Fri. Jan 31st, 2025

Kasaragod: ಫೆ.2 ರಂದು ಮದುವೆ ಫಿಕ್ಸ್‌ – ಮದುವೆಗೆ ತಯಾರಿ ನಡೆಸುತ್ತಿದ್ದಾಗಲೇ ಯುವಕ ನೇಣುಬಿಗಿದುಕೊಂಡು ಆತ್ಮಹತ್ಯೆ!!

ಕಾಸರಗೋಡು:(ಜ.25) ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೀಂಜ ಸಮೀಪದ ಬೆಜ್ಜದಲ್ಲಿ ನಡೆದಿದೆ.

ಇದನ್ನೂ ಓದಿ: ಧಾರವಾಡ: ಮದುವೆಯಾಗಿದ್ದರೂ ಇನ್ಸ್ಟಾಗ್ರಾಂ ನಲ್ಲಿ ಮತ್ತೊಬ್ಬನ ಜೊತೆ ಲವ್ವಿ ಡವ್ವಿ

ಅಜಿತ್‌ ಕುಮಾರ್(28ವ) ಆತ್ಮಹತ್ಯೆ ಮಾಡಿಕೊಂಡ ಯುವಕ.

ಫೆಬ್ರವರಿ 2 ರಂದು ಅಜಿತ್‌ ಕುಮಾರ್‌ ಗೆ ಹೊಸಂಗಡಿ ಸಮೀಪದ ಯುವತಿ ಜೊತೆ ವಿವಾಹ ನಿಶ್ಚಯವಾಗಿತ್ತು. ಅಜಿತ್‌ ಕುಮಾರ್‌ ಮಜಿಬೈಲ್‌ ಸೇವಾ ಸಹಕಾರಿ ಬ್ಯಾಂಕ್‌ ನ ಉಪ್ಪಳ ಶಾಖೆಯಲ್ಲಿ ಉದ್ಯೋಗದಲ್ಲಿದ್ದರು.

ಶುಕ್ರವಾರ ಮನೆಯವರು ವಿವಾಹ ಸಾಮಾಗ್ರಿ ಖರೀದಿಸಲು ಪೇಟೆಗೆ ತೆರಳಿದ್ದರು. ಮನೆಯಲ್ಲಿ ಚಿಕ್ಕಪ್ಪ ಮಾತ್ರ ಇದ್ದರು ಎಂದು ತಿಳಿದು ಬಂದಿದೆ.

ಈ ಸಂದರ್ಭದಲ್ಲಿ ಅಜಿತ್‌ ಮನೆ ಮುಂಭಾಗದ ಮಾವಿನ ಮರದಲ್ಲಿ ಕೇಬಲ್‌ ವಯರ್‌ ನಲ್ಲಿ ನೇಣು ಬಿಗಿದಿರುವುದನ್ನು ಮನೆಯವರು ಗಮನಿಸಿದ್ದು, ಸ್ಥಳೀಯರು ಆತನನ್ನು ಆಸ್ಪತ್ರೆಗೆ ಕರೆದೊಯ್ಯುವಾಗಲೇ ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ. ಈ ಬಗ್ಗೆ ಮಂಜೇಶ್ವರ ಠಾಣಾ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *