ಕಾಸರಗೋಡು:(ಜ.18) ಎರಡು ತಿಂಗಳ ಹಿಂದೆ ಗಲ್ಫ್ ನಿಂದ ಮನೆಗೆ ಬಂದಿದ್ದ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಲಿಯಪರಂ ಮಾವಿಲಕಡಪ್ಪುರಂನ ಒರಿಯಾರ ಕೆಸಿ ಹೌಸ್‌ನ ಕೆ.ಸಿ.ಅಬ್ದುಲ್ ಖಾದರ್ ಎಂಬವರ ಪುತ್ರ ಪಿ.ಮುಹಮ್ಮದ್ ನವಾಝ್ (27) ಮೃತ ದುರ್ದೈವಿ. ಶುಕ್ರವಾರ ಸಂಜೆ 6:40ರ ಸುಮಾರಿಗೆ ಮನೆಯ ಎರಡನೇ ಮಹಡಿಯ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
ಇದನ್ನೂ ಓದಿ: ಸೂರತ್: ಹಿಂದೂ ಯುವತಿಯನ್ನು ಮದುವೆಯಾಗಲು ನಕಲಿ ಹಿಂದೂ ಆದ ಮುಸ್ಲಿಂ ಯುವಕ
ಘಟನೆಯನ್ನು ನೋಡಿದ ತಕ್ಷಣ ಮನೆಯವರು ನೇಣಿನ ಕುಣಿಕೆಯನ್ನು ಕತ್ತರಿಸಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು, ಆದರೆ ಅಷ್ಟರಲ್ಲಿ ನವಾಜ್ ಸಾವನ್ನಪ್ಪಿದ್ದರು. ಚಾಂತೇರ ಪೊಲೀಸರು ಪಂಚನಾಮೆ ನಡೆಸಿ ಮೃತದೇಹವನ್ನು ಕಾಸರಗೋಡು ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಹಸ್ತಾಂತರಿಸಿದರು. ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಯುವಕನಿಗೆ ಹುಡುಗಿಯೊಂದಿಗೆ ಮನೆಯವರು ಮದುವೆ ನಿಶ್ಚಯಿಸಿದ್ದರು. ಇವರಿಬ್ಬರು ಫೋನ್ ನಲ್ಲಿ ಹೆಚ್ಚು ಮಾತನಾಡುತ್ತಿದ್ದರು ಎನ್ನಲಾಗಿದೆ. ಆದರೂ ಯುವತಿ ಬೇರೊಬ್ಬ ಯುವಕನನ್ನು ಪ್ರೀತಿಸುತ್ತಿರುವುದು ಯುವಕನಿಗೆ ತಿಳಿದು ಯುವಕ ಮಾನಸಿಕವಾಗಿ ನೊಂದು ಹೋಗಿದ್ದ ಎಂದು ತಿಳಿದು ಬಂದಿದೆ.
ಯುವಕ ತಾನು ಮದುವೆ ನಿಶ್ಚಯಿಸಿಕೊಂಡಿದ್ದ ಯುವತಿಗೆ ಕರೆ ಮಾಡಿ ಸಾವಿಗೂ ಮುನ್ನ ಹೊರಡುವುದಾಗಿ ಹೇಳಿದ್ದ ಎಂಬ ಅಂಶವೂ ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ. ಇದಾದ ಬಳಿಕ ಯುವತಿ ಯುವಕನ ಮನೆಯವರಿಗೆ ಮಾಹಿತಿ ನೀಡಿದ್ದಾಳೆ.