ಮಂಗಳೂರು:(ಜ.27) ತಲಪಾಡಿಯ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಜನವರಿ 17 ರಂದು ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಮಂಜೊಟ್ಟಿ: ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 76ನೇ ವರ್ಷದ ಗಣರಾಜ್ಯೋತ್ಸವ ಆಚರಣೆ
ಬಂಧಿತರನ್ನು ತಮಿಳು ನಾಡಿನ ಕನ್ನನ್ ಮಣಿ (36), ಮುರುಗಂಡಿ ದೇವರ್ (36), ಯೋಸುವ ರಾಜೇಂದ್ರನ್ (35) ಮತ್ತು ಎಂ. ಷಣ್ಮುಗ ಸುಂದರಂ (65) ಎಂದು ಗುರುತಿಸಲಾಗಿದೆ.
ಬಂಧಿತರಿಂದ 18.314 ಕೆಜಿ ಚಿನ್ನ, ಎರಡು ಪಿಸ್ತೂಲ್ಗಳು, ಮೂರು ಸಜೀವ ಗುಂಡುಗಳು, ಎರಡು ಕೊಡಲಿಗಳು, ಪರಾರಿಯಾದ ಫಿಯೆಟ್ ಕಾರು ಮತ್ತು ನಕಲಿ ನಂಬರ್ ಪ್ಲೇಟ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.