Sun. Feb 23rd, 2025

Hubballi: ಮೊಮ್ಮಗಳ ವಯಸ್ಸಿನ ಹುಡುಗಿ ಜೊತೆ ಮುದಿ ಅಂಕಲ್ ಲವ್ವಿ ಡವ್ವಿ – ಊರು ಬಿಟ್ಟು ಪರಾರಿಯಾದ ಯುವಪ್ರೇಮಿಗಳು!!

ಹುಬ್ಬಳ್ಳಿ:(ಫೆ.14)ಹುಬ್ಬಳ್ಳಿಯಲ್ಲೊಂದು ವಿಚಿತ್ರ ಲವ್ ಸ್ಟೋರಿ ಬೆಳಕಿಗೆ ಬಂದಿದೆ. ಮುದಿ ಅಂಕಲ್ ಮೊಮ್ಮಗಳ ವಯಸ್ಸಿನ ಹುಡುಗಿ ಜೊತೆ ಲವ್ವಿ ಡವ್ವಿ ಅಂತ ಶುರು ಮಾಡಿದ್ದಾನೆ. ಅಷ್ಟೇ ಅಲ್ಲದೇ ಆ ಯುವತಿಯ ತಲೆಕೆಡಿಸಿ ಆಕೆಯೊಂದಿಗೆ ಆ ಅಂಕಲ್ ಊರು ಬಿಟ್ಟು ಪರಾರಿಯಾಗಿದ್ದಾನೆ.

ಇದನ್ನೂ ಓದಿ: ಕೊಡಗು: 14 ದಿನದ ಮಗುವನ್ನು ಬಿಟ್ಟು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಮಹಿಳೆ!!

18 ವರ್ಷ ಹುಡುಗಿ ಜೊತೆಗೆ 50 ವರ್ಷದ ಅಂಕಲ್ ಲವ್ವಿ ಡವ್ವಿ ಶುರು ಮಾಡಿದ್ದಾನೆ. ಎರಡು ಮಕ್ಕಳ ತಂದೆಯಾಗಿರುವ ಅಂಕಲ್‌ನ ಪ್ರೇಮ ಪಾಷದಲ್ಲಿ 18 ವರ್ಷದ ಯುವತಿ ಬಿದ್ದಿದ್ದಾಳೆ. ಅಜ್ಜಿ ಮನೆಗೆ ಹೋಗಿದ್ದ ಹುಡುಗಿ ನಾಪತ್ತೆಯಾಗಿದ್ದಾಳೆ. ಪೋಷಕರು ಕಣ್ಣೀರು ಹಾಕುತ್ತ ಬೀದಿ ಬೀದಿಗಳಲ್ಲಿ ಮಗಳ ಪೋಟೋ ಹಿಡಿದು ಹುಡುಕುತ್ತಿದ್ದಾರೆ.

ಆ ಯುವತಿಯ ಬಡತನವನ್ನೇ ಬಂಡವಾಳ ಮಾಡಿಕೊಂಡಿದ್ದ ಅಂಕಲ್ ಆಕೆಯ ತಲೆ ಕೆಡಿಸಿದ್ದಾನೆ. ಯುವತಿಯ ತಂದೆ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುತ್ತಾರೆ. ಅಂಕಲ್ ಪ್ರಕಾಶ್ ಗೆ ಮದುವೆಯಾಗಿ ಈಗಾಗಲೇ ಇಬ್ಬರು ಮಕ್ಕಳಿದ್ದಾರೆ. ಹೀಗಿದ್ದರೂ ಎರಡು ಮೂರು ವರ್ಷದ ಹಿಂದೆ ಯುವತಿಯ ಹಿಂದೆ ಬಿದ್ದಿದ್ದನು. ಇದೀಗ ಆಕೆಯೊಂದಿಗೆ ಪರಾರಿಯಾಗಿದ್ದಾನೆ. ಇಂದಿಗೆ 40 ದಿನವಾದ್ರೂ ಯುವತಿ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

Leave a Reply

Your email address will not be published. Required fields are marked *