ಚಿಕ್ಕಬಳ್ಳಾಪುರ , (ಫೆ.05): ಚಿಕ್ಕಬಳ್ಳಾಪುರ ತಾಲೂಕಿನ ಗೌಚೇನಹಳ್ಳಿಯ ಸುಭಾಷ್‌ಗೆ ಈಗಿನ್ನೂ 29 ವರ್ಷ ವಯಸ್ಸು. ಇದೇ ಸುಭಾಷ್ ವರ್ಷದ ಹಿಂದೆ ದೊಡ್ಡಬಳ್ಳಾಪುರದ ಆಚಾರ್ಲಹಳ್ಳಿಯ ಇಂದುಶ್ರೀಯನ್ನು ಪ್ರೀತಿಸಿ ಮದುವೆ ಆಗಿದ್ದ. ಸ್ವರ್ಗಕ್ಕೆ ಕಿಚ್ಚು ಹಚ್ಚುವಂತೆ ಸಂಸಾರ ಇತ್ತು. ಪ್ಲಿಪ್‌ಕಾರ್ಟ್‌ನಲ್ಲಿ ಕೆಲಸ ಮಾಡ್ತಿದ್ದ ಸುಭಾಷ್, ಮನೆ ಖರ್ಚಿಗೆ ಹಣ ತಂದು ಕೊಡುತ್ತಿದ್ದ. ಆದ್ರೆ ಇದೇ ಸುಭಾಷ್ ಮೇಲೆ ಪತ್ನಿಗೆ ಅನುಮಾನ ಶುರುವಾಗಿತ್ತು. ಅಷ್ಟೇ ಅಲ್ಲ ಪತ್ನಿ ಮೇಲೆ ಸುಭಾಷ್‌ಗೂ ಅನುಮಾನ ಕಾಡ್ತಿತ್ತು. ನನ್ನ ಬಿಟ್ಟು ಬೇರೆಯವರ ಜತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದೀಯಾ ಎಂದು ಗಲಾಟೆ ಮಾಡಿಕೊಂಡ ಇಬ್ಬರು ಪರಸ್ಪರ ದೂರವಾಗಿದ್ದರು. ಹೀಗಿರುವಾಗಲೇ ಸುಭಾಷ್ ಕೊಲೆ ಆಗಿ ಹೋಗಿದ್ದಾನೆ.
ಇದನ್ನೂ ಓದಿ: ಬಂಟ್ವಾಳ: ಮಿಸ್ ಫೈರಿಂಗ್ ಆಗಿ ಕಾಂಗ್ರೆಸ್ ಸಕ್ರೀಯ ಕಾರ್ಯಕರ್ತ ಚಿತ್ತರಂಜನ್ ಶೆಟ್ಟಿ ಕಾಲಿಗೆ ಗಾಯ
ಇನ್ನು ಮನೆಗೆ ಆಸರೆಯಾಗಿದ್ದ ಸುಭಾಷ್ ನ ಕೊಲೆ ಸುದ್ದಿ ತಿಳಿದ ತಾಯಿ, ತಂಗಿ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯ ಆವರಣದಲ್ಲಿ ಗೋಳಾಡಿದ್ದು, ಮನಕಲುಕುವಂತಿತ್ತು. ಸ್ವತಃ ಇಂದುಶ್ರೀಯ ತಮ್ಮ ಮನೋಜ್‍ಕುಮಾರ್ ಸೇರಿದಂತೆ ಪ್ರವೀಣ್, ವಿಘ್ನೇಶ್ , ಗಿರೀಶ್, ಅನಿಲ್, ಪ್ರಸಾದ್ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ಆಗಮಿಸಿ ಶರಣಾಗಿದ್ದಾರೆ. ಇನ್ನು ಘಟನೆಯಲ್ಲಿ 10 ಜನರು ಭಾಗಿಯಾಗಿದ್ದು, ಪೊಲೀಸರು ಎಲ್ಲರನ್ನೂ ಬಂಧಿಸಿದ್ದಾರೆ. ಮೋಹನ್, ಕಾರ್ತಿಕ್, ನಂದ, ಸಿರೀಶ್, ಬಂಧಿತ ಆರೋಪಿಗಳಾಗಿದ್ದಾರೆ.
ಅಷ್ಟಕ್ಕೂ ಇಲ್ಲಿ ಸುಭಾಷ್‌ನ ಕತೆ ಮುಗಿಸಿದ್ದು ಬೇರೆ ಯಾರು ಅಲ್ಲ. ಸುಭಾಷ್‌ನ ಪತ್ನಿ ಇಂದುಶ್ರೀಯ ಸಹೋದರ ಮನೋಜ್‌ಕುಮಾರ್. ತನ್ನ ಪಟಾಲಂ ಕಟ್ಟಿಕೊಂಡು ಬಂದು ಬಾವನ ಕತೆ ಮುಗಿಸಿದ್ದ. ಅದೇ ಮನೋಜ್‌ಕುಮಾರ್ ತನ್ನ ಗ್ಯಾಂಗ್ ಜತೆ ಪೊಲೀಸರಿಗೆ ಶರಣಾಗಿದ್ದಾನೆ. ಈ ಕೊಲೆ ಕೇಸ್‌ನಲ್ಲಿ ಇಂದುಶ್ರೀ ಸಹೋದರ ಮಾತ್ರ ಭಾಗಿ ಆಗಿಲ್ಲ. ಪ್ರವೀಣ್ ಎನ್ನುವ ಮತ್ತೊಬ್ಬ ಆರೋಪಿಯೂ ಇದ್ದಾನೆ. ಈ ಪ್ರವೀಣ್ ಜತೆ ಇಂದುಶ್ರೀಗೆ ಅಕ್ರಮ ಸಂಬಂಧ ಇತ್ತಂತೆ. ಅದೇ ಪ್ರಿಯಕರನಿಗೆ ಹೇಳಿ ಗಂಡನನ್ನು ಕೊಲ್ಲಿಸಿರುವುದು ಗೊತ್ತಾಗಿದೆ.
ದೊಡ್ಡಬಳ್ಳಾಪುರ ತಾಲ್ಲೂಕು ಆಚಾರ್ಲಹಳ್ಳಿ ಗ್ರಾಮದ ಇಂದುಶ್ರೀಯನ್ನು ಪ್ರೀತಿಸಿ ಮದುವೆ ಮಾಡಿಕೊಂಡಿದ್ದ. ಆದರೆ ಕಳೆದ 6 ತಿಂಗಳಿನಿಂದ ನಿನಗೆ ಅನೈತಿಕ ಸಂಬಂಧವಿದೆಯೆಂದು ಅವಳು.. ನಿನಗೆ ಅನೈತಿಕ ಸಂಬಂಧವಿದೆಯೆಂದು ಇವನು. ಪರಸ್ಪರ ಮುನಿಸಿಕೊಂಡು ದೂರವಾಗಿದ್ದರು. ಇದೇ ವಿಚಾರದಲ್ಲಿ ಫೆಬ್ರವರಿ 03 ರಂದು ತಡರಾತ್ರಿ ಸುಭಾಷ್ ನ ಕೊಲೆಯಾಗಿದೆ ಎಂದು ಮೃತನ ಸಂಬಂಧಿಗಳು ಆರೋಪಿಸಿದ್ದಾರೆ.