Fri. Jan 24th, 2025

Kadaba: ಅಪ್ರಾಪ್ತೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ ಗರ್ಭಿಣಿಯನ್ನಾಗಿಸಿದ ದೊಡ್ಡಪ್ಪನ ಮಗ – ಆರೋಪಿ ಪ್ರವೀಣ್‌ ವಿರುದ್ಧ ಪ್ರಕರಣ ದಾಖಲು

ಕಡಬ:(ಜ.24) ಅಪ್ರಾಪ್ತೆಯೊಂದಿಗೆ ದೈಹಿಕ ಸಂಪರ್ಕ ನಡೆಸಿ ಆಕೆ ಗರ್ಭಿಣಿಯಾಗಲು ಕಾರಣಕರ್ತನಾದ ಯುವಕನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಲಕಿಯ ದೊಡ್ಡಪ್ಪನ ಮಗನ ಕೌಕ್ರಾಡಿ ಗ್ರಾಮದ ಕಾಪಿನಬಾಗಿಲುವಿನ ಪ್ರವೀಣ್ ಎಂಬಾತನೇ ಪ್ರಕರಣದ ಆರೋಪಿ.

ಇದನ್ನೂ ಓದಿ: ಧರ್ಮಸ್ಥಳ: ಶ್ರೀಲಂಕಾದಲ್ಲಿ SKDRDP ಮಾದರಿ ಅನುಷ್ಠಾನಕ್ಕೆ ಮನವಿ ಮಾಡಿದ ಲಂಕಾ ಮೈಕ್ರೋ ಫೈನಾನ್ಸ್ ತಂಡ : ಪೂಜ್ಯ ಖಾವಂದರಿಂದ ಸಹಮತ

10ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ನೊಂದ ಅಪ್ರಾಪ್ತ ಬಾಲಕಿ (17ವ) ಅರ್ಧಕ್ಕೆ ವಿದ್ಯಾಭ್ಯಾಸ ಮೊಟಕುಗೊಳಿಸಿ ಮನೆಯಲ್ಲಿದ್ದು ತಂದೆ, ತಾಯಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಯಾವುದೇ ಮೂಲಭೂತ ಸೌಕರ್ಯವಿಲ್ಲದ ಮನೆಯಲ್ಲಿ ಒಬ್ಬಳೇ ಇರಲು ಭಯಗೊಂಡು ಕಳೆದ 6 ತಿಂಗಳಿನಿಂದ ಸಂತ್ರಸ್ತೆ ದೊಡ್ಡಪ್ಪನ ಮನೆಯಲ್ಲೇ ಇರುತ್ತಿದ್ದಳು ಎನ್ನಲಾಗಿದೆ.


2024ರ ನವಂಬರ್ ತಿಂಗಳ ಮೂರನೇ ವಾರದ ಒಂದು ದಿನ ರಾತ್ರಿ ಸಂತ್ರಸ್ತೆ ಮಲಗಿದ್ದ ವೇಳೆ ಆಕೆಯ ದೊಡ್ಡಪ್ಪನ ಮಗ ಬಲಾತ್ಕಾರವಾಗಿ ದೈಹಿಕ ಸಂಪರ್ಕ ಮಾಡಿದ್ದಲ್ಲದೆ, ಆ ಬಳಿಕ ಬಾಧಿತೆಯ ಇಚ್ಚೆಗೆ ವಿರುದ್ಧವಾಗಿ 2-3ಬಾರಿ ಬೇರೆ ಬೇರೆ ದಿನಗಳಲ್ಲಿ ದೈಹಿಕ ಸಂಪರ್ಕ ನಡೆಸಿರುತ್ತಾನೆ. ಅಲ್ಲದೆ ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ನಿನ್ನನ್ನು ಬದುಕಲು ಬಿಡುವುದಿಲ್ಲ. ಎಂದು ಬೆದರಿಕೆ ಹಾಕಿರುವುದಾಗಿ ಆರೋಪಿಸಲಾಗಿದೆ.


ಜ.22ರಂದು ಸ್ಥಳೀಯ ಆಶಾ ಕಾರ್ಯಕರ್ತೆ ಮತ್ತು ಆರೋಗ್ಯ ಸಹಾಯಕಿಯರು ಬಾಲಕಿ ಮನೆಗೆ ಬಂದಾಗ ಆಕೆಯ ಚಲನವಲವನ್ನು ಗಮನಿಸಿ, ಆಕೆಯ ತಿಂಗಳ ಋತುಚಕ್ರದ ಬಗ್ಗೆ ವಿಚಾರಿಸಿದ್ದಾರೆ. ಈ ವೇಳೆ ಬಾಲಕಿ ನಡೆದ ಘಟನೆಯ ಬಗ್ಗೆ ವಿವರಿಸಿದ್ದಾಳೆ. ಜ.23ರಂದು ಸ್ಥಳೀಯ ಅಂಗನವಾಡಿ ಶಿಕ್ಷಕಿ ಮತ್ತು ಆಶಾ ಕಾರ್ಯಕರ್ತೆ ಬಾಲಕಿಯನ್ನು ಕೊಕ್ಕಡ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ವೈದ್ಯರಲ್ಲಿ ಪರೀಕ್ಷಿಸಿದಾಗ ಆಕೆ 2 ತಿಂಗಳ ಗರ್ಭಿಣಿ ಎಂಬ ವಿಚಾರ ಬೆಳಕಿಗೆ ಬಂದಿದೆ.

ಬಾಲಕಿ ಆಕೆಯ ದೊಡ್ಡಪ್ಪನ ಮನೆಯಲ್ಲಿ ಉಳಿದುಕೊಳ್ಳಲು ಹೋಗಿದ್ದ ಸಮಯ ದೊಡ್ಡಪ್ಪನ ಮಗ ಪ್ರವೀಣ್ ಬಾಲಕಿಯನ್ನು ಹೆದರಿಸಿ ಬಲಾತ್ಕಾರವಾಗಿ ಆಕೆಯ ಜೊತೆ ದೈಹಿಕ ಸಂಪರ್ಕ ನಡೆಸಿ ಗರ್ಭಿಣಿಯಾಗಲು ಕಾರಣಕರ್ತನಾಗಿದ್ದು, ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನನ್ವಯ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯಿದೆ ಅನುಸಾರ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *