ಸುಳ್ಯ :(ಫೆ.15) ಹಲವು ದಿನಗಳ ಹಿಂದೆ ರಾಜ್ಯ ಸರ್ಕಾರ, ಕಡಬ ಮಾರ್ಗವಾಗಿ ಶಾಂತಿಮೊಗೇರು ಪುತ್ತೂರು ಬಸ್ಸನ್ನು ಸ್ಥಗಿತ ಮಾಡಿತ್ತು. ಹಾಗಾಗಿ ಕಡಬ ವ್ಯಾಪ್ತಿಯ ಹಲವು ವಿದ್ಯಾರ್ಥಿಗಳಿಗೆ ಬಸ್ ಸಮಸ್ಯೆ ಆಗಿತ್ತು, ವಿದ್ಯಾರ್ಥಿಗಳು ಮನೆಗೆ ತಲುಪುವಾಗ ರಾತ್ರಿ ಆಗುತ್ತಿತ್ತು.

ಹಾಗಾಗಿ ವಿದ್ಯಾರ್ಥಿಗಳು ಇದರ ಬಗ್ಗೆ ಬಿಜೆಪಿ ಯುವ ಮೋರ್ಚಾ ಸುಳ್ಯ ಮಂಡಲ ಸದಸ್ಯ ಸುಪ್ರೀತ್ ಅಮೈ ರವರಿಗೆ ವಿಷಯ ತಿಳಿಸಿದ್ದರು.




ನಂತರ ಬಿಜೆಪಿ ಯುವ ಮೋರ್ಚಾ ಪುತ್ತೂರು ನಗರ ಮಂಡಲ ಅಧ್ಯಕ್ಷ ನಿತೇಶ್ ಕಲ್ಲೇಗ ಜೊತೆಗೂಡಿ ಸಂಸದರಿಗೆ ವಿಷಯವನ್ನು ತಿಳಿಸಿದ್ದರು. ವಿಷಯ ತಿಳಿದ ತಕ್ಷಣ ವಿದ್ಯಾರ್ಥಿಗಳಿಗೆ, ಕೆಎಸ್ಆರ್ ಟಿ ಸಿ ಅಧಿಕಾರಿಗ ಳ ಜೊತೆ ಮಾತುಕತೆ ನಡೆಸಿ ಬಸ್ಸಿನ ವ್ಯವಸ್ಥೆ ಮಾಡಿದ್ದಾರೆ.
