Video viral :(ಫೆ.10) ಆಗಾಗ ರಾಜಕಾರಣಿಗಳ ಸರಸ ಸಲ್ಲಾಪದ ವಿಡಿಯೋಗಳು ವೈರಲ್ ಆಗುತ್ತಾ ಇರುತ್ತವೆ. ಅಂತೆಯೇ ಇದೀಗ ಮತ್ತೊಬ್ಬ ರಾಜಕಾರಣಿಯ ಸೀಕ್ರೆಟ್ ವಿಡಿಯೋ ಲೀಕ್ ಆಗಿದೆ.

ಇದನ್ನೂ ಓದಿ: ಬಂದಾರು: ಪಾಣೆಕಲ್ಲು ಶಿರಾಡಿ ಗ್ರಾಮದೈವ ಸಪರಿವಾರ ದೈವಸ್ಥಾನದ
ತಿರುಪತಿ ಜನಸೇನಾ ಪಕ್ಷದ ಉಸ್ತುವಾರಿ ಕಿರಣ್ ರಾಯಲ್ ಅವರದ್ದು ಎನ್ನಲಾದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದರಲ್ಲಿ ಜನಸೇನಾ ಉಸ್ತುವಾರಿ ಕಿರಣ್ ರಾಯಲ್ ಮಹಿಳೆಯ ಜೊತೆ ನಿಕಟವಾಗಿರುವ ದೃಶ್ಯ ಸೆರೆಯಾಗಿದೆ.

ಜೊತೆಗೆ ಮಹಿಳೆಗೆ ಮೋಸ ಮಾಡಿದ ಕಿರಣ್ ಅವರನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯ ಕೂಡ ಕೇಳಿ ಬರುತ್ತಿವೆ. ಅಲ್ಲದೆ, ಈ ಬಗ್ಗೆ ಪವನ್ ಕಲ್ಯಾಣ್ ಏಕೆ ಮಾತನಾಡುತ್ತಿಲ್ಲ ಅಂತ ಮಹಿಳಾ ಸಂಘಟನೆಗಳು ಪ್ರಶ್ನೆ ಮಾಡುತ್ತಿವೆ.



ಇನ್ನೂ ಕಳೆದ ಕೆಲವು ದಿನಗಳ ಹಿಂದೆ ಕಿರಣ್ ರಾಯಲ್ ಬೆದರಿಕೆ ಹಾಕಿ ತಮ್ಮಿಂದ 1 ಕೋಟಿ ರೂ.ಗಿಂತ ಹೆಚ್ಚು ನಗದು ಮತ್ತು 25 ಪವನ್ ಚಿನ್ನವನ್ನು ದೋಚಿ ಆರ್ಥಿಕ ತೊಂದರೆಗೆ ಸಿಲುಕಿಸಿದ್ದಾರೆ.. ಅದಕ್ಕಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಲಕ್ಷ್ಮಿ ಎಂಬ ಮಹಿಳೆ ವಿಡಿಯೋ ರಿಲೀಸ್ ಮಾಡಿದ್ದಳು. ಇದರ ನಡುವೆ ಇದೀಗ ಈ ವಿಡಿಯೋ ಬೆಳಕಿಗೆ ಬಂದಿದೆ.
