Mon. Feb 3rd, 2025

Belal : ಡಿ.ಪಿ. ಸ್ಪೋರ್ಟ್ಸ್ ಕ್ಲಬ್ ಬೆಳಾಲು ಇದರ ಆಶ್ರಯದಲ್ಲಿ 10 ನೇ ವರ್ಷದ ತಾಲೂಕು ಮಟ್ಟದ ವಾಲಿಬಾಲ್ ಹಾಗೂ ವಲಯ ಮಟ್ಟದ ಪುರುಷರ ಹಾಗೂ ಮಹಿಳೆಯರ ವಿಭಾಗದ ಹಗ್ಗಜಗ್ಗಾಟ ಕಾರ್ಯಕ್ರಮದ ಸಮಾರೋಪ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ

ಬೆಳಾಲು :(ಫೆ.3) ಡಿ.ಪಿ ಸ್ಪೋರ್ಟ್ಸ್ ಕ್ಲಬ್ ಬೆಳಾಲು ಇದರ ಆಶ್ರಯದಲ್ಲಿ ಬೆಳ್ತಂಗಡಿ ತಾಲೂಕು ವಾಲಿಬಾಲ್ ಅಸೋಶಿಯೇಶನ್ ಇದರ ಸಹಯೋಗದೊಂದಿಗೆ 10 ನೇ ವರ್ಷದ ತಾಲೂಕು ಮಟ್ಟದ ವಾಲಿಬಾಲ್ ಹಾಗೂ ವಲಯ ಮಟ್ಟದ ಪುರುಷರ ಹಾಗೂ ಮಹಿಳೆಯರ ವಿಭಾಗ ಹಗ್ಗಜಗ್ಗಾಟ ಕಾರ್ಯಕ್ರಮದ ಸಮಾರೋಪ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ 02 ರಂದು ದೊಂಪದಪಲ್ಕೆ ಕ್ರೀಡಾಂಗಣದಲ್ಲಿ ನಡೆಯಿತು.

ಇದನ್ನೂ ಓದಿ: ಉಜಿರೆ : ಸಂಗಮ ಕ್ಷೇತ್ರ ಪಜಿರಡ್ಕಕ್ಕೆ ಬಂತು ನೂತನ ಪುಷ್ಪರಥ


ಬೆಳಾಲು ಡಿ.ಪಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾದ ಯಶವಂತ್ ಗೌಡ, ಸಭಾಧ್ಯಕ್ಷತೆ ವಹಿಸಿದ್ದರು, ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ತಾಲೂಕು ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷರಾದ ತಿಮ್ಮಪ್ಪ ಗೌಡ, ಸಿವಿಲ್ ಇಂಜಿನಿಯರ್ ಮೋಹನ್ ಗೌಡ ವಚ್ಚ, ಬೆಂಗಳೂರು ಟೇಕ್ ಮಹೇಂದ್ರ ಸಾಫ್ಟ್ ವೇರ್ ಇಂಜಿನಿಯರ್ ಅರ್ಚನ್ ಎಸ್.ವೈ ಸೌತೆಗದ್ದೆ, ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಗೌಡ ಖಂಡಿಗ,ಉಜಿರೆ ಎಸ್.ಡಿ.ಎಮ್. ಆಸ್ಪತ್ರೆ ಆರ್ಥೋ ಸರ್ಜನ್ ಡಾ | ರಜತ್. ಎಚ್. ಪಿ, ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಲಯಮಟ್ಟದ ಪುರುಷರುವಿಭಾಗ ಹಗ್ಗಜಗ್ಗಾಟದಲ್ಲಿ ಡಿ. ಪಿ ಸ್ಪೋರ್ಟ್ಸ್ ಕ್ಲಬ್ ಬೆಳಾಲು ಎ ತಂಡ ಪ್ರಥಮ, ಡಿ. ಪಿ ಸ್ಪೋರ್ಟ್ಸ್ ಕ್ಲಬ್ ಬೆಳಾಲು ಬಿ ತಂಡ ದ್ವಿತೀಯ ಸ್ಥಾನ ಪಡೆಯಿತು,
ವಲಯ ಮಟ್ಟದ ಮಹಿಳೆಯರ ವಿಭಾಗ ಹಗ್ಗಜಗ್ಗಾಟದಲ್ಲಿ ತೃಪ್ತಿ ಫ್ರೆಂಡ್ಸ್ ಮೊಗ್ರು ಬಂದಾರು ತಂಡ ಪ್ರಥಮ, ಅನಂತೇಶ್ವರ ಫ್ರೆಂಡ್ಸ್ ಬೆಳಾಲು ತಂಡ ದ್ವಿತೀಯ ಸ್ಥಾನ ಪಡೆಯಿತು.


ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಸಂಗಮ ಅಕ್ಷಯ ನಗರ ತಂಡ ಪ್ರಥಮ, ಆರ್. ಜೆ ಫ್ರೆಂಡ್ಸ್ ಕಲ್ಲಗುಡ್ಡೆ ತಂಡ ದ್ವಿತೀಯ,ಪಂಚ ದುರ್ಗ ಕೊಯ್ಯೂರು ತಂಡ ತೃತೀಯ,
ಬೆಳಾಲು ಡಿಪಿ ಸ್ಪೋರ್ಟ್ಸ್ ಕ್ಲಬ್ ತಂಡ ಚತುರ್ಥ ಸ್ಥಾನ ಪಡೆದು ಪ್ರಶಸ್ತಿ ತಣ್ಣದಾಗಿಸಿಕೊಂಡಿತು, ವೈಯಕ್ತಿಕ ವಿಭಾಗದಲ್ಲಿ ಬೆಸ್ಟ್ ಅಟ್ಯಾಕರ್ ಪ್ರಶಸ್ತಿಯನ್ನು ಆರ್.ಜೆ. ಫ್ರೆಂಡ್ಸ್ ಕಲ್ಲುಗುಡ್ಡೆ ತಂಡದ ಸಾಯಿಸ್, ಬೆಸ್ಟ್ ಸೆಟ್ಟರ್ ಪ್ರಶಸ್ತಿಯನ್ನು ಸಂಗಮ ಅಕ್ಷಯನಗರ ತಂಡದ ರಕ್ಷಣ್ ಸುರ್ಯ , ಬೆಸ್ಟ್ ಆಲ್ ರೌಂಡರ್ ಪ್ರಶಸ್ತಿಯನ್ನು


ಸಂಗಮ ಅಕ್ಷಯನಗರ ತಂಡದ ಗಗನ್ ಬಂದಾರು, ಬೆಸ್ಟ್ ಲೀಬ್ರೋ ಪ್ರಶಸ್ತಿಯನ್ನು ಆರ್.ಜೆ. ಫ್ರೆಂಡ್ಸ್ ಕಲ್ಲುಗುಡ್ಡೆ ತಂಡದ ಪ್ರತೀಕ್ ರಾಜ್ ರವರು ಪ್ರಶಸ್ತಿ ತನ್ನದಾಗಿಸಿಕೊಂಡರು.


ಡಿ.ಪಿ. ಸ್ಪೋರ್ಟ್ಸ್ ಕ್ಲಬ್ ಸದಸ್ಯರಾದ ಪ್ರಸಾದ್ ಅಡ್ಡಾರು ಸ್ವಾಗತಿಸಿ, ವಾಣಿ ಕಾಲೇಜು ಉಪನ್ಯಾಸಕರಾದ ಬೆಳಿಯಪ್ಪ ಗೌಡ ನಿರೂಪಿಸಿ, ಡಿ.ಪಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾದ ಯಶವಂತ್ ಗೌಡ ಧನ್ಯವಾದವಿತ್ತರು.

Leave a Reply

Your email address will not be published. Required fields are marked *