ಬೆಳ್ತಂಗಡಿ :(ಫೆ.8) ರಾಜ್ಯಮಟ್ಟದ ಪ್ರತಿಭಾ ಕಾರಂಜಿಯಲ್ಲಿ ತೃತೀಯ ಸ್ಥಾನ ಪಡೆದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯ ಕವ್ವಾಲಿ ವಿದ್ಯಾರ್ಥಿಗಳಾದ 9ನೇ ತರಗತಿಯ ಅನಘ ಮರಾಠೆ, ಸಹನಾ ಆಚಾರ್ಯ, ಜೈದೀಪ್ ಗೌಡ,

ಇದನ್ನೂ ಓದಿ: ಆಗ್ರಾ: ಪ್ಯಾರಾಚೂಟ್ ತೆರೆಯದೇ 1500 ಅಡಿ ಎತ್ತರದಿಂದ ಬಿದ್ದು ಕನ್ನಡಿಗ ಸಾವು!
ಶ್ರೀವಿನೀತ್, ಎಂಟನೇ ತರಗತಿಯ ವಿದ್ಯಾರ್ಥಿಗಳಾದ ಶ್ರೀರಕ್ಷ, ಹಾಗೂ ನಿಧಿಶ್ ಇವರು ಚಿತ್ರದುರ್ಗದಲ್ಲಿ ನಡೆದ ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭಾಗವಹಿಸಿ,



ದಕ್ಷಿಣ ಕನ್ನಡವನ್ನು ಪ್ರತಿನಿಧಿಸಿ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. ಮುಖ್ಯ ಶಿಕ್ಷಕರಾದ ಶ್ರೀಮತಿ ಹೇಮಲತಾ ಎಂ ಆರ್ ರವರ ಮಾರ್ಗದರ್ಶನದೊಂದಿಗೆ ಶಿಕ್ಷಕಿ ಸುಮಲತಾ ತರಬೇತಿಯನ್ನು ನೀಡಿರುತ್ತಾರೆ.

