ಮಂಜೊಟ್ಟಿ:(ಫೆ.7) ಸ್ಟಾರ್ ಲೈನ್ ಅರಬಿಕ್ ಮದರಸ ಹಾಗೂ ಸ್ಟಾರ್ ಲೈನ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ರಝಾ ಗಾರ್ಡನ್ ಮಂಜೊಟ್ಟಿ ಗೆ ಸುನ್ನಿ ಜಂ -ಇಯ್ಯತುಲ್ ಮುಅಲ್ಲಿ ಮೀನ್ ಇದರ ಅಧ್ಯಕ್ಷರಾದ ಜೆಪ್ಪು ಉಸ್ತಾದ್ ಭೇಟಿ ನೀಡಿದ ಶಾಲೆಯಲ್ಲಿನ ಅರಬಿಕ್ ಶಿಕ್ಷಣ ಚಟುವಟಿಕೆಗಳ ಬಗ್ಗೆ ಚರ್ಚಿಸಿ ಪ್ರಶಂಸೆ ವ್ಯಕ್ತಪಡಿಸಿದರು.

ಇದನ್ನೂ ಓದಿ: ಪುತ್ತೂರು: ಪುತ್ತೂರು ದೇವಸ್ಥಾನಕ್ಕೆ ಸೇರಿದ್ದ ಜಾಗದಲ್ಲಿದ್ದ ಮನೆ ಧ್ವಂಸ ಪ್ರಕರಣ
10ನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳು ಗಳಿಸಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ಎಸ್ ಎಸ್ ಎಫ್ ಆಯೋಜಿಸಿರುವ ರಾಷ್ಟ್ರ ಮಟ್ಟದ ಸಾಹಿತ್ಯೋತ್ಸವದಲ್ಲಿ ಭಾಗವಹಿಸಿ ಉರ್ದು ಭಾಷಣದಲ್ಲಿ ಪ್ರಥಮ ಸ್ಥಾನ ಗಳಿಸಿದ ನಮ್ಮ ಶಾಲೆಯ 5ನೇ ತರಗತಿಯ ವಿದ್ಯಾರ್ಥಿ ಸಯ್ಯದ್ ಮುಹಮ್ಮದ್ ಉವೈಸ್ ರವರನ್ನು ಅಭಿನಂದಿಸಿದರು. ಅಹ್ಲುಸುನ್ನತ್ ವಲ್ ಜಮಾಅತ್ ಇದರ ಆಶಯ ಆದರ್ಶಗಳನ್ನು ಇಸ್ಲಾಂಮಿನ ಚೌಕಟ್ಟಿನಲ್ಲಿ ಮುನ್ನಡೆಸುವಲ್ಲಿ ನೇತೃತ್ವ ವಹಿಸಿಕೊಂಡಿರುವ ಜನಾಬ್ ಸಯ್ಯದ್ ಹಬೀಬ್ ಹಾಜಿ, ಆಡಳಿತ ಟ್ರಸ್ಟ್ ,




ಹಾಗೂ ಅಧ್ಯಾಪಕ ವೃಂದಕ್ಕೂ, ವಿದ್ಯಾರ್ಥಿಗಳಿಗೂ, ಪೋಷಕರಿಗೂ ಪ್ರತ್ಯೇಕವಾಗಿ ಪ್ರಾರ್ಥನೆ ಮಾಡಿದರು. ಸಂಸ್ಥೆಯ ಪ್ರದಾನ ಕಾರ್ಯದರ್ಶಿ ಸಯ್ಯದ್ ಅಯ್ಯೂಬ್, ಅರಬಿಕ್ ಮುಖ್ಯೋಪಾಧ್ಯಾಯರು ಅಬ್ದುರ್ರಝಾಖ್ ಇಂದಾದಿ, ನಾವೂರು ಸಹ ಅಧ್ಯಾಪಕರಾದ, ಮುಹಮ್ಮದ್ ಅಶ್ರಫ್ ಹಿಮಮಿ, ಅಬ್ದುಲ್ ಖಾದರ್ ಮಿಸ್ಬಾಹಿ, ಯಾಕೂಬ್ ಮದನಿ, ಮುಹಮ್ಮದ್ ಮುಸ್ಲಿಯಾರ್, ಉಪಸ್ಥಿತರಿದ್ದರು.
