Wed. Jan 22nd, 2025

Balanja: ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಗೆ ಮುದರಂಗಡಿಯಲ್ಲಿ ಸನ್ಮಾನ

ಬಳಂಜ:(ಜ.21) ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತಗೊಂಡಿರುವ ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯನ್ನು ಮೂಲ್ಕಿ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದಿಂದ ಮುದರಂಗಡಿಯಲ್ಲಿ ಜ. 19 ರಂದು ಗೌರವಿಸಿ ಸನ್ಮಾನಿಸಲಾಯಿತು.

ಇದನ್ನೂ ಓದಿ: ಬಿಗ್​ಬಾಸ್​​ ಸ್ಪರ್ಧಿ ರಜತ್‌ ಅಸಲಿ ಸತ್ಯ ಬಯಲು

ಬಳಂಜ ಸಂಘದ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್ ಅವರನ್ನು ಮೂಲ್ಕಿ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ಡಾ.ರಾಜಶೇಖರ ಕೋಟ್ಯಾನ್ ಹಾಗೂ ಸಮಿತಿ ಪದಾಧಿಕಾರಿಗಳು ಸನ್ಮಾನಿಸಿದರು.

ಸುಮಾರು 46 ವರ್ಷಗಳ ಪರಂಪರೆಯಿರುವ ಬಳಂಜ ಬಿಲ್ಲವ ಸಂಘವು ಸಮಾಜಮುಖಿಯಾಗಿ ಗುರುತಿಸಿಕೊಂಡಿದೆ. ಸಾಮಾಜಿಕ,ಧಾರ್ಮಿಕ, ಶೈಕ್ಷಣಿಕ, ಕಲೆ,ಕ್ರೀಡೆ,ಸಾಂಸ್ಕೃತಿಕ, ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ ಸಂಘವಾಗಿದೆ.ಸಂಘದ ಕಾರ್ಯವೈಖರಿಗೆ ಈ ಬಾರಿ ಸರಕಾರದಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯಿಂದ ಪುರಸ್ಕೃತಗೊಂಡಿದೆ.

ಸನ್ಮಾನ ಸಮಾರಂಭದಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿ‌ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ,ಮೂಲ್ಕಿ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಕಾರ್ಯದರ್ಶಿ ಗಂಗಾಧರ, ಬಳಂಜ ಸಂಘದ ನಿರ್ದೇಶಕರಾದ ದಿನೇಶ್ ಪೂಜಾರಿ ಅಂತರ, ರಂಜಿತ್ ಪೂಜಾರಿ,ಮಹಿಳಾ ಬಿಲ್ಲವ ವೇದಿಕೆ ಸದಸ್ಯೆ ಅಮೃತಾ ಎಸ್ ಕೋಟ್ಯಾನ್, ಬೇಬಿ! ಸ್ಮಯ ಎಸ್ ಕೋಟ್ಯಾನ್ ಜೊತೆಗಿದ್ದರು.

Leave a Reply

Your email address will not be published. Required fields are marked *