Sat. Jan 18th, 2025

Anchor Sowmya Rao: ತೆಲುಗಿನಲ್ಲಿ ಮಲಗಿದವಳಿಗೆ ಕನ್ನಡದವರ ಜೊತೆ ಮಲಗೋಕೆ ಬರಲ್ವ? ಅಲ್ಲಿರೋನು ಗಂಡಸೇ, ಇಲ್ಲಿರೋನು ಗಂಡಸೇ!! – ಫೇಮಸ್‌ ಆ್ಯಂಕರ್ ಕೋಪಗೊಂಡಿದ್ದೇಕೆ??

ಸೌಮ್ಯಾ ರಾವ್ ಅವರು ನಟಿಯಾಗಿ, ಆ್ಯಂಕರ್ ಆಗಿ ಗುರುತಿಸಿಕೊಂಡಿದ್ದಾರೆ. ಅವರು ಕನ್ನಡದವರಾದರೂ ತೆಲುಗು ಚಿತ್ರರಂಗದಲ್ಲಿ ಆ್ಯಂಕರಿಂಗ್​​ನಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿದ್ದಾರೆ. ಅವರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟ ಕಮೆಂಟ್​ಗಳು ಬಂದಿದ್ದವು. ಈ ಬಗ್ಗೆ ಸೌಮ್ಯಾ ರಾವ್ ಅವರು ಮಾತನಾಡಿದ್ದಾರೆ.

ಇದನ್ನೂ ಓದಿ: ಮಂಗಳೂರು: ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣ

ಸೌಮ್ಯಾ ಅವರು ತೆಲುಗಿನಲ್ಲಿ ಟಾಪ್​ ಶೋಗಳನ್ನು ನಿರೂಪಣೆ ಮಾಡಿದ್ದಾರೆ. ಆದರೆ, ಕನ್ನಡದಲ್ಲಿ ಅವರಿಗೆ ಅವಕಾಶ ಸಿಕ್ಕೇ ಇಲ್ಲ. ಈ ಬಗ್ಗೆ ಅವರು ‘ರಾಜೇಶ್ ಗೌಡ’ ಯೂಟ್ಯೂಬ್ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಅವರು ಸತ್ಯ ಕಹಿ ಎಂದಿದ್ದಾರೆ. ಕನ್ನಡದಲ್ಲಿ ಕೇಳಿದರೂ ಅವರಿಗೆ ಅವಕಾಶ ನೀಡಿಲ್ಲವಂತೆ..

ಈ ಮೊದಲು ತೆಲುಗು ಯೂಟ್ಯೂಬ್ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಸೌಮ್ಯಾ ಅವರು ಕನ್ನಡ ಇಂಡಸ್ಟ್ರಿ ಬಗ್ಗೆ ಬೇಸರ ಹೊರಹಾಕಿದ್ದರು. ‘ಕನ್ನಡ ಇಂಡಸ್ಟ್ರಿ ಮೇಲೆ ನನಗೆ ಒಲವು ಇಲ್ಲ, ಏಕೆಂದರೆ ಅವರು ನನ್ನನ್ನು ಬೆಳೆಸಿಲ್ಲ ಎಂದು ನಾನು ಹೇಳಿದ್ದೆ. ಅದನ್ನು ನಾನು ಬೇಸರದಿಂದ ಹೇಳಿದ್ದು. ಪ್ರಸ್ತುತ ಕನ್ನಡ ಇಂಡಸ್ಟ್ರಿ ಒಳ್ಳೆಯ ಹೀರೋಯಿನ್​ಗಳನ್ನು ಕಳೆದುಕೊಳ್ಳುತ್ತಿದೆ. ಕೆಟ್ಟ ಹುಳದಿಂದ ಇಂಡಸ್ಟ್ರಿ ಹಾಳಾಗುತ್ತಿದೆ ಎಂದು ನಾನು ಸಂದರ್ಶನದಲ್ಲಿ ಹೇಳಿದ್ದೆ’ ಎಂಬುದಾಗಿ ಸೌಮ್ಯಾ ಹೇಳಿದ್ದಾರೆ. ಈ ಬಗ್ಗೆ ಅವರು ಸಾಕಷ್ಟು ಟೀಕೆ ಎದುರಿಸಿದ್ದರು.

‘ತೆಲುಗಿನಲ್ಲೇ ಬಿದ್ದು ಸಾಯಿ, ಇಲ್ಲಿಗೆ ಬರಬೇಡ ಎಂದು ಅನೇಕರು ಕಮೆಂಟ್ ಹಾಕಿದ್ದರು. ನಾನು ಇಲ್ಲಿ ಮೈಮಾಟ ತೋರಿಸೋಕೆ ಬಂದಿಲ್ಲ. ಬಡತನದ ಬೇಗೆಯಿಂದ ಹೊರ ಬರೋಕೆ ಬಂದಿದ್ದು. 100ರಲ್ಲಿ 90 ಜನರು ಒಳ್ಳೆಯ ಮಾತನ್ನು ಆಡಿದ್ದಾರೆ. ಉಳಿದ ಶೇ.10 ಜನರ ಮಾತನ್ನು ಕೇಳೋಕೆ ಆಗಲ್ಲ’ ಎಂದಿದ್ದಾರೆ ಅವರು.

‘ನನ್ನ ಬಗ್ಗೆ ಕೆಟ್ಟ ಶಬ್ದ ಬಳಕೆ ಮಾಡುತ್ತಾರೆ. ಕರ್ನಾಟಕಕ್ಕೆ ಬಂದ್ರೆ ಮೆಟ್ಟಲ್ಲಿ ಹೊಡಿತೀನಿ ಎನ್ನುತ್ತಾರೆ. ನನ್ನ ರಾಜ್ಯಕ್ಕೆ ಬರೋಕೆ ಅವರ ಒಪ್ಪಿಗೆ ಬೇಕಾ? ಈಗ ಬಟ್ಟೆ ಬಿಚ್ಚಿಕೊಂಡು ನಿಂತವರಿಗೆ ಹೆಚ್ಚು ಫಾಲೋವರ್ಸ್​. ಬಟ್ಟೆ ಬಿಚ್ಚಿಕೊಂಡು ನಿಂತವರು ಇವರಿಗೆ ದೇವರ ರೀತಿ ಕಾಣಿಸುತ್ತಾರೆ. ತೆಲುಗಿನಲ್ಲಿ ಯಾರದ್ದೋ ಜೊತೆ ಮಲಗಿದ್ದಾಳೆ, ಅದಕ್ಕೆ ಅಲ್ಲಿ ಅವಕಾಶ ಸಿಕ್ಕಿತು ಎಂದು ಯಾರೋ ಕಮೆಂಟ್ ಮಾಡಿದ್ದರು. ತೆಲುಗಿನಲ್ಲಿ ಮಲಗಿದವಳಿಗೆ ಕನ್ನಡದವರ ಜೊತೆ ಮಲಗೋಕೆ ಬರಲ್ವ? ಅಲ್ಲಿರೋನು ಗಂಡಸೇ, ಇಲ್ಲಿರೋನು ಗಂಡಸೇ. ನನಗೆ ಆ ರೀತಿಯ ಕಲಾವಿದೆ ಅಲ್ಲ. ಕಲಾವಿದರ ಜೀವನ ತುಂಬಾನೇ ಕಷ್ಟ’ ಎಂದು ಕೋಪ ಹೊರಹಾಕಿದ್ದಾರೆ.

Leave a Reply

Your email address will not be published. Required fields are marked *