೆ ಬೋಳಿಸಿಕೊಳ್ಳುತ್ತಿದ್ದ. ಜೊತೆಗೆ ಅತಿಹೆಚ್ಚಾಗಿ ನೀಲಿ ಚಿತ್ರಗಳನ್ನ ನೋಡುತ್ತಿದ್ದನಂತೆ. ಇನ್ನು ಒಂದು ವರ್ಷದ ಹಿಂದೆ ಕೂಡ ಹಸುಗಳ ಜೊತೆಗೆ ವಿಚಿತ್ರವಾಗಿ ನಡೆದುಕೊಂಡಿದ್ದ ಎನ್ನುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.


ಇನ್ನು ಆರೋಪಿ ಬಂಧನ ವಿಚಾರ ತಿಳಿದು ಪ್ರತಿಕ್ರಿಯಿಸಿರುವ ಹಸುವಿನ ಮಾಲೀಕ ಕರ್ಣ, ಆರೋಪಿಯನ್ನ ಈಗ ಮೆಂಟಲ್ ಎಂದು ಹೇಳುತ್ತಿದ್ದಾರೆ. ಮೆಂಟಲ್ ಆಗಿದ್ರೆ ಹೇಗೆ ಈ ಕೃತ್ಯ ಎಸಗುತ್ತಿದ್ದ. ಮೊದಲು ಅಂಗಡಿ ಮಾಲೀಕನನ್ನ ಅರೆಸ್ಟ್ ಮಾಡಬೇಕು. ಮೆಂಟಲ್ ಈ ರೀತಿ ಮಾಡೋದಕ್ಕೆ ಸಾಧ್ಯ ನಾ? ಅಲ್ಲದೇ ಕೃತ್ಯ ಮುಂಜಾನೆ ನಡೆದಿದೆ. ಆಗ ಯಾವ ಬಾರ್ ಓಪನ್ ಇರುತ್ತೆ. ಬ್ಯಾಗ್‌ ಅಂಗಡಿಯವನಿಗೆ ಹಸುವಿನಿಂದ ತೊಂದರೆ ಆಗ್ತಿತ್ತು ಅನಿಸುತ್ತೆ. ಅದಕ್ಕೆ ಈ ಕೃತ್ಯ ಮಾಡಿಸಿರಬೇಕು ಎಂದು ಆರೋಪಿಸಿದ್ದಾರೆ.


ಅಲ್ಲದೇ ಈ ಕೃತ್ಯ ಒಬ್ಬನೇ ಮಾಡೋದಕ್ಕೆ ಸಾಧ್ಯ ಇಲ್ಲ. ಇದರ ಹಿಂದೆ ಯಾರೋ ಇದ್ದಾರೆ. ಆರೋಪಿಯನ್ನ ತನಿಖೆಗೆ ಒಳಪಡಿಸದೇ ಒಂದೇ ದಿನಕ್ಕೆ ತರಾತುರಿಯಲ್ಲಿ ಜೈಲಿಗೆ ಹಾಕಿದ್ದು ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ. ಅಷ್ಟೇ ಅಲ್ಲ ಹೆತ್ತ ತಾಯಿಯ ಎದೆ ಹಾಲು ಕುಡಿದವನು ಹಸುವಿನ ಎದೆ ಬಗೆದಿದ್ದಾನಲ್ಲ ಎಂದು ಮರುಗಿದ್ದಾರೆ.
ಇತ್ತ ಕೆಚ್ಚಲು ಕೊಯ್ದ ಮೂರು ಹಸುಗಳಿಗೆ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.. ಆದ್ರೆ ಮೂಕ ಪ್ರಾಣಿ ನೋವಿನಲ್ಲಿಯೇ ರಾತ್ರಿಯೆಲ್ಲ ಒದ್ದಾಡಿದೆ. ಅದರ ಆರ್ತನಾದ ನಿಜಕ್ಕೂ ಕರುಳು ಹಿಂಡುವಂತಿದೆ.

Leave a Reply

Your email address will not be published. Required fields are marked *