ಕುಂದಾಪುರ:(ಫೆ.14) ಕುಂದಾಪುರ ಸೌಹಾರ್ದ ಕ್ರೆಡಿಟ್ ಕೋ – ಆಪರೇಟಿವ್ ಲಿಮಿಟೆಡ್‌ನಿಂದ ಠೇವಣಿದಾರರಿಗೆ ಹಣವನ್ನು ವಾಪಸ್ ನೀಡದೆ ಕೋಟ್ಯಂತರ ರೂ. ಮೋಸ ಮಾಡಿರುವ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಉಜಿರೆ: ಶ್ರೀ ಜನಾರ್ದನ ಸ್ವಾಮಿ ವಿಜಯಗೋಪುರದ ಶಿಲಾನ್ಯಾಸ ಕಾರ್ಯಕ್ರಮಕ್ಕೆ
ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಶಿವಾನಂದ, ನಿರ್ದೇಶಕರುಗಳಾದ ಪ್ರಕಾಶ್ ಲೋಬೋ, ಮಹೇಶ ಲಕ್ಷ್ಮಣ ಕೊತ್ವಾಲ, ವಿಠಲ, ಅವಿನಾಶ ಪಿಂಟೋ, ಕೆ.ರಾಜೇಶ ದೈವಜ್ಞ, ಎಚ್.ಮಹಾಬಲ, ರತ್ನಾಕರ, ದಯಾನಂದ, ಮರ್ವಿನ ಫೆರ್ನಾಂಡಿಸ್,



ಸರೋಜ, ಸುಧಾಕರ, ಗೋಪಾಲ, ಡಾ.ದಿನಕರ ಸೇರಿಕೊಂಡು ಒಳಸಂಚು ರೂಪಿಸಿ ಸುಮಾರು 44 ಮಂದಿಯ ಒಟ್ಟು 7,25,24,831ರೂ. ಠೇವಣಿ ಹಣವನ್ನು ವಾಯಿದೆ ಮುಗಿದರೂ ವಾಪಸ್ ನೀಡದೆ ನಂಬಿಕೆ ದ್ರೋಹ ಮತ್ತು ಮೋಸ ಮಾಡಿರುವುದಾಗಿ ದೂರಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

