Sun. Jan 19th, 2025

Mugeradka: ಜೈ ಶ್ರೀ ರಾಮ್ ಫ್ರೆಂಡ್ಸ್ ಕ್ಲಬ್ (ರಿ.) ಅಲೆಕ್ಕಿ, ಮುಗೇರಡ್ಕ ಇದರ 25ನೇ ವರ್ಷದ ಪ್ರಯುಕ್ತ “ರಜತ ಪಥ 2025” ರ ಆಮಂತ್ರಣ ಪತ್ರಿಕೆ ಬಿಡುಗಡೆ

ಮುಗೇರಡ್ಕ:(ಜ.19) ಜೈ ಶ್ರೀ ರಾಮ್ ಫ್ರೆಂಡ್ಸ್ ಕ್ಲಬ್ ರಿ. ಅಲೆಕ್ಕಿ, ಮುಗೇರಡ್ಕ ಇದರ 25ನೇ ವರ್ಷದ ಪ್ರಯುಕ್ತ ರಜತ ಸಂಭ್ರಮದ ಪ್ರಯುಕ್ತ ಫೆ 14,15 ರಂದು ನಡೆಯುವ ರಜತ ಪಥ (ಸವಿ ಮೆಲುಕಿನ ಸಂಭ್ರಮ ಮತ್ತು ಸಾಂಸ್ಕೃತಿಕ ಕಲರವ,)

ಇದನ್ನೂ ಓದಿ: Uttara Kannada: ಗರ್ಭ ಧರಿಸಿದ್ದ ಹಸುವಿನ ತಲೆ ಕಡಿದು ದೇಹ ಕೊಂಡೊಯ್ದ ದುರುಳರು!!!

ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮನ್ನು ಶ್ರೀ ಕ್ಷೇತ್ರ ಮುಗೇರಡ್ಕದಲ್ಲಿ ಆಡಳಿತ ಮೊಕ್ತೇಸರರಾದ ಶ್ರೀ ರಾಮಣ್ಣ ಗೌಡ ದೇವಸ್ಯ, ಮತ್ತು ಆಡಳಿತ ಮೊಕ್ತೇಸರರಾದ ಶ್ರೀ ಮನೋಹರ್ ಗೌಡ ಅಂತರ ಇವರ ದಿವ್ಯ ಹಸ್ತದಲ್ಲಿ ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ವಕೀಲರಾದ ರಾಮಚಂದ್ರ ಗೌಡ, ಬೆಳ್ತಂಗಡಿ, ಹಿರಿಯರಾದ ಕೃಷ್ಣಪ್ಪ ಗೌಡ ನೈಮಾರು, ಉಮೇಶ್ ಗೌಡ ಪರಕ್ಕಾಜೆ, ಸಾಂತಪ್ಪ ಗೌಡ ನೆಕ್ಕರಾಜೆ,

ಬಾಬು ಗೌಡ ಮುಗೇರಡ್ಕ ಹಾಗೂ ಜೈ ಶ್ರೀ ರಾಮ್ ಫ್ರೆಂಡ್ಸ್ ಕ್ಲಬ್ ನ ಅಧ್ಯಕ್ಷರು, ಕಾರ್ಯದರ್ಶಿ, ಬೆಳ್ಳಿ ಹಬ್ಬ ಸಮಿತಿಯ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *