ಉಪ್ಪಿನಂಗಡಿ:(ಜ.21) ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ಕಾಳಿಕಾಂಬಾ ಯಕ್ಷಗಾನ ಕಲಾ ಸೇವಾ ಸಂಘದ 50ನೇ ವರ್ಷದ ನಿಮಿತ್ತ ನಡೆಸಲಾಗುತ್ತಿರುವ ಶ್ರೀ ಮಹಾಭಾರತ ಸರಣಿಯಲ್ಲಿ 61ನೇ ಕಾರ್ಯಕ್ರಮವಾಗಿ ಶೇಣಿ ಡಾ.ಗೋಪಾಲಕೃಷ್ಣ ಭಟ್ ವಿರಚಿತ ಮಧ್ಯಮ ವ್ಯಾಯೋಗ ತಾಳಮದ್ದಳೆ ಜರಗಿತು.
ಇದನ್ನೂ ಓದಿ: 🔥ಬೆಳ್ತಂಗಡಿ: ಚಾರ್ಮಾಡಿ ಘಾಟಿಯಲ್ಲಿ ಕಾಡ್ಗಿಚ್ಚು
ಭಾಗವತರಾಗಿ ಪದ್ಮನಾಭ ಕುಲಾಲ್, ಸುರೇಶ ರಾವ್. ಬಿ, ಹರೀಶ ಆಚಾರ್ಯ ಬಾರ್ಯ ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ,ಚಂದ್ರಶೇಖರ ಆಚಾರ್ಯ ಗೇರುಕಟ್ಟೆ,
ಅರ್ಥಧಾರಿಗಳಾಗಿ ಜಯರಾಮ ಬಲ್ಯ(ಭೀಮ)ಹರೀಶ ಆಚಾರ್ಯ ಬಾರ್ಯ (ಧರ್ಮರಾಯ ) ಪೂರ್ಣಿಮ ರಾವ್ ಬೆಳ್ತಂಗಡಿ ( ಕೇಶವ ದಾಸ ) ದಿವಾಕರ ಆಚಾರ್ಯ ಗೇರುಕಟ್ಟೆ ( ಕೇಶವ ದಾಸನ ಪತ್ನಿ )ಪುಷ್ಪಾ ತಿಲಕ್( ಹಿಡಿಂಬಾ )ಶ್ರುತಿ ವಿಸ್ಮಿತ್(ಘಟೋತ್ಕಚ)ಶ್ರೀಧರ ಎಸ್ಪಿ ಸುರತ್ಕಲ್ (ಮಧ್ಯಮ )ಭಾಗವಹಿಸಿದ್ದರು. ಗೋಪಾಲ್ ಶೆಟ್ಟಿ ಕಳಿಂಜ ಕಾರ್ಯಕ್ರಮದ ಪ್ರಾಯೋಜಕರಾಗಿದ್ದರು.
ಶ್ರದ್ಧಾಂಜಲಿ ಅರ್ಪಣೆ ಸಂಘದ ರಜತ ಮಹೋತ್ಸವದ ಖಜಾಂಚಿಯಾಗಿ ಕರ್ತವ್ಯ ನಿರ್ವಹಿಸಿದ್ದ ಉದ್ಯಮಿ ಮೋಹನದಾಸ ಕಿಣಿ ಉಪ್ಪಿನಂಗಡಿ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಭರತನಾಟ್ಯ ಗುರು,ಯಕ್ಷಗಾನ ಪೋಷಕ ಪಿ.ಕಮಲಾಕ್ಷ ಆಚಾರ್ಯ ಬೆಳ್ತಂಗಡಿ ಇವರ ನಿಧನಕ್ಕೆ ಸಂತಾಪ ಸೂಚಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು.