ಉಜಿರೆ:(ಜ.14) ಬನಶಂಕರಿ ಕ್ರಿಯೇಶನ್ಸ್ ಉಜಿರೆ ಅರ್ಪಿಸುವ ಲಕ್ಷ್ಮೀ ಜನಾರ್ದನ ಎನ್ನುವ ಕನ್ನಡ ಭಕ್ತಿಗೀತೆಯನ್ನು ಉಜಿರೆಯ ಜನಾರ್ದನ ದೇವಸ್ಥಾನದಲ್ಲಿ ಬಿಡುಗಡೆಗೊಳಿಸಲಾಯಿತು.
ಧ್ವನಿ ಸುರುಳಿಯನ್ನು ಉಜಿರೆ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶರತ್ ಕೃಷ್ಣ ಪಡ್ವೆಟ್ನಾಯ ಮತ್ತು ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ನ ಸಂಚಾಲಕ ಮೋಹನ್ ಕುಮಾರ್ ಅವರು ಬಿಡುಗಡೆಗೊಳಿಸಿದರು.
ಬಳಿಕ ಮಾತನಾಡಿದ ಶರತ್ ಕೃಷ್ಣ ಪಡ್ವೆಟ್ನಾಯರವರು, ಈ ಕ್ಷೇತ್ರದ ದೇವರಾದ ಜನಾರ್ದನ ದೇವರ ಭಕ್ತಿಗೆ ಪಾತ್ರರಾಗಲು ಕೇಶವ ದೇವಾಂಗ ಅವರ ನೇತೃತ್ವದ ತಂಡ ಭಕ್ತಿಗೀತೆಯನ್ನು ರಚಿಸಿ, ದೇವರ ಸನ್ನಿಧಿಯಲ್ಲಿ ಇದನ್ನು ಇಂದು ಬಿಡುಗಡೆಗೊಳಿಸಿದ್ದಾರೆ. ಕೇಶವ ಮತ್ತು ಅವರ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತಿದ್ದೇನೆ. ದೇವರ ಅನುಗ್ರಹ ಅವರಿಗೆ ಪ್ರಾಪ್ತಿಯಾಗಲಿ ಎಂದರು.
ಇನ್ನಷ್ಟು ಇಂತಹ ಕಾರ್ಯಗಳು ಅವರಿಂದ ನಡೆಯಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ, ರಾಜೇಶ್ ಪೈ ಸಂಧ್ಯಾ ಟ್ರೇಡರ್ಸ್ ಉಜಿರೆ, ರಮೇಶ್ ಪ್ರಭು ಉದ್ಯಮಿ ಉಜಿರೆ, ಗಣೇಶ್ ಡ್ರೈವಿಂಗ್ ಸ್ಕೂಲ್ ನ ಮಾಲಕ ರಾಮ್ ದಾಸ್ ಭಂಡಾರ್ ಕಾರ್ ಉಜಿರೆ, ಶಶಿಧರ್ ಬನಶಂಕರಿ ಮುಂಡಾಜೆ, ರಾಜೇಶ್ ಅತ್ತಾಜೆ ಉಜಿರೆ, ಹರೀಶ್ ವಿನಾಯಕ ನಗರ ಉಜಿರೆ,
ರಾಘವೇಂದ್ರ ಗೌಡ ಪಾರ ಉಜಿರೆ, ಕೆ ಬಾಲಕೃಷ್ಣ ಗೌಡ ಪಾರ ಉಜಿರೆ, ಶಿವಪ್ರಸಾದ್ ವಿನಾಯಕ ನಗರ ಉಜಿರೆ, ರಾಜೇಶ್ ನೇಕಾರ ಅತ್ತಾಜೆ ಉಜಿರೆ, ಹರೀಶ್ ನೇಕಾರ ವಿನಾಯಕ ನಗರ ಉಜಿರೆ ಉಪಸ್ಥಿತರಿದ್ದರು. ಈ ಧ್ವನಿ ಸುರುಳಿಗೆ ಕಮಲಾಕ್ಷ ಗುಡಿಗಾರ್ ಧರ್ಮಸ್ಥಳ ಇವರ ಸಾಹಿತ್ಯ ಮತ್ತು ಸಂಗೀತವಿದೆ. ಕೇಶವ ದೇವಾಂಗ ಬನಶಂಕರಿ ಇವರ ಗಾಯನ ಇದೆ.
ಧ್ವನಿ ಸುರುಳಿಯ ಹಿಂದಿನ ಪ್ರಮುಖರು..!
ಸಾಹಿತ್ಯ ಮತ್ತು ಸಂಗೀತ
ಕಮಲಾಕ್ಷ ಗುಡಿಗಾರ್ ಧರ್ಮಸ್ಥಳ
ಗಾಯನ
ಕೇಶವ ದೇವಾಂಗ ಬನಶಂಕರಿ
ಕೋರಸ್
ವಾತ್ಸಲ್ಯ .ಪಿ.ಎಸ್
ಆಶಿಕಾ .ಕೆ.ಹೆಚ್
ಅನಿಕ.ಪಿ
ನಿರ್ಮಾಣ
ಸನ್ವಿತ್ ಎಸ್ ಉಜಿರೆ
ರೆಕಾರ್ಡಿಂಗ್
ಸಂಗೀತ್ ಸ್ಟುಡಿಯೋ ಉಜಿರೆ
ಪೋಸ್ಟರ್ & ಸಂಕಲನ
ಸಹನ್ ಎಂ.ಎಸ್ ಉಜಿರೆ
ತಾಂತ್ರಿಕ ಸಹಕಾರ
ಸುರೇಂದ್ರ ಜೈನ್ ನಾರಾವಿ
ಸಂಪೂರ್ಣ ಸಹಕಾರ
ಬನಶಂಕರಿ ಸ್ಟೀಲ್ಸ್ ಉಜಿರೆ