ಉಳ್ಳಾಲ:(ಫೆ.10) ಕಪ್ಪೆ ಚಿಪ್ಪು ಹೆಕ್ಕಲು ನೇತ್ರಾವತಿ ನದಿಗಿಳಿದ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಉಳ್ಳಾಲದಲ್ಲಿ ನಡೆದಿದೆ.

ಇದನ್ನೂ ಓದಿ: ಬಂಟ್ವಾಳ: ಎರಡು ಕಾರುಗಳ ನಡುವೆ ಭೀಕರ ಅಪಘಾತ
ಉಳ್ಳಾಲ ತಾಲೂಕಿನ ಹರೇಕಳ ಬೈತಾರ್ ಸಮೀಪ ವಿನೋದ್ ಗಟ್ಟಿ (40) ಎಂಬುವವರು ಮನೆಯಿಂದ ಪಂಪ್ ವೆಲ್ ಕಡೆಗೆ ಕೆಲಸಕ್ಕೆಂದು ತೆರಳಿದ್ದು ಮಧ್ಯಾಹ್ನ ವೇಳೆ ಕೆಲಸದಿಂದ ವಾಪಸ್ ಬಂದಿದ್ದಾರೆ. ಬಳಿಕ ಮನೆಯ ಬಳಿಯ ನದಿಗೆ ಕಪ್ಪೆ ಚಿಪ್ಪು ಹೆಕ್ಕಲು ಇಳಿದಿದ್ದಾರೆ.


ಈ ಸಂದರ್ಭ ವಿನೋದ್ ಅವರ ಕಾಲು ನದಿಯ ಕೆಸರಿನಲ್ಲಿ ಹೂತು ಹೋಗಿದ್ದು ನೀರಿನಿಂದ ಮೇಲೆಳಲು ಸಾಧ್ಯವಾಗದೆ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


