Wed. Jan 22nd, 2025

Belal : ಬೆಳಾಲು ಗ್ರಾಮ ಪಂಚಾಯತ್ ನಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ ಹಾಗೂ 3ನೇ ವರ್ಷದ ವಿಕಲಚೇತನರ ವಿಶೇಷ ಸಮನ್ವಯ ಗ್ರಾಮ ಸಭೆ

ಬೆಳಾಲು :(ಜ.22) ಗ್ರಾಮ ಪಂಚಾಯತ್ ಬೆಳಾಲು ವಿಶ್ವ ವಿಕಲಚೇತನರ ದಿನಾಚರಣೆ ಹಾಗೂ 3ನೇ ವರ್ಷದ ವಿಕಲಚೇತನರ ವಿಶೇಷ ಸಮನ್ವಯ ಗ್ರಾಮ ಸಭೆ ಪಂಚಾಯತ್ ಸಭಾಭವನದಲ್ಲಿ ನೆರವೇರಿತು.

ಇದನ್ನೂ ಓದಿ: ಬೆಳ್ತಂಗಡಿ : ಕ್ರೀಡಾ ಬ್ಯಾನರ್ ಹರಿದು ವಿಕೃತಿ ಮೆರೆದ ಕಿಡಿಗೇಡಿಗಳು

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್‌ ನ ಅಧ್ಯಕ್ಷರಾದ ಶ್ರೀಮತಿ ವಿದ್ಯಾ ಶ್ರೀನಿವಾಸ್ ಗೌಡ ವಹಿಸಿಕೊಂಡು ವಿಶೇಷ ಚೇತನ ಮಕ್ಕಳು ದೇವರ ಸಮಾನ ಅವರನ್ನು ದೇವರಾಗಿ ಕಾಣಿ ಹೊರತಾಗಿ ಹೊರೆಯಾಗಿ ಕಾಣಬೇಡಿ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಪ್ರೋತ್ಸಾಹವನ್ನು ನೀಡಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ವಸಂತ ಮರಕಡ ವಕೀಲರು ಅಧ್ಯಕ್ಷರು ವಕೀಲರ ಸಂಘ ರಿ ಬೆಳ್ತಂಗಡಿ ತಾಲೂಕು ನೆರವೇರಿಸಿ ವಿಶೇಷ ಚೇತನರು ದೇವರ ಮಕ್ಕಳು ದೇವರ ಆಲಯಕ್ಕೆ ಇಂದು ನಾನು ಬಂದಿದ್ದೇನೆ .ವಿಶೇಷ ಚೇತನರು ಅಬಲರಲ್ಲ ಸಬಲರು ಅನುಕಂಪ ಹೊರತಾಗಿ ಅವಕಾಶ ನೀಡಬೇಕು ಎಂದು ಹೇಳಿದರು.

ಮಾರ್ಗದರ್ಶಿ ಅಧಿಕಾರಿಯಾಗಿ ಆಗಮಿಸಿದ ಶ್ರೀ ಜೋನ್ ಬ್ಯಾಷ್ಟಿಸ್ಟ್ ಡಿಸೋಜಾ ತಾಲೂಕು ವಿವಿಧೋದ್ದೇಶ ಪುನರ್ವಸತಿ ಸಂಯೋಜಕರು ಮಾತನಾಡಿ ತಾಲೂಕಿನಲ್ಲಿ 48 ಗ್ರಾಮಗಳಲ್ಲಿ ಬೆಳಾಲು ಗ್ರಾಮ ಪಂಚಾಯತ್ ನಲ್ಲಿ ನಡೆದ ಈ ಸಭೆಯು ತಾಲೂಕಿಗೆ ಮಾದರಿ ಇದು ಪಂಚಾಯತ್ ಆಡಳಿತ ಮಂಡಳಿ ಮತ್ತು ಊರ ದಾನಿಗಳ ಸಹಕಾರದಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು .ಈ ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಜಾಹ್ನವಿ ಇವರನ್ನು ಸನ್ಮಾನಿಸಿ ವಸಂತ ಮರಕಡ ಇವರು ಪ್ರೋತ್ಸಾಹ ಧನ ನೀಡಿದರು ಹಾಗೂ ಅಶೋಕ್ ನಾಯ್ಕ ಪಲ್ಲಿದಡ್ಕ ಹೇಮನಾಥ್ ನಾಯ್ಕ ಸುರುಳಿ ಇವರನ್ನು ಕೂಡ ಸನ್ಮಾನಿಸಲಾಯಿತು.

ಗ್ರಾಮ ಪಂಚಾಯಿತಿ ವತಿಯಿಂದ 12 ವಿಕಲಚೇತನ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಯಿತು. ಧಾನಿಗಳಾದ ಜಯಣ್ಣ ಮಿನಂದೇಲು, ಶ್ರೀನಿವಾಸ್ ಗೌಡ ನೋಟರಿ ವಕೀಲರು ಶ್ರೀ ಸೌಧ ಬೆಳಾಲು ,ಸುರೇಶ್ ದಾಸ್ ಗಾಂಧಿನಗರ ಮಾಯಾ, ಲಕ್ಷ್ಮಣ ಪೂಜಾರಿ ಪಲಸ ಮಾಯ 57 ವಿಕಲಚೇತನರಿಗೆ ತಲಾ 5 ಕೆಜಿ ಅಕ್ಕಿಯನ್ನು ನೀಡಿದರು.

ಶಾಮಿಯಾನದ ಪ್ರಾಯೋಜಕರಾಗಿ ಅರ್ಚನ್ ಸೌತೆಗದ್ದೆ, ಸೌಂಡ್ಸ್ ವ್ಯವಸ್ಥೆ ಯನ್ನು ಪ್ರಾಯೋಜಕರಾಗಿ ಸಂತೋಷ್ ಕನಿಕಿಲ ಊಟೋಪಚಾರದ ಪ್ರಾಯೋಜಕರಾಗಿ ವಿಮಲಾ ನಾಯ್ಕ ಕಾರ್ಯದರ್ಶಿ ಕಾವಳಪಡೂರು ಸಹಕರಿಸಿದರು ಕಾರ್ಯಕ್ರಮದ ವೇದಿಕೆಯಲ್ಲಿ ಬೆಳಾಲು ಗ್ರಾಮ ಪಂಚಾಯಿತಿನ ಗೌರವಾನ್ವಿತ ಸದಸ್ಯರಾದ ಶ್ರೀ ದಿನೇಶ್ ಕೋಟ್ಯಾನ್ ಸತೀಶ್ ಎಳ್ಳುಗದ್ದೆ ,ಶ್ರೀಮತಿ ಪ್ರೇಮ ,

ಶ್ರೀಮತಿ ಓಬಕ್ಕ, ಯೋಗೀಶ್ ಸೌತೆ ಗದ್ದೆ ,ಜಯರಾಮ ಮಯ್ಯ ಮುಖ್ಯ ಉಪಾಧ್ಯಾಯರು ,ಎಂ ಜೆ ಜೋಸೆಫ್ ವಿ ಆರ್ ಡಬ್ಲ್ಯೂ ಇಂದ ಬಿಟ್ಟು ಮಜೀದ್ ಮುಂಡಾಜೆ ಉಪಸ್ಥಿತರಿದ್ದರು. ನಾಡಗೀತೆಯನ್ನು ಪಂಚಾಯತ್ ಸಿಬ್ಬಂದಿ ಶಶಿಧರ ಓಡಿಪ್ರೊಟ್ಟು ಹಾಡಿ , ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ತಾರಾನಾಥ್ ನಾಯಕ್ ಸ್ವಾಗತಿಸಿ‌, ಪ್ರಾಸ್ತಾವಿಕ ಹಾಗೂ ನಿರೂಪಣೆಯನ್ನು ಈರಣ್ಣ ವಿ ಆರ್ ಡಬ್ಲ್ಯೂ ಬೆಳಾಲು, ಧನ್ಯವಾದ ಸದಸ್ಯರಾದ ಸತೀಶ್ ಎಳ್ಳುಗದ್ದೆ ನೆರವೇರಿಸಿದರು. ಸಿಬ್ಬಂದಿ ವರ್ಗ ಸಹಕರಿಸಿದರು.

Leave a Reply

Your email address will not be published. Required fields are marked *