ಮಂಗಳೂರು:(ಫೆ.8) ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರು,

ಇದನ್ನೂ ಓದಿ: ಮಂಗಳೂರು: ಮಂಗಳೂರಿನ ಯುವಕ ಹಾಗೂ ಕೇರಳದ ಅರ್ಚಕನ ನಡುವೆ ಸೆ#ಕ್ಸ್ ಚಾಟ್!!
ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ ಖಾದರ್ ಫರೀದ್ ಅವರ ಪರಮ ಶಿಷ್ಯ, ಪುದು ಗ್ರಾಮ ಪಂಚಾಯತ್‌ನ ಮಾಜಿ ಉಪಾಧ್ಯಕ್ಷರು ಮತ್ತು ಹಾಲಿ ಸದಸ್ಯರಾದ ಹಾಶೀರ್ ಪೇರಿಮಾರ್ ರವರು 4,667 ಮತಗಳನ್ನು ಪಡೆಯುವ ಮೂಲಕ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.
ಈ ಹುದ್ದೆಗೆ ಜಿಲ್ಲಾ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರದ ಒಟ್ಟು 20 ಜನ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಸ್ಪರ್ಧಿಸಿದರು.



ಇಬ್ರಾಹಿಂ ಬಾತಿಷಾ ಆತೂರು 4265 ಮತಗಳನ್ನು ಪಡೆದು ಎರಡನೇ ಸ್ಥಾನ ತಲುಪಿದ್ದಾರೆ. ಇನ್ನು ಮೊಹಮ್ಮದ್ ಉನೈಸ್ 2323 ಮತಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ.

ಎಐಸಿಸಿ ಚುನಾವಣೆ ಸಮಿತಿ ಯುವ ಕಾಂಗ್ರೆಸ್‌ನ ಎಲ್ಲ ಹಂತದ ಘಟಕಗಳಿಗೆ ನೋಂದಣಿ ಮಾಡಿಕೊಂಡಿತ್ತು. ರಾಜ್ಯ ಘಟಕ, ಜಿಲ್ಲಾ ಘಟಕ, ಬ್ಲಾಕ್ ಘಟಕಗಳಿಗೆ ವಿವಿಧ ಹುದ್ದೆಗಳಿಗೆ ಏಕ ಕಾಲಕ್ಕೆ ಮತದಾನ ನಡೆದಿತ್ತು.
