Sun. Feb 23rd, 2025

Karkala: ಚಾರ್ಜ್ ಗಿಟ್ಟ ಮೊಬೈಲ್ ಸ್ಫೋಟ- ಇಡೀ ಮನೆ ಬೆಂಕಿಗಾಹುತಿ ..!

ಕಾರ್ಕಳ:(ಫೆ.17) ಚಾರ್ಜ್‌ ಗಿಟ್ಟ ಮೊಬೈಲ್ ಸ್ಫೋಟಿಸಿ ಇಡೀ ಮನೆ ಬೆಂಕಿಗಾಹುತಿಯಾಗಿರುವ ಘಟನೆ ತೆಳ್ಳಾರು ರಸ್ತೆ 11ನೇ ಕ್ರಾಸ್, ಮರತ್ತಪ್ಪ ಶೆಟ್ಟಿ ಕಾಲೋನಿಯ ಕಿಶೋರ್ ಕುಮಾರ್ ಶೆಟ್ಟಿ ಎಂಬವರ ಮನೆಯಲ್ಲಿ ನಡೆದಿದೆ.

ಇದನ್ನೂ ಓದಿ: ಕಕ್ಕಿಂಜೆ : ಏಕಾಏಕಿ ಹೃದಯಾಘಾತ ಸಂಭವಿಸಿ ಬ್ರೈನ್‌ ಸ್ಟ್ರೋಕ್‌

ಬೆಳಗ್ಗಿನ ಜಾವ ನಾಲ್ಕು ಗಂಟೆಯ ವೇಳೆಗೆ ನಗರದ ಚಾರ್ಜ್ ಗಿಟ್ಟ ಮೊಬೈಲ್ ಸ್ಫೋಟಗೊಂಡು ಇಡೀ ಮನೆಗೆ ಬೆಂಕಿ ಹತ್ತಿಕೊಂಡಿದೆ. ಎರಡು ಅಂತಸ್ತಿನ 6 ಬೆಡ್‌ ರೂಮ್ ಗಳನ್ನೊಳಗೊಂಡ

ಮನೆಯ ಕೋಣೆಗಳಿಗೆಲ್ಲ ಬೆಂಕಿ ಆವರಿಸಿದ್ದು‌, ತಕ್ಷಣವೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿಗಳು ಎರಡೂವರೆ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಲು ಹರಸಾಹಸಪಟ್ಟರು.

ಮನೆಯಲ್ಲಿ ಎಸಿ ಆನ್ ಇದ್ದ ಕಾರಣ ಬೆಂಕಿಯ ಕಿಡಿ ಮನೆ ತುಂಬೆಲ್ಲಾ, ಅವರಿಸಿದ್ದು ಪರಿಣಾಮ ಟಿವಿ, ಕಿಟಕಿ, ಫ್ಯಾನ್, ಮೊಬೈಲ್, ಇಂಟೀರಿಯರ್, ಸೋಫಾ ಸೇರಿದಂತೆ ವಿವಿಧ ಪೀಠೋಪಕರಣಗಳು ಬೆಂಕಿಗಾಹುತಿಯಾಗಿ ಸುಮಾರು 7 ಲಕ್ಷ ರೂ ನಷ್ಟ ಉಂಟಾಗಿದೆ.

ಈ ಅವಘಡ ಸಂಭವಿಸಿದಾಗ ಮನೆಯ ಮಾಲೀಕ ಕಿಶೋ‌ರ್ ಕುಮಾ‌ರ್ ಶೆಟ್ಟಿ ಅವರು ಮನೆಯಲ್ಲಿಯೇ ಇದ್ದು ಸಣ್ಣ ಪುಟ್ಟ ಗಾಯಗಳಾಗಿ ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *