Wed. Nov 20th, 2024

Belthangadi: The satisfaction of service is limitless; Second Governor of Lions District Taranatha Koppa

ಬೆಳ್ತಂಗಡಿ:(ಜು.16) ಸೇವೆಯಲ್ಲಿ ಸಣ್ಣದು ದೊಡ್ಡದೆಂಬ ವ್ಯತ್ಯಾಸ ವಿಲ್ಲ. ಅದು ತಲುಪುವವರಿಗೆ ತಲುಪಿದರೆ ಆಗುವ ಆತ್ಮತೃಪ್ತಿಗೆ ಬೆಲೆಕಟ್ಟಲು ಸಾಧ್ಯವಿಲ್ಲ ಎಂದು ಲಯನ್ಸ್ ಜಿಲ್ಲಾ ದ್ವಿತೀಯ ರಾಜ್ಯಪಾಲ ತಾರನಾಥ ಕೊಪ್ಪ ಹೇಳಿದರು. ಲಯನ್ಸ್ ಕ್ಲಬ್ ಬೆಳ್ತಂಗಡಿ ಇದರ 2024-25 ನೇ ಸಾಲಿನ ನೂತನ ಸಮಿತಿಯ ಪದಗ್ರಹಣ ನಡೆಸಿ ಅವರು ಮಾತನಾಡುತ್ತಿದ್ದರು.

ಸಮಾರಂಭದ ಪ್ರಥಮಾರ್ಧದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿರ್ಗಮಿತ ಅಧ್ಯಕ್ಷ ಉಮೇಶ್ ಶೆಟ್ಟಿ ಅವರು ಸ್ವಾಗತಿಸಿ, ಸುವರ್ಣ ವರ್ಷದಲ್ಲಿ ಸಾಧಿಸಿದ ಸಾಧನೆ, ಸಹಕಾರ ಇವುಗಳನ್ನು ಮೆಲುಕುಹಾಕಿ ಕೃತಜ್ಞತೆ ಸಲ್ಲಿಸಿದರು.

ಪದಪ್ರದಾನ ಸ್ವೀಕರಿಸಿ ಧ್ವಿತೀಯಾರ್ಧದಿಂದ ಅಧ್ಯಕ್ಷತೆ ವಹಿಸಿದ್ದ ನೂತನ ಸಾಲಿನ ಅಧ್ಯಕ್ಷ ದೇವದಾಸ ಶೆಟ್ಟಿ ಹಿಬರೋಡಿ ಅವರು ಮಾತನಾಡಿದ, ಸೇವೆಯಲ್ಲಿ ತೊಡಗಿಕೊಳ್ಳಲು ನನಗೆ ಸಿಕ್ಕಿದ ಮಹಾಭಾಗ್ಯ ಎಂದು ನಂಬುತ್ತೇನೆ. ಎಲ್ಲರನ್ನೂ ಸೇರಿಸಿಕೊಂಡು ಮುಂದಿನ ಚಟುವಟಿಕೆ ಹಮ್ಮಿಕೊಳ್ಳುವ ಇರಾದೆ ಇದೆ.‌ ಸಹಕಾರ ಬಹಳ ಮುಖ್ಯ ಎಂದರು.

ಇದನ್ನೂ ಓದಿ: https://uplustv.com/2024/07/16/belthangadi-perodittaya-katte

ಲಯನ್ಸ್ ಜಿಲ್ಲಾ ನಿಕಟಪೂರ್ವ ರಾಜ್ಯಪಾಲ ಡಾ. ಮೆಲ್ವಿನ್ ಡಿಸೋಜಾ, ಪ್ರಾಂತ್ಯಾಧ್ಯಕ್ಷ ವೆಂಕಟೇಶ ಹೆಬ್ಬಾರ್ ಶುಭ ಹಾರೈಸಿದರು. ಅವರೂ ಸೇರಿದಂತೆ ದ್ವಿತೀಯ ರಾಜ್ಯಪಾಲ ತಾರನಾಥ ಕೊಪ್ಪ, ಜಿಲ್ಲಾ ಕಾರ್ಯದರ್ಶಿ ಓಸ್ವಾಲ್ಡ್ ಡಿಸೋಜಾ, ನಿಕಟಪೂರ್ವ ಅಧ್ಯಕ್ಷ ಡಾ‌.‌ದೇವಿಪ್ರಸಾದ್ ಬೊಳ್ಮ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಲಯನ್ಸ್ ಕ್ಲಬ್ ಪ್ರಥಮ ಮಹಿಳೆ ಆಶಾ ದೇವದಾಸ್ ಶೆಟ್ಟಿ ಹಾಗೂ ವಲಯದ ಇತರ ಕ್ಲಬ್ಬುಗಳ ಅಧ್ಯಕ್ಷರುಗಳು ಉಪಸ್ಥಿತರಿದ್ದರು.

3.33 ಲಕ್ಷ ರೂ.ಗಳ ಶೈಕ್ಷಣಿಕ ಸೇವಾ ಚಟುವಟಿಕೆ:
ಲಯನ್ಸ್ ಕ್ಲಬ್ ಉಪಾಧ್ಯಕ್ಷ ಮುರಳಿ ಬಲಿಪ ಅವರ ವತಿಯಿಂದ 9 ಸರಕಾರಿ ಶಾಲೆಗಳಿಗೆ 2.50 ಲಕ್ಷ ರೂ. ವೆಚ್ಚದಲ್ಲಿ ಉಚಿತ ಪುಸ್ತಕ ವಿತರಣೆ ಸೇರಿದಂತೆ, ನೂತನ ಸಾಲಿನ ಅಧ್ಯಕ್ಷ ದೇವದಾಸ್ ಶೆಟ್ಟಿ ಹಿಬರೋಡಿ ಅವರ ವತಿಯಿಂದ 26 ಅರ್ಹ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನಿಧಿ ಸಮರ್ಪಣೆ, ಪದವಿ ವ್ಯಾಸಂಗದ ಇಬ್ಬರು ವಿದ್ಯಾರ್ಥಿಗಳ ಶೈಕ್ಷಣಿಕ ದತ್ತು ಸ್ವೀಕಾರ‌, ಹೇಮಂತ ರಾವ್ ಯರ್ಡೂರು ಅವರ ವತಿಯಿಂದ ಒಬ್ಬ ವಿದ್ಯಾರ್ಥಿಗೆ ಪ್ರೋತ್ಸಾಹ ನಿಧಿ ಸೇರಿ ಒಟ್ಟು 3, 33, 333 ರೂ. ಗಳ ಶೈಲ್ಷಣಿಕ ಸೇವಾ ಚಟುವಟಿಕೆ ನಡೆಯಿತು.

ಎಸ್ಸೆಸ್ಸೆಲ್ಸಿಯಲ್ಲಿ 7 ನೇ ರ್ಯಾಂಕ್ ಪಡೆದ ಪ್ರತೀಕ್ ವಿ.ಎಸ್, ನಿವೃತ್ತ ಯೋಧ ವಿಕ್ರಮ್ ಜೆ‌.ಎನ್ ಮತ್ತು ಸಮಾಜ ಸೇವಕ ಸುರೇಶ್ ಶೆಟ್ಟಿ ಲಾಯಿಲ ಇವರಿಗೆ ಸನ್ಮಾನ ನಡೆಯಿತು. ಲ. ಉಮೇಶ್ ಶೆಟ್ಟಿ ಅವರ ವತಿಯಿಂದ ತನ್ನ ಸುವರ್ಣ ವರ್ಷದ ಅವಧಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಕಾರ್ಯದರ್ಶಿ ಅನಂತಕೃಷ್ಣ, ಕೋಶಾಧಿಕಾರಿ ಶುಭಾಷಿಣಿ ಅವರನ್ನು ಗೌರವಿಸಲಾಯಿತು.

ಪ್ರಾಪ್ತಿ ಶೆಟ್ಟಿ ಪ್ರಾರ್ಥನೆ ಹಾಡಿದರು. ನಿತ್ಯಾನಂದ ನಾವರ ವೇದಿಕೆಗೆ ಆಹ್ವಾನಿಸಿದರು. ಧರಣೇಂದ್ರ ಕೆ ಜೈನ್ ನಿರೂಪಿಸಿದರು. ದತ್ತಾತ್ರೇಯ ಗೊಲ್ಲ, ನಾಣ್ಯಪ್ಪ ನಾಯ್ಕ್, ಅಶ್ರಫ್ ಆಲಿಕುಂಞಿ ಮುಂಡಾಜೆ, ವಸಂತ ಶೆಟ್ಟಿ, ರಾಜು ಶೆಟ್ಟಿ ಬೆಂಗೆತ್ಯಾರು, ಕೃಷ್ಣ ಆಚಾರ್ಯ, ಲಕ್ಷ್ಮಣ ಪೂಜಾರಿ ವಿವಿಧ ಜವಾಬ್ದಾರಿ ನಿರ್ವಹಿಸಿದರು. ಕಡ್ಟಡ ಸಮಿತಿಯ ಪ್ರಕಾಶ್ ಶೆಟ್ಟಿ ನೊಚ್ಚ ವರದಿ ನೀಡಿದರು. ವೇದಿಕೆಯಲ್ಲೇ ದೇಣಿಗೆ ಚೆಕ್ ಸ್ವೀಕರಿಸಲಾಯಿತು.

ನೂತನ ಸಾಲಿನ ಕಾರ್ಯದರ್ಶಿ ಕಿರಣ್ ಕುಮಾರ್ ಶೆಟ್ಟಿ ಧನ್ಯವಾದವಿತ್ತರು. ಕೋಶಾಧಿಕಾರಿ ಅಮಿತಾನಂದ ಹೆಗ್ಡೆ ಸಹಕರಿಸಿದರು.

Leave a Reply

Your email address will not be published. Required fields are marked *