Thu. Feb 6th, 2025

Manjeshwara: ಬಸ್ ನಲ್ಲಿ ಪ್ರಯಾಣಿಕರ ಹಣ ಹಾಗೂ ಮೊಬೈಲ್ ಫೋನ್ ಕಳವುಗೈದ ಮಹಿಳಾಮಣಿಗಳು – ಮೂವರು ಮಹಿಳೆಯರು ಅಂದರ್!!

ಮಂಜೇಶ್ವರ:(ಫೆ.6) ಬಸ್ಸಿನಲ್ಲಿ ಪ್ರಯಾಣಿಕರ ಹಣ ಹಾಗೂ ಮೊಬೈಲ್ ಫೋನ್ ಕಳವುಗೈದ ಆರೋಪದಲ್ಲಿ ಮೂವರು ಮಹಿಳೆಯರನ್ನು ಮಂಜೇಶ್ವರ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಪುತ್ತೂರು: ಮುಸುಕುಧಾರಿಗಳಿಂದ ಕೆಡವಲ್ಪಟ್ಟ ಬಿಜೆಪಿ ಮುಖಂಡನ ಮನೆಯೊಳಗೆ ಚಿನ್ನಾಭರಣ ಪತ್ತೆ!!

ಕರ್ನಾಟಕ ಸಾರಿಗೆ ನಿಗಮದ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕುಂಜತ್ತೂರಿನ ತಾರಾಮಣಿ ಎಂಬವರ ಮೊಬೈಲ್ ಫೋನ್, ಎಂಟು ಸಾವಿರ ರೂ.ನಗದು ಒಳಗೊಂಡ ಬ್ಯಾಗ್ ಕಳವಾಗಿತ್ತು. ಈ ಬಗ್ಗೆ ಮಂಜೇಶ್ವರ ಠಾಣಾ ಪೊಲೀಸರಿಗೆ ದೂರು ನೀಡಲಾಗಿತ್ತು.

ಈ ಹಿನ್ನೆಲೆಯಲ್ಲಿ ವಿವಿಧ ಸ್ಥಳಗಳಲ್ಲಿನ ಸಿಸಿಟಿವಿ ಕ್ಯಾಮರಾಗಳನ್ನು ಕೇಂದ್ರೀಕರಿಸಿ ನಡೆಸಿದ ತನಿಖೆಯಂತೆ ಪೊಲೀಸರು ಶಂಕಿತ ಮೂವರು ಮಹಿಳೆಯರನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸ್ ವಶದಲ್ಲಿರುವ ಮಹಿಳೆಯರು ತಮಿಳುನಾಡು ಮೂಲದವರೆಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *