ಬೆಂಗಳೂರು:(ಫೆ.14) ಮಕ್ಕಳ ಹೆಸರು ಬದಲಾವಣೆಗೆ ಇನ್ನು ಮು೦ದೆ ನ್ಯಾಯಾಲಯದಲ್ಲಿ ದಾವೆ ಹೂಡಬೇಕಾಗಿಲ್ಲ ಎಂಬ ಮಹತ್ತರವಾದ ತೀರ್ಪನ್ನು ಕರ್ನಾಟಕ ಉಚ್ಚನ್ಯಾಯಾಲಯ ಹೊರಡಿಸಿದೆ.

ಇದನ್ನೂ ಓದಿ: ಸುರತ್ಕಲ್: ರಸ್ತೆ ಬದಿ ನಿಲ್ಲಿಸಿದ್ದ ಟ್ಯಾಂಕರ್ ಚಲಿಸಿ ಸರಣಿ ಅಪಘಾತ
ರಿಜಿಸ್ಟ್ರಾರ್ ನಿರಾಕರಣೆ ನ್ಯಾಯಸಮ್ಮತವಲ್ಲ :

ಜನನ ಪ್ರಮಾಣಪತ್ರದ ತಿದ್ದುಪಡಿಯ ಕುರಿತು ರಿಜಿಸ್ಟ್ರಾರ್ ನೀಡಿದ ನಿರಾಕರಣೆ, 1969 ರ ಜನನ ಮತ್ತು ಮರಣಗಳ ನೋಂದಣಿ ಕಾಯ್ದೆ ಮತ್ತು 1999 ರ ಕರ್ನಾಟಕ ಜನನ ಮತ್ತು ಮರಣಗಳ ನೋಂದಣಿ ನಿಯಮಗಳ ಕಠಿಣ ಅರ್ಥೈಸುವಿಕೆಯ ಆಧಾರದ ಮೇಲೆ ಮಾಡಲಾಗಿತ್ತು.



ಹೆಸರಿನ ಬದಲಾವಣೆಗಾಗಿ ಸ್ಪಷ್ಟವಾದ ಕಾನೂನುಬದ್ಧ ವ್ಯವಸ್ಥೆಯ ಕೊರತೆ ಇದ್ದರೂ, ಅನವಶ್ಯಕ ತೊಂದರೆಗಳನ್ನು ತಡೆಗಟ್ಟಲು ನ್ಯಾಯೋಚಿತ ಮನೋಭಾವದ ಅವಶ್ಯಕತೆ ಇರುವುದನ್ನು ನ್ಯಾಯಾಲಯ ಒತ್ತಿಹೇಳಿದೆ. ಇನ್ನು ಮುಂದೆ ಮಕ್ಕಳ ಹೆಸರು ಬದಲಾವಣೆಗಾಗಿ ಪೋಷಕರು ಅಲೆದಾಡುವ ಪ್ರಮೇಯವು ಇರುವುದಿಲ್ಲ.

