ಮಂಗಳೂರು:(ಜ.24) ಮಂಗಳೂರು ಬಿಜೈ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಬಳಿಯಿರುವ ಕಲರ್ಸ್ ಯೂನಿಸೆಕ್ಸ್ ಸೆಲೂನ್ ಮೇಲೆ ರಾಮ ಸೇನೆ ಸಂಸ್ಥಾಪಕ ಪ್ರಸಾದ್ ಅತ್ತಾವರ ನಾಯಕತ್ವದ ಗ್ಯಾಂಗ್ ಜ.23 ರಂದು ದಾಳಿ ನಡೆಸಿತ್ತು. ಮಸಾಜ್ ಸೆಂಟರ್ ಮೇಲೆ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 14 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಬಂಟ್ವಾಳ: ರಸ್ತೆ ಬದಿ ನಿಂತಿದ್ದ ಅಂಬ್ಯುಲೆನ್ಸ್ ಗೆ ಡಿಕ್ಕಿ ಹೊಡೆದ ಕಾರು
ಆರೋಪಿಗಳಾದ ಬಂಟ್ವಾಳ ತಾಲೂಕು ಫರಂಗಿಪೇಟೆಯ ಹರ್ಷರಾಜ್ @ ಹರ್ಷಿತ್, ವಾಮಂಜೂರು ಮೂಡುಶೆಡ್ಡೆಯ ಮೋಹನ್ ದಾಸ್ @ ರವಿ, ಕಾಸರಗೋಡು ಉಪ್ಪಳದ ಪುರಂದರ, ವಾಮಂಜೂರು ಅಂಬೇಡ್ಕರ್ ನಗರದ ಸಚಿನ್, ವಾಮಂಜೂರು ಉಳಾಯಿಬೆಟ್ಟು ರವೀಶ್, ಬಂಟ್ವಾಳ ತಾಲೂಕು ಬೆಂಜನಪದವಿನ ಸುಕೇತ್, ವಾಮಂಜೂರಿನ ಅಂಕಿತ್ ,
ಶಿವಾಜಿನಗರದ ವಾಮಂಜೂರು ಮೂಡುಶೆಡ್ಡೆ ಶಿವಾಜಿ ನಗರದ ದೀಪಕ್, ತಾರಿಗುಡ್ಡೆ, ಬೊಂಡಂತಿಲದ ವಿಶ್ಲೇಷ್, ಮಂಗಳೂರು ಅಮರ್ ಆಳ್ವ ರಸ್ತೆ, ಮಂಕಿ ಸ್ಟಾಂಡ್ನ ಶರಣ್ ರಾಜ್, ವಾಮಂಜೂರು ಮೂಡುಶೆಡ್ಡೆ ಶಿವಾಜಿನಗರದ ಪ್ರದೀಪ್ ಪೂಜಾರಿ, ನಿಡ್ಡಲೆ, ಗೋಕರ್ಣ ಪ್ರಸಾದ್ ಅತ್ತಾವರ ಎಂದ ಗುರುತಿಸಲಾಗಿದೆ.
ಮಸಾಜ್ ಸೆಂಟರ್ ಅನೈತಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು 11 ಮಂದಿಯ ಗುಂಪು ಏಕಾಏಕಿ ನುಗ್ಗಿ ದಾಂಧಲೆ ನಡೆಸಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದನೆ ಮತ್ತು ಮಹಿಳಾ ಸಿಬ್ಬಂದಿಗೆ ಜೀವ ಬೆದರಿಕೆ ಹಾಕಿದರು, ಸಲೂನ್ ಅನ್ನು ಧ್ವಂಸಗೊಳಿಸಿದರು. ಉಪಕರಣಗಳು, ಮತ್ತು ನೌಕರರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು
ಸಲೂನ್ ಮಾಲಕರಾದ ಸುಧೀರ್ ಶೆಟ್ಟಿ ದೂರು ನೀಡಿದ ಹಿನ್ನಲೆಯಲ್ಲಿ ದೂರಿನ ಮೇರೆಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಅಪರಾಧ ಸಂಖ್ಯೆ 06/2025 ರಂತೆ ಠಾಣೆ ಸೆಕ್ಷನ್ 329(2), 324(5), 74, BNS ನ 351(3), 115(2), 109, 352, ಮತ್ತು 190 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಪರಿಶೀಲನೆ ನಡೆಸಲಾಗುತ್ತಿದೆ.