ಮಂಗಳೂರು:(ಜ.21) ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣದ ಮೂವರು ಆರೋಪಿಗಳನ್ನು ಮಂಗಳೂರು ಪೊಲೀಸರು ಕಾರ್ಯಾಚರಣೆ ನಡೆಸಿ ತಮಿಳುನಾಡಿನ ವಿವಿಧ ಪ್ರದೇಶದಲ್ಲಿ ಬಂಧಿಸಿದ್ದರು.

ಮುಂಬೈ ಮೂಲದ ದರೋಡೆ ಗ್ಯಾಂಗ್ ನ ಸದಸ್ಯರಾದ ಮೂಲದ ಮುರುಗಂಡಿ ದೇವರ್, ರಾಜೇಂದ್ರನ್, ಮನಿವೆನನ್ ಎಂಬಾತನನ್ನು ಬಂಧಿಸಿದ್ದರು.ಇದೀಗ ಅವರ ಫೋಟೋ ಲಭ್ಯವಾಗಿದೆ.



ಆರೋಪಿಗಳು ಬ್ಯಾಂಕ್‌ನಲ್ಲಿ ಸುಮಾರು 10ರಿಂದ 12 ಕೋಟಿಯನ್ನು ದರೋಡೆ ಮಾಡಿದ ಬಳಿಕ ಆರೋಪಿಗಳು ತಿರುವನ್ನೇಲಿಗೆ ಪರಾರಿಯಾಗಿದ್ದರು. ಬಂಧಿತರಿಂದ ಕಳ್ಳತನಕ್ಕೆ ಬಳಸಿದ್ದ ಫಿಯೆಟ್ ಕಾರು, ಹಣ, ಚಿನ್ನ ತುಂಬಿಕೊಂಡು ಹೋಗಿದ್ದ ಎರಡು ಗೋಣಿ ಚೀಲಗಳನ್ನು, ತಲ್ವಾರ್, ಪಿಸ್ತೂಲ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
