Wed. Jan 22nd, 2025

Belthangady: ಹರಿಪ್ರಸಾದ್ ಹೊಸಂಗಡಿ ಅವರಿಗೆ ತಾಲೂಕು ಯುವಜನ ಒಕ್ಕೂಟದಿಂದ ಶ್ರದ್ಧಾಂಜಲಿ

ಬೆಳ್ತಂಗಡಿ:(ಜ.21) ಬೆಳ್ತಂಗಡಿ ತಾಲೂಕಿನ ಹೊಸಂಗಡಿ ಗ್ರಾಮ ಪಂಚಾಯಿತಿನ ಮಾಜಿ ಅಧ್ಯಕ್ಷರು, ಹಾಲಿ ಸದಸ್ಯರು ಹೊಸಂಗಡಿ ಫ್ರೆಂಡ್ಸ್ ಕ್ಲಬ್ ಮಾಜಿ ಅಧ್ಯಕ್ಷರಾಗಿ, ಹಾಗೂ ಹಲವಾರು ಸಂಘಟನೆಯಲ್ಲಿ ಸಕ್ರಿಯವಾಗಿದ್ದುಕೊಂಡು,

ಇದನ್ನೂ ಓದಿ: ಬಂಟ್ವಾಳ: ಮಹಮ್ಮದ್‌ ರಫೀಕ್‌ ಕೊಲೆ ಪ್ರಕರಣ

ಮತ್ತು ತಾಲೂಕು ಯುವಜನ ಒಕ್ಕೂಟದ ನಿರ್ದೇಶಕರಾಗಿಯೂ ಸೇವೆಯನ್ನು ಸಲ್ಲಿಸಿರುವ, ಇತ್ತೀಚಿಗೆ ನಿಧನರಾದ ಹರಿಪ್ರಸಾದ್ ಹೊಸಂಗಡಿ ಅವರಿಗೆ ತಾಲೂಕು ಯುವಜನ ಒಕ್ಕೂಟದಿಂದ, ಬೆಳ್ತಂಗಡಿ


ತಾಲೂಕು ಪಂಚಾಯತ್ ಸಭಾಂಗಣದಲ್ಲಿ,ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು. ಜಿಲ್ಲಾ ಯುವಜನ ಒಕ್ಕೂಟದ ಗೌರವ ಅಧ್ಯಕ್ಷರಾದ ರಾಜೀವ್ ಸಾಲಿಯನ್ ಮುಂಡೂರು ನುಡಿ ನಮನವನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರಾದ ವಿಜಯ ಗೌಡ ವೇಣೂರು, ಗೌರವ ಅಧ್ಯಕ್ಷರಾದ ರಮಾನಂದ ಸಾಲಿಯನ್ ಮುಂಡೂರು , ಕಾರ್ಯದರ್ಶಿ ಚಿದಾನಂದ ಇಡ್ಯಾ, ಕೋಶಾಧಿಕಾರಿ ಪ್ರಶಾಂತ್ ಮಚ್ಚಿನ, ಪದಾಧಿಕಾರಿಗಳಾದ, ಸೌಮ್ಯ ಲಾಯಿಲಾ, ಸದಾಶಿವ ಹೆಗ್ಡೆ, ಶೇಖರ್ ಲಾಯಿಲಾ, ಅರುಣಾಕ್ಷಿ ಬದನಾಜೆ, ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *