ಬೆಳ್ತಂಗಡಿ:(ಜ.15) ಶಕ್ತಿನಗರ ಕೊಲ್ಪೆದಬೈಲ್ ಮಾಲಾಡಿ ನಿವಾಸಿ ನಾಗೇಶ್ ಕುಲಾಲ್( 33) ಜ.13 ರಂದು ಬೆಳಗ್ಗೆ ಮನೆಯವರಲ್ಲಿ ಸಂಜೆ ಮನೆಗೆ ಬರುತ್ತೇನೆ ಎಂದು ಹೇಳಿ ಹೋಗಿದ್ದಾರೆ. ಆದರೆ ಸಂಜೆಯಾದರೂ ಮನೆಗೆ ಹಿಂತಿರುಗಲಿಲ್ಲ. ಎಲ್ಲೆಡೆ ಹುಡುಕಾಡಿದರೂ ಎಲ್ಲೂ ಪತ್ತೆಯಾಗಿರಲಿಲ್ಲ.
ಜ.14 ರಂದು ಧರ್ಮಸ್ಥಳ ನೇತ್ರಾವತಿ ನದಿಯಲ್ಲಿ ಮೃತದೇಹ ಪತ್ತೆಯಾಗಿದೆ. ನದಿಯಿಂದ ಮೃತದೇಹವನ್ನು ಶೌರ್ಯ ವಿಪತ್ತಿನ ಘಟಕದ ಸದಸ್ಯರು ಮೇಲಕ್ಕೆತ್ತಿದ್ದಾರೆ.
ಧರ್ಮಸ್ಥಳ ಪೋಲಿಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಈ ಸಂದರ್ಭದಲ್ಲಿ ಶಿಶಿಲ – ಅರಸಿನಮಕ್ಕಿ ಶೌರ್ಯ ವಿಪತ್ತಿನ ಘಟಕದ ಇಬ್ಬರು ಸದಸ್ಯರಾದ ರಮೇಶ್ ಹಾಗೂ ಅವಿನಾಶ್, ನೆರಿಯ ಘಟಕದ ಸ್ನೇಕ್ ಅನಿಲ್ ಹಾಗೂ ಧನ್ವಿ ಅಂಬ್ಯುಲೆನ್ಸ್ ನ ಧನೀಶ್ ಸ್ಥಳದಲ್ಲಿ ಇದ್ದರು.