ಕಾರಾವಾರ:(ಪೆ.10) ಅಖಿಲ ಭಾರತ ಕ್ಯಾಥೊಲಿಕ್ ಯೂನಿಯನ್(AICU) ಮೊದಲ ಕಾರ್ಯಕಾರಿ ಸಭೆ ರಾಜ್ಯಧ್ಯಕ್ಷರಾದ ಆಲ್ವಿನ್ ಡಿಸೋಜ ಇವರ ನೇತೃತ್ವದಲ್ಲಿ ಹೋಲಿ ಕ್ರಾಸ್ ಚರ್ಚ್ ಹಾಲ್, ಶಿರ್ವಾಡ್, ಕಾರವಾರದಲ್ಲಿ ನಡೆಯಿತು.

ಇದನ್ನೂ ಓದಿ: Mangaluru: ಕುತ್ತಿಗೆಯ ಮೂಲಕ ಬಾಲಕನ ಎದೆಯ ತನಕ ಹೊಕ್ಕಿದ್ದ ತೆಂಗಿನ ಗರಿ
ಬೆಳಿಗ್ಗೆ 10:00 ಗಂಟೆಗೆ ಸಭೆಯು ಆರಂಭಗೊಂಡು ಅತಿ ವಂದನಿಯ ಮುನ್ಸಿನ್ಜೋರು ಫಾ. ರಿಚಾರ್ಜ್ ರೂಡ್ರಿಗಸ್ ಪ್ರಾರ್ಥನೆಯನ್ನು ನೆರವೇರಿಸಿದರು. ರಾಜ್ಯಧ್ಯಕ್ಷರಾದ ಆಲ್ವಿನ್ ಡಿಸೋಜ ಇವರು ವಿವಿಧ ಕಡೆಯಿಂದ ಬಂದ ಸಂಘಟನೆ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಸ್ವಾಗತ ಕೋರಿ, ಸಂಘಟನೆಗಳನ್ನು ಬಲಪಡಿಸಲು ಕರೆಕೊಟ್ಟರು.
AICU ನ ಮಾಜಿ ಅಧ್ಯಕ್ಷರಾದ ಲ್ಯಾನ್ಸಿ ಡಿಕುನ್ಹಾ ನವರು ಉತ್ತೇಜನ ಭಾಷಣ ಹಾಗೂ AICU ಬಗ್ಗೆ ತಿಳಿಸಿದರು.
ಸಭೆಯಲ್ಲಿ ಆಲ್ವಿನ್ ಡಿಸೋಜ ಹಾಗು ಲ್ಯಾನ್ಸಿ ಡಿಕುನ್ಹಾ ಇವರನ್ನು ಸನ್ಮಾನಿಸಲಾಯಿತು.



ಸಭೆಯಲ್ಲಿ ಅನೇಕ ನಿರ್ಣಯ ಕೈಗೊಳ್ಳಲಾಯಿತು. ಎಲ್ಲರೂ ಅವರವರ ಅಭಿಪ್ರಾಯ ತಿಳಿಸಿದರು. ವಂದನಿಯ ಪಾ. ರೊನಿ ರೂಡ್ರಿಗಸ್, ಜಾರ್ಜ್ ಫರ್ನಾಂಡಿಸ್, ಅಸಿಸ್ಸಿ ಗೊನ್ಸಲಿಸ್, ದಿಪಕ್ ಡಿಸೋಜ ಹಾಗು ವಿವಿಧ ಜಿಲ್ಲೆಯ ಸಂಘಟನೆಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು.

ಎಲ್ಲರಿಗೂ ಅಖಿಲ ಭಾರತ ಕ್ಯಾಥೊಲಿಕ್ ಯೂನಿಯನ್ ರಾಜ್ಯ ಕಾರ್ಯದರ್ಶಿ ಸ್ಟೇಪನ್ ರೂಡ್ರಿಗಸ್ ಧನ್ಯವಾದ ಅರ್ಪಿಸಿದರು.
