Wed. Feb 5th, 2025

Udupi: ಉಡುಪಿ ಟೀಚರ್ಸ್ ಕೋ ಆಪರೇಟಿವ್ ಬ್ಯಾಂಕ್ ಆಡಳಿತ ಮಂಡಳಿಯ ನಿರ್ದೇಶಕರಾಗಿ ಧರಣೇಂದ್ರ ಕೆ. ಜೈನ್ ಆಯ್ಕೆ

ಉಡುಪಿ:(ಫೆ.4) ಟೀಚರ್ಸ್ ಕೋ ಆಪರೇಟಿವ್ ಬ್ಯಾಂಕ್ ಉಡುಪಿಯ 2025 ರಿಂದ 2030 ರವರೆಗಿನ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆದು ಪ್ರೌಢಶಾಲಾ ವಿಭಾಗದಲ್ಲಿ ಬೆಳ್ತಂಗಡಿ ತಾಲೂಕಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ಪುಂಜಾಲಕಟ್ಟೆಯ ಪ್ರೌಢಶಾಲಾ ವಿಭಾಗದ ಶಿಕ್ಷಕರಾದ ಧರಣೇಂದ್ರ ಕೆ ಇವರ ತಂಡ ಅತಿ ಹೆಚ್ಚು ಮತಗಳನ್ನು ಪಡೆದು ಜಯಶಾಲಿಗಳಾಗಿದ್ದಾರೆ.

ಇದನ್ನೂ ಓದಿ: ಕಳಿಯ: ಕಳಿಯ ಪಂಚಾಯತ್ ಗ್ರಂಥಾಲಯ ಸಲಹಾ ಸಮಿತಿಯ ಸಭೆ


ಈ ತಂಡದಲ್ಲಿ ಪುಂಜಾಲಕಟ್ಟೆಯ ಪ್ರೌಢಶಾಲಾ ವಿಭಾಗದ ಧರಣೇಂದ್ರ ಕೆ, ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕು ಕಳ್ತೂರು ಸಂತೆಕಟ್ಟೆಯ ಶ್ರೀ ಮನೋಹರ ಹೆಗ್ಡೆ, ಕೊಲ್ಲೂರು ಮೂಕಾಂಬಿಕ ಪ್ರೌಢಶಾಲೆ ಬೀಸಿನಪಾರೆಯ ಶ್ರೀ ರಾಜೀವ ಶೆಟ್ಟಿ ಅದೇ ರೀತಿ ಮಹಿಳಾ ವಿಭಾಗದಲ್ಲಿ ಶ್ರೀಮತಿ ಕಸ್ತೂರಿ ಹೆಚ್ ಆರ್, ಸರಕಾರಿ ಪದವಿ ಪೂರ್ವ ಕಾಲೇಜು,

ಕಾವೂರು ಮಂಗಳೂರಿನ ಪ್ರೌಢಶಾಲಾ ವಿಭಾಗದ ಶಿಕ್ಷಕಿ ಮತ್ತು ಠೇವಣಿ ವಿಭಾಗದಲ್ಲಿ ನಿತ್ಯಾನಂದ ಶೆಟ್ಟಿ, ಸಹ ಶಿಕ್ಷಕ, ರಾಯ್ಸನ್ ಸರಕಾರಿ ಪ್ರೌಢಶಾಲೆ, ಕಂಡೂರು, ಕುಂದಾಪುರ ಉಡುಪಿ ಇವರು ಆಯ್ಕೆಯಾಗಿರುತ್ತಾರೆ. ಆಯ್ಕೆಯಾಗಿರುವ ಐದು ಜನರು ಕೂಡ ತಮ್ಮ ಪ್ರತಿಸ್ಪರ್ಧಿಗಳಿಗಿಂತ ಅತಿ ಹೆಚ್ಚು ಮತಗಳನ್ನು ಪಡೆದು ಆಯ್ಕೆಯಾಗಿರುತ್ತಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಸಂಬಂಧಿಸಿದ ಈ ವಿಭಾಗದ ಚುನಾವಣಾ ಮುಖ್ಯಸ್ಥರು ತಿಳಿಸಿರುತ್ತಾರೆ.


ಇವರೆಲ್ಲರೂ ಕೂಡ ಈಗಾಗಲೇ ಶಿಕ್ಷಣ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಗುರುತಿಸಿಕೊಂಡವರಾಗಿದ್ದು ಮುಂದಿನ ದಿನಗಳಲ್ಲಿ ಶಿಕ್ಷಕರ ವ್ಯವಹಾರಿಕ ವಿಚಾರಕ್ಕೂ ಕೂಡ ಸ್ಪಂದಿಸಲಿ ಎಂದು ಸರ್ವಶಿಕ್ಷಕರು ಕೂಡ ಆಶಯವನ್ನು ವ್ಯಕ್ತಪಡಿಸುತ್ತಿದ್ದಾರೆ.

Leave a Reply

Your email address will not be published. Required fields are marked *