ಬೆಳ್ತಂಗಡಿ:(ಫೆ.14) ಡಿಸೆಂಬರ್ 16, 2023 ರಲ್ಲಿ ‘ಕರ್ನಾಟಕ ರಾಜ್ಯ ಪ್ರಥಮ ಮಂದಿರ ಅಧಿವೇಶನ’ ಬೆಂಗಳೂರಿನಲ್ಲಿ ನಡೆದಿತ್ತು. ಅದೇ ರೀತಿ ಗೋವಾ, ಮಹಾರಾಷ್ಟ್ರ ರಾಜ್ಯಗಳಲ್ಲಿಯೂ ಈ ಅಧಿವೇಶನಗಳು ನಡೆದಿವೆ. ಅದರ ನಂತರ ಮಹಾಸಂಘದ ಕಾರ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಎರಡು ವರ್ಷದಲ್ಲಿ ಸಂಪೂರ್ಣ ದೇಶದಾದ್ಯಂತ ತಲುಪುತ್ತಿದೆ.

ಇದನ್ನೂ ಓದಿ: ಉಡುಪಿ: ಬ್ರಹ್ಮಾವರ ಮೂಲದ ಇಂಜಿನಿಯರ್ ಗಂಗಾವತಿಯಲ್ಲಿ ಆತ್ಮಹತ್ಯೆ
ಕರ್ನಾಟಕ ಮಂದಿರ ಮಹಾಸಂಘದ ಮಾಧ್ಯಮದಿಂದ ರಾಜ್ಯದ 800 ಕ್ಕೂ ಹೆಚ್ಚಿನ ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಜಾರಿಗೊಳಿಸಲಾಗಿದೆ, ಹಾಗೂ 15 ಸಾವಿರಗಿಂತಲೂ ಹೆಚ್ಚಿನ ದೇವಸ್ಥಾನಗಳ ಸಂಘಟನೆಯಾಗಿದೆ.
ಮಂದಿರ ವಿಶ್ವಸ್ಥರ ಸಂಘಟನೆ, ಮಂದಿರಗಳ ಸುವ್ಯವಸ್ಥಾಪನೆ, ಮಂದಿರಗಳ ಸುರಕ್ಷತೆ ಮತ್ತು ಮಂದಿರಗಳನ್ನು ಸನಾತನ ಧರ್ಮಪ್ರಚಾರದ ಕೇಂದ್ರಗಳನ್ನಾಗಿಸುವುದು.


ರಾಮ ಮಂದಿರದ ನಿರ್ಮಾಣವಂತೂ ಆಯಿತು ಆದರೆ ಕಾಶಿ ಮಥುರಾದೊಂದಿಗೆ ಸಂಪೂರ್ಣ ದೇಶದ 4 ಲಕ್ಷಕಕ್ಕೂ ಅಧಿಕ ಮಂದಿರಗಳು ಸರಕಾರದ ನಿಯಂತ್ರಣದಲ್ಲಿದೆ. ಅವುಗಳನ್ನು ಮುಕ್ತಗೊಳಿಸಿ ಭಕ್ತರ ಕೈಗೊಪ್ಪಿಸುವ ಮುಖ್ಯ ಉದ್ದೇಶದೊಂದಿಗೆ ಮಂದಿರ ಮಹಾಸಂಘವು ಕಾರ್ಯ ಮಾಡುತ್ತಿದೆ.

ಕರ್ನಾಟಕ ಮಂದಿರ ಮಹಾಸಂಘ ಮತ್ತು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ‘ತಾಲೂಕು ಮಟ್ಟದ ಮಂದಿರ ಅಧಿವೇಶನ’ ವು 15 ಫೆಬ್ರವರಿ 2025 ರಂದು ಬೆಳ್ತಂಗಡಿಯಲ್ಲಿ ಆಯೋಜಿಸಲಾಗಿದೆ. ಇದರಲ್ಲಿ ದೇವಸ್ಥಾನಗಳು ಸರಕಾರಿಕರಣದಿಂದ ಮುಕ್ತಗೊಳಿಸುವುದು.

ಅಹಿಂದೂಗಳ ಪ್ರವೇಶವನ್ನು ನಿಷೇಧಿಸುವುದು, ದೇವಸ್ಥಾನಗಳನ್ನು ಸನಾತನ ಧರ್ಮಪ್ರಚಾರದ ಕೇಂದ್ರಗಳನ್ನಾಗಿ ಮಾಡುವುದು, ವಕ್ಫ್ ಕಾನೂನಿನ ಮೂಲಕ ದೇವಸ್ಥಾನಗಳ ಜಾಗದ ಅತಿಕ್ರಮಣ ಮತ್ತು ದೇವಸ್ಥಾನ ಭೂಕಬಳಿಕೆಯ ಕುರಿತು ಉಪಾಯ, ದೇವಸ್ಥಾನಗಳು ಮತ್ತು ತೀರ್ಥಕ್ಷೇತ್ರಗಳ ಪರಿಸರದಲ್ಲಿ ಮದ್ಯಮಾಂಸ ನಿಷೇಧ, ನಿರ್ಲಕ್ಷಿತ ದೇವಸ್ಥಾನಗಳ ಜೀರ್ಣೋದ್ಧಾರ ಮುಂತಾದ ವಿಷಯಗಳ ಕುರಿತು ಚರ್ಚೆ ನಡೆಯಲಿದೆ.
ಈ ಅಧಿವೇಶನ ಕೇವಲ ಆಮಂತ್ರಿತರಿಗಾಗಿ ಇದ್ದು ಅದರಲ್ಲಿ ಸಹಭಾಗಿಯಾಗಲು 7204082609 ಈ ಕ್ರಮಾಂಕಕ್ಕೆ ಸಂಪರ್ಕಿಸಬೇಕು, ಎಂದು ಮಂದಿರ ಮಹಾಸಂಘದಿಂದ ಕರೆ ನೀಡಲಾಗಿದೆ.
