Wed. Jan 15th, 2025

Belthangady: ತಣ್ಣೀರುಪಂತ ಪ್ರಾ.ಕೃ.ಪ.ಸ. ಸಂಘ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಗೆ ಬಿಜೆಪಿ ಬೆಂಬಲಿತ ಸಹಕಾರ ಭಾರತೀಯ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

ತಣ್ಣೀರುಪಂತ :(ಜ.14) ತಣ್ಣೀರುಪಂತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಗೆ ಬಿಜೆಪಿ ಬೆಂಬಲಿತ ಸಹಕಾರ ಭಾರತೀಯ ಅಭ್ಯರ್ಥಿಗಳಾಗಿ ಸಾಮಾನ್ಯ ಕ್ಷೇತ್ರದಿಂದ ಜಗದೀಶ್ ಶೆಟ್ಟಿ ಮೈರ,

ಇದನ್ನೂ ಓದಿ: ಮೊಗ್ರು : ಮುಗೇರಡ್ಕ ಶಿರಾಡಿ ರಾಜನ್ ದೈವದ ನೂತನ ಹುಲಿ ಬಂಡಿ ಮತ್ತು ಪಲ್ಲಕ್ಕಿಯ ಪುರಪ್ರವೇಶ

ಜಯಾನಂದ ಕಲ್ಲಾಪು, ಸಾಮ್ರಾಟ್ ಕಲ್ಲೇರಿ, ಪ್ರಭಾಕರ ಗೌಡ ಪೋಸಂದೋಡಿ, ಸುನಿಲ್ ಗೌಡ ಅಣವು, ರೋಹಿತ್ ಕುಪ್ಪೆಟ್ಟಿ, ಹಿಂದುಳಿದ ವರ್ಗ ಎ ಕ್ಷೇತ್ರ ದಿಂದ ರಜನಿನಾಥ್ ಮುಂದಿಲ ,

ಹಿಂದುಳಿದ ಬಿ ಕ್ಷೇತ್ರ ದಿಂದ ಕೃಷ್ಣಪ್ಪ ಗೌಡ , ಸಾಮಾನ್ಯ ಮಹಿಳಾ ಕ್ಷೇತ್ರದಿಂದ ಜಯಂತಿ ಪಾಲೇದು, ಸರೋಜಿನಿ ವಿಜಯ ಗೌಡ ಪರಿಶಿಷ್ಟ ಜಾತಿ ಕ್ಷೇತ್ರ ದಿಂದ ಶ್ರೀನಿವಾಸ್ ಅಳಕ್ಕೆ ಪರಿಶಿಷ್ಟ ಪಂಗಡದಿಂದ ಸುರೇಶ್ ಹೆಚ್. ಎಲ್ ಇವರುಗಳು ಬಿ.ವಿ. ಪ್ರತಿಮಾ ರಿಟರ್ನಿಂಗ್ ಅಧಿಕಾರಿಯವರಿಗೆ ಜ 14 ರಂದು ಸಂಘದ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಚುನಾವಣಾ ಪ್ರಭಾರಿಗಳಾದ ಪ್ರವೀಣ್ ರೈ ಬಾರ್ಯ, ನಂದನ್ ಕುಮಾರ್, ಕಣಿಯೂರು ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಮಹೇಶ್ ಜೇಂಕ್ಯಾರ್ , ಮಿಥುನ್ ಕುಲಾಲ್, ಜಯರಾಮ್ ಆಚಾರ್ಯ, ಹಿರಿಯರಾದ ಪೂವಪ್ಪ ಬಂಗೇರ ಆಳಕ್ಕೆ, ದೇಜಪ್ಪ ಪೂಜಾರಿ ಆಳಕ್ಕೆ, ಶಕ್ತಿ ಕೇಂದ್ರ ಪ್ರಮುಖರು, ಜನಪ್ರತಿನಿಧಿಗಳು, ಬೂತ್ ಸಮಿತಿ ಪದಾಧಿಕಾರಿಗಳು, ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *